ಬೆಂಗಳೂರು: ಸ್ನೇಹಿತರ ಜೊತೆ ಆಟ ಆಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ರಸ್ತೆ ಗುಂಡಿ (Potholes) ತಪ್ಪಿಸೋಕ್ಕೆ ಅಂತ ಹೋಗಿ ಗಂಭೀರಗೊಂಡು ವಿದ್ಯಾರಣ್ಯಪುರದ ನಿವಾಸಿ ಸಂದೀಪ್ (Sandeep0 ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ ಗೆದ್ದಿದ್ದು, ಇದೀಗ ಆಸ್ಪತ್ರೆ ಬಿಲ್ ಕಟ್ಟಲಾಗದೆ ಪತ್ನಿ ಹಾಗೂ ಕುಟುಂಬ ಪರದಾಡುತ್ತಿದ್ದಾರೆ.
Advertisement
ಹೌದು. ಕೆಲವು ದಿನಗಳ ಹಿಂದೆಯಷ್ಟೇ ವಿದ್ಯಾರಣ್ಯಪುರ 9Vidyaranypura) ದ ನಿವಾಸಿ ಸಂದೀಪ್ ಫ್ರೆಂಡ್ಸ್ ಗಳ ಜೊತೆ ಕ್ರಿಕೆಟ್ ಆಡಿಕೊಂಡು ಜಾಲಹಳ್ಳಿಯ ಗಂಗಮ್ಮ ರಸ್ತೆ ಮಾರ್ಗವಾಗಿ ಬೈಕ್‍ನಲ್ಲಿ ಬರುತ್ತಿದ್ದರು. ಆದರೆ ಅದೇ ದಾರಿಯಲ್ಲಿ ಯಮವಾಗಿದ್ದ ಗುಂಡಿಯೊಂದನ್ನ ತಪ್ಪಿಸಲು ಹೋದ ಸಂದೀಪ್, ಕೆಳಗೆ ಬಿದ್ದು ಗಂಭೀರ ಗಾಯವಾಗಿ ಹತ್ತಿರದ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಸಂದೀಪ್ ಪತ್ನಿ ಸೀಮಾ ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆ (Jalahalli Police Station) ಯಲ್ಲಿ ಬಿಬಿಎಂಪಿ ವಿರುದ್ಧ ದೂರು ಕೂಡ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಮಸ್ವರೂಪಿ ರಸ್ತೆ ಗುಂಡಿ ಅವಾಂತರ – ಬೈಕ್‌ನಿಂದ ಬಿದ್ದು ವ್ಯಕ್ತಿ ಕೋಮಾ
Advertisement
Advertisement
ಇತ್ತ ಚಿಂತಾಜನಕ ಸ್ಥಿತಿ ತಲುಪಿ ಸಾವು-ಬದುಕು ನಡುವೆ ಹೋರಾಡ್ತಿದ್ದ ಸಂದೀಪ್ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಮ್ಮ ಬಿಬಿಎಂಪಿ (BBMP) ಅಧಿಕಾರಿಗಳು ಮಾಡಿರೋ ಬೇಜವಾಬ್ದಾರಿ ಕೆಲಸಕ್ಕೆ ಬೈಕ್ ಸವಾರ ಸಂದೀಪ್ ಆಸ್ಪತ್ರಗೆ ಕಟ್ಟಿದ್ದು ಬರೋಬ್ಬರಿ 14 ಲಕ್ಷ ಹಣ. ಮಧ್ಯಮ ವರ್ಗ ಕುಟುಂಬದವರಾಗಿರೋ ಸಂದೀಪ್ ಕುಟುಂಬ ಈಗ ಹೆಚ್ಚಿನ ಚಿಕಿತ್ಸೆಗೆ ಹಣ (Money For Treatment) ಇಲ್ಲದೆ ಪರದಾಡ್ತಿದ್ದಾರೆ.
Advertisement
ಸಂದೀಪ್ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನೇನೋ ಗೆದ್ದಿದ್ದಾರೆ. ಆದರೆ ಸಂದೀಪ್‍ಗಾಗಿ ಪರಿತಪಿಸ್ತಿರುವ ಪತ್ನಿ ಸೀಮಾ ಇನ್ನೂ ಕಂಗಾಲಾಗಿದ್ದಾರೆ. ಸಂದೀಪ್ ಪತ್ನಿ ಸೀಮಾ ಗೋಳಾಡ್ತಾ ಮಾತನಾಡಿ, ಒಂದೆಡೆ ನಿಮ್ಹಾನ್ಸ್ (Nimhans Hospital) ಗೆ ಶಿಫ್ಟ್ ಮಾಡೋಣ ಅಂದ್ರೆ ಅಲ್ಲಿ ಬೆಡ್ (Hospital Bed) ಇಲ್ಲ. ಇಎಸ್‍ಐ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ವಂತೆ. ನಮಗೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ನಮ್ಮ ಸಹಾಯಕ್ಕೆ ಬರ್ತಿಲ್ಲ ಅಂತ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.
ಪ್ರತಿಯೊಂದು ಆಸ್ಪತ್ರೆಯಲ್ಲಿ ಕೂಡ ಹಾಸಿಗೆ ಇಲ್ಲ, ತಜ್ಞ ವೈದ್ಯರು ಇಲ್ಲ ಹೀಗಂಥ ಸಬೂಬು ಹೇಳಿ ಕಾಲ ದೂಡುತ್ತಾ ಇದ್ದಾರೆ. ಇತ್ತ ಕೈಯಲ್ಲಿ ಕಾಸು ಇಲ್ಲ. ಅತ್ತ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಕೂಡ ಸಿಗ್ತಾ ಇಲ್ಲ. ಏನೇ ಆಗ್ಲಿ ನಮ್ಮ ಸರ್ಕಾರ ನೊಂದವರ ಪರ ಜನಸಾಮಾನ್ಯರ ಆಶಾಕಿರಣ ಅಂತ ಎದೆ ತಟ್ಟಿ ಹೇಳಿಕೊಳ್ಳುವ ನಮ್ಮ ಜನ ನಾಯಕರು ಇಂಥ ಜನರ ಪಾಲಿಗೆ ಏನ್ ನೆರವಾಗ್ತಾರಾ…? ಸಾವನ್ನು ಗೆದ್ದ ಸಂದೀಪ್ ಜೀವನ ಗೆಲ್ಲೋ ಶಕ್ತಿಯನ್ನು ಸರ್ಕಾರ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ