ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ಮಸೂದೆ ವಿರುದ್ಧ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರಿಗೆಗೆ ಮುಷ್ಕರದ ಬಿಸಿ ತಟ್ಟಿಲ್ಲ. ನಗರದ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಮೆಟ್ರೋ ಟ್ರೈನ್ ಬೆಳಗ್ಗೆ ಎಂದಿನಂತೆ ಸಂಚಾರ ಶುರು ಮಾಡಿವೆ.
ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಬರಬೇಕಾದ ಬಸ್‍ಗಳು ಸಿಟಿಗೆ ಎಂಟ್ರಿ ಕೊಟ್ಟಿವೆ. ಬೆಳಗ್ಗೆ 10 ಗಂಟೆಗೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಂಘಟನೆಗಳಿಂದ ಟೌನ್ ಹಾಲ್ ನಿಂದ ಫ್ರೀಡ್‍ಂಪಾರ್ಕ್ ವರೆಗೂ ಪ್ರತಿಭಟನಾ ಜಾಥಾ ನಡೆಯಲಿದೆ. ಇದರಲ್ಲಿ ಕೆಲ ಸಾರಿಗೆ ಸಂಘಟನೆಗಳು, ಓಲಾ, ಊಬರ್ ಚಾಲಕರು ಮತ್ತು ಮಾಲೀಕರು ಭಾಗಿಯಾಗಲಿದ್ದಾರೆ.
Advertisement
Advertisement
2017ರಲ್ಲಿ ಲೋಕಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆಯಾಗಿರುವ ಪರಿಷ್ಕೃತ ಮೋಟಾರು ವಾಹನ ಕಾಯ್ದೆ-2016 ರಲ್ಲಿ ಏನೇನಿದೆ? ಯಾವುದಕ್ಕೆ ಎಷ್ಟು ದಂಡ? ಹಳೇ ದಂಡ ಎಷ್ಟು? ಹೊಸ ದಂಡ ಎಷ್ಟು?
* ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ – 1,000(ಹಳೇ ದಂಡ) – ರೂ. 5,000 ರೂ. ಹೊಸ ದಂಡ)
* ಸಿಗ್ನಲ್ ಜಂಪ್- 200 ರೂ.(ಹಳೇ ದಂಡ)- 1,000 ರೂ. ಹೊಸ ದಂಡ)
* ಡ್ರಂಕ್ & ಡ್ರೈವ್- 2,000 ರೂ.(ಹಳೇ ದಂಡ)- 10,000ರೂ. (10ವರ್ಷದವರೆಗೆ ಶಿಕ್ಷೆ) (ಹೊಸ ದಂಡ)
Advertisement
* ಹೆಲ್ಮೆಟ್, ಸೀಟ್‍ಬೆಲ್ಟ್ ಇಲ್ಲ- 100 ರೂ.(ಹಳೇ ದಂಡ)- 1,000 ರೂ. (ಹೊಸ ದಂಡ)
* ಟಿಕೆಟ್ ಇಲ್ಲದ ಪ್ರಯಾಣ- 200 ರೂ(ಹಳೇ ದಂಡ). – 500 ರೂ. (ಹೊಸ ದಂಡ)
* ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ – 1,000 ರೂ.ಹಳೇ ದಂಡ)- 5,000 ರೂ. (ಹೊಸ ದಂಡ)
* ಬೈಕ್ ವಿಲ್ಹೀಂಗ್ 1,000 ರೂ.ಹಳೇ ದಂಡ)- 10,000 ರೂ.(ಹೊಸ ದಂಡ)
Advertisement
ಇದರ ಜೊತೆಗೆ…
* ಅಂಬುಲೆನ್ಸ್ ಗೆ ದಾರಿ ಬಿಡದಿದ್ದರೆ 10,000 ರೂ.
* ಸಾರ್ವಜನಿಕ ಪ್ರದೇಶಗಳಲ್ಲಿ ಅತಿ ವೇಗ 2,000 ರೂ.
* ಇನ್ಶೂರೆನ್ಸ್ ಇಲ್ಲದಿದ್ದರೆ 2,000 ರೂ. ದಂಡ
* ಅಪ್ರಾಪ್ತರ ಡ್ರೈವಿಂಗ್ 25 ಸಾವಿರ ದಂಡ, 2 ಜೈಲು ( ವಾಹನದ ಮಾಲೀಕರಿಗೆ)
* ಗೂಡ್ಸ್ ವಾಹನಗಳಿಗೆ ಹೆವೀ ಲೋಡ್ 20,000 ದಂಡ ಜೊತೆಗೆ ಪ್ರತಿ ಟನ್‍ಗೂ 2 ಸಾವಿರ ಎಕ್ಸ್ ಟ್ರಾ ಫೈನ್
* ವಾಹನದ ಆಲ್ಟ್ರೇಷನ್ 5,000 ರೂ. ದಂಡ
* ಅಪಘಾದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ 10 ಲಕ್ಷ ರೂ,ಗಾಯಾಳುಗೆ 5 ಲಕ್ಷಪರಿಹಾರ ಪಾವತಿಸಬೇಕು
* ಹಿಟ್ ಅಂಡ್ ರನ್‍ನಿಂದ ಸಾವನ್ನಪ್ಪಿದರೆ 2 ಲಕ್ಷ, ಗಾಯಾಳುಗೆ 50,000 ಪರಿಹಾರ ಪಾವತಿಸಬೇಕು
* ವಾಹನ ವಿನ್ಯಾಸದಲ್ಲಿ ದೋಷವಾಗಿ ಅಪಘಾತವಾದರೆ ತಯಾರಕರಿಗೆ ಶಿಕ್ಷೆ
* 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಹೆಲ್ಮೆಟ್ ಕಡ್ಡಾಯ
* ರಾಜಕಾರಣಿಗಳು, ವಿಐಪಿಗಳಿಗಳು ಡಿಎಲ್ ಪಡೆಯಲು ಟೆಸ್ಟ್ ಡ್ರೈವ್ ಕಡ್ಡಾಯ
* ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ಕಾರಣಗಳೇನು?
ರಾಜ್ಯ ಸಾರಿಗೆ ನಿಗಮಗಳ ಅಸ್ತಿತ್ವಕ್ಕೆ ಧಕ್ಕೆ, ಸಾರಿಗೆಯಲ್ಲಿ ಖಾಸಗಿ ಕಾರ್ಪೋರೇಟ್ ಕಂಪನಿಗಳ ಕೈವಾಡ ಹಚ್ಚಳವಾಗುತ್ತದೆ. ವಾಹನಗಳಿಗೆ ಪರ್ಮಿಟ್ ನೀಡಿಕೆ, ಸಾರಿಗೆ ನೀತಿ ರೂಪಣೆಯಲ್ಲಿ ಕೇಂದ್ರದ ಹಸ್ತಕ್ಷೇಪ ಹೆಚ್ಚಾಗುತ್ತದೆ. ಅಗ್ರಿಗೇಟರ್ ಲೈಸೆನ್ಸ್ ರಾಜ್ಯ ನೀಡಿದರೂ, ಕೇಂದ್ರದಿಂದ ಮಾನದಂಡ ನಿಗದಿ. ಇದರಿಂದ ಬಿಡಿ ವಾಹನ ಮಾಲೀಕರಿಗೆ, ಚಾಲಕರಿಗೆ ಕಷ್ಟವಾಗಲಿದೆ. ಮಸೂದೆ ಜಾರಿಯಾದರೆ ಡ್ರೈವಿಂಗ್ ಲೈಸೆನ್ಸ್, ನೋಂದಣಿ, ನವೀಕರಣ, ಫಿಟ್ನೆಸ್ ಸರ್ಟಿಫಿಕೇಟ್ ನಲ್ಲಿ ಕಾರ್ಪೋರೇಟ್ ಆಟೊಮೊಬೈಲ್ ಕಂಪನಿ ಹಿಡಿತವಾಗಲಿದ್ದು, ದುಬಾರಿ ಶುಲ್ಕ ಸುಲಿಗೆ ಮಾಡುವ ಸಾಧ್ಯತೆ ಇದೆ. ದಂಡದ ಪ್ರಮಾಣ ಸಿಕ್ಕಾಪಟ್ಟೆ ಏರಿಕೆಗೆ ವಿರೋಧಿಸಿ ಇಂದು ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews