ಬೀದರ್: ಜಾತ್ರೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಮುಸ್ಲಿಂ ಬಾಂಧವರ ವ್ಯಾಪಾರಕ್ಕೆ ಬ್ರೇಕ್ ಹಾಕಿ ಧರ್ಮದ ದಂಗಲ್ ಪ್ರಾರಂಭವಾಗಿದೆ. ಆದರೆ ಗಡಿ ಜಿಲ್ಲೆ ಬೀದರ್‌ನಲ್ಲಿ ಹಿಂದೂ-ಮುಸ್ಲಿಂ ಧರ್ಮಿಯರು ಐತಿಹಾಸಿಕ ಜಾತ್ರೆಯಲ್ಲಿ ಒಟ್ಟಾಗಿ ವ್ಯಾಪಾರ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶಕ್ಕೆ ಸಾಕ್ಷಿಯಾಗಿದ್ದಾರೆ.
ಬೀದರ್ ತಾಲೂಕಿನ ಅಷ್ಟೂರು ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ಜನರು ಒಟ್ಟಿಗೆ ದರ್ಗಾದಲ್ಲಿ ಪೂಜೆ ಹಾಗೂ ವ್ಯಾಪಾರ ಮಾಡುವ ಮೂಲಕ ನಾವೆಲ್ಲಾ ಒಂದೇ ಎನ್ನುವ ಸಂದೇಶ ಸಮಾಜಕ್ಕೆ ಸಾರಿದ್ದಾರೆ. ಇದನ್ನೂ ಓದಿ: ಥಿಯೇಟರ್ ಮುಂದೆ ರಾರಾಜಿಸಲು ಯಶ್ ಕಟೌಟ್ ರೆಡಿ: ಗ್ರೌಂಡ್ ರಿಪೋರ್ಟ್
Advertisement
Advertisement
ಹಿಂದೂ ಧಾರ್ಮಿಕ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯವಹಾರ ಮಾಡಲು ಜನರು ತಡೆಯೊಡ್ಡಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ನಮ್ಮ ಮುಸ್ಲಿಂ ಬಾಂಧವರ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ ಇಲ್ಲಿ ನಮ್ಮ ವ್ಯಾಪಾರಕ್ಕೆ ಬ್ರೇಕ್ ಹಾಕಿಲ್ಲ. ಹಿಂದೂ-ಮುಸ್ಲಿಂ ಧರ್ಮಿಯರು ಒಟ್ಟಾಗಿ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದೆವೆ ಎನ್ನುತ್ತಾರೆ ಇಲ್ಲಿನ ಜನತೆ. ಇದನ್ನೂ ಓದಿ: ಪ್ರಶ್ನೆ ಎದುರಿಸಲಾಗದವರು ಮಾನನಷ್ಟ ಮೊಕದ್ದಮೆ ಮೊರೆ ಹೋಗ್ತಾರೆ: ಡಿಎಂಕೆ ವಿರುದ್ಧ ಅಣ್ಣಾಮಲೈ ಕಿಡಿ
Advertisement