ಚಂಡೀಗಢ: ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರ ಬಗ್ಗೆ ಮಧ್ಯರಾತ್ರಿಯ ವಿಚಾರಣೆಯಲ್ಲಿ ಮೇ 10ರ ವರೆಗೆ ಅವರನ್ನು ಬಂಧಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಗ್ಗಾ ಮನವಿ ಮೇರೆಗೆ ಪ್ರಕರಣದ ಬಗೆಗಿನ ವಿಚಾರಣೆ ಮೇ 10ರಂದು ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಆದೇಶ ನೀಡಿದೆ. ಇದನ್ನೂ ಓದಿ: ಮಸೀದಿಗಳ ಮೈಕ್ ತೆರವಿಗೆ ನಾಳೆಯೇ ಡೆಡ್‍ಲೈನ್ – ದೇಗುಲಗಳಲ್ಲಿ 3 ಬಾರಿ ಮಂತ್ರ ಘೋಷ
Advertisement
Advertisement
ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪಂಜಾಬ್‌ನ ಪೊಲೀಸರು ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರು. ದೆಹಲಿ ಮುಖ್ಯಮಂತ್ರಿ ಅವರಿಗೆ ಜೀವ ಬೆದರಿಕೆ ಹಾಕದ್ದ ಹಿನ್ನೆಲೆಯಲ್ಲಿ ಆಪ್ ನಾಯಕ ಸನ್ನಿಸಿಂಗ್ ಅವರು ತಜೀಂದರ್ ಪಾಲ್ ಸಿಂಗ್ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವದಂತಿಗಳನ್ನು ಹರಡುತ್ತಿದ್ದಾರೆ. ಧಾರ್ಮಿಕ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ದಡೂತಿ ದೇಹದ ಪೊಲೀಸರಿಗೆ ಬಾಡಿ ಕರಗಿಸೋ ಟಾಸ್ಕ್ – ಬೆಸ್ಟ್ ಆಫರ್ ಕೊಟ್ಟ ಎಸ್‌ಪಿ
Advertisement
Advertisement
ಬಗ್ಗಾ ವಿರುದ್ಧ ಭಾರತೀಯ ದಂಡಸಂಹಿತೆ 153-ಎ(ಧರ್ಮ, ಜನಾಂಗ, ಸ್ಥಳ ಮುಂತಾದವುಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505(ಯಾವುದೇ ಹೇಳಿಕೆ, ವದಂತಿ ಅಥವಾ ವರದಿ ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಹಾಗೂ 506(ಬೆದರಿಕೆ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.