ಬೆಳಗಾವಿ: ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳಿವೆ. ಇಲ್ಲಿಗೆ ಕಬ್ಬು ಕಳುಹಿಸುವ ರೈತರು ಪ್ರತಿ ವರ್ಷ ಹೋರಾಟ ಮಾಡಿ ಇಲ್ಲವೇ ಸಕ್ಕರೆ ಕಾರ್ಖಾನೆಗೆ ಅಲೆದು ಅಲೆದು ಹಣ ಪಡೆಯುವ ಸ್ಥಿತಿ ಮಾತ್ರ ತಪ್ಪುತ್ತಿಲ್ಲ. ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಣ ಕೊಡದ 9 ಸಕ್ಕರೆ ಕಾರ್ಖಾನೆಗಳ ಮುಟ್ಟುಗೋಲಿಗೆ ಆದೇಶ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಬಾಕಿ ಹಣ ಉಳಿಸಿಕೊಂಡು ಬಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ಮಾತ್ರ ಯಾವುದೇ ಕ್ರಮವಾಗಿಲ್ಲ. ಜಿಲ್ಲಾಧಿಕಾರಿಗಳ ಇಬ್ಬಗೆಯ ನೀತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಕುಂದಾನಗರಿ ಬೆಳಗಾವಿಯಲ್ಲಿ ಅತೀ ಹೆಚ್ಚು ಸಕ್ಕರೆ ಕಾಖಾನೆಗಳಿದ್ದು, ಹೆಚ್ಚು ಕಬ್ಬು ಬೆಳೆಯುವ ರೈತರಿದ್ದಾರೆ. ಕಾರ್ಖಾನೆಗಳಿಗೆ ಕಬ್ಬು ಕಳುಹಿಸಿ 6 ತಿಂಗಳು ಕಳೆದರೂ ಇನ್ನೂ ಸಾಕಷ್ಟು ರೈತರಿಗೆ ಕಬ್ಬಿನ ಬಿಲ್ ಸಿಕ್ಕಿಲ್ಲ. ಹೀಗಾಗಿ ರೈತರು ಹೋರಾಟ ನಡೆಸಿದರು. ಇದಾದ ಬಳಿಕ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಕಬ್ಬು ಬಾಕಿ ಪಾವತಿಸದ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕುವಂತೆ ಆದೇಶಿಸಿದರು. ಎಲ್ಲಾ ಕಾರ್ಖಾನೆಗಳಂತೆ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಸಕ್ಕರೆ ಕಾರ್ಖಾನೆ ಕೂಡ 7 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ಆದರೆ ಡಿಸಿಗೆ ಪತ್ರ ಬರೆದು ನಾವು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಅಂತ ತಿಳಿಸಿದೆ. ಜಿಲ್ಲಾಧಿಕಾರಿ ಕೂಡ ಯಾವುದೇ ಪರಿಶೀಲನೆ ನಡೆಸದೆ ಸಕ್ಕರೆ ಆಯುಕ್ತರಿಗೆ ವರದಿ ಕೊಟ್ಟಿದ್ದಾರೆ. ಇದಕ್ಕೆ ರಮೇಶ್ ಜಾರಕಿಹೊಳಿ ಒತ್ತಡವೇ ಕಾರಣ ಅಂತ ಹೇಳಲಾಗ್ತಿದೆ.
Advertisement
Advertisement
ಮುಟ್ಟುಗೋಲು ಹಾಕಲು ಆದೇಶಿಸಿರುವ ಉಳಿದ 9 ಕಾರ್ಖಾನೆಗಳು ಜಾರಕಿಹೊಳಿ ಬ್ರದರ್ಸ್ ಕಾರ್ಖಾನೆ ಲಿಸ್ಟ್‍ನಲ್ಲಿ ಇಲ್ಲ. ಹೀಗಾಗಿಯೇ ಈ ಕಾರ್ಖಾನೆಗಳ ಮುಟ್ಟುಗೋಲು ಹಾಕುವ ಸಾಹಸಕ್ಕೆ ಡಿಸಿ ಕೈ ಹಾಕಿದ್ದಾರೆ ಎಂಬ ಅನುಮಾನ ಮೂಡಿದೆ. 2018ರಲ್ಲಿ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಿದ್ರೂ ಸೌಭಾಗ್ಯ ಸಕ್ಕರೆ ಕಾರ್ಖಾನೆ ಬಾಗಿಲು ಹಾಕಲು ಮುಂದಾಗಿರಲಿಲ್ಲ.
Advertisement
ಬೆಳಗಾವಿ ಜಿಲ್ಲೆಯಲ್ಲಿರುವ 24 ಸಕ್ಕರೆ ಕಾರ್ಖಾನೆಗಳ ಪೈಕಿ ಜನಪ್ರತಿನಿಧಿಗಳ ಸಕ್ಕರೆ ಕಾರ್ಖಾನೆಗಳೇ ಹೆಚ್ಚಾಗಿವೆ. ಹೀಗಾಗಿ ಅವರು ಮಾಡಿದ್ದೇ ರೂಲ್ಸು, ಕೊಟ್ಟಾಗಲೇ ರೈತರು ಹಣ ತೆಗೆದುಕೊಳ್ಳಬೇಕೆಂಬ ನೀತಿ ಇರುವಂತಿದೆ. ಸದ್ಯ 9 ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಡಿಸಿ ಅವರ ನಡೆ ಮೆಚ್ಚುವಂತಹದ್ದೆ, ಆದ್ರೆ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಹಣ ಬರಬೇಕಿದ್ದರೂ ಮರೆ ಮಾಚುತ್ತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]