ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಪರಿಶೀಲಿಸಿದೆ. ಏಕನಾಥ್ ಶಿಂಧೆ ಸರ್ಕಾರ ರಚನೆ ವಿರೋಧಿಸಿ ಉದ್ಧವ್ ಠಾಕ್ರೆ ಬಣ ದಾಖಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
Advertisement
ಇಂದು ಅರ್ಜಿಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ಸಂವಿಧಾನಿಕ ಪೀಠ ರಚನೆ ಮಾಡುವ ಅಗತ್ಯವಿದೆ. ಈ ಕಾರ್ಯಕ್ಕೆ ಸ್ವಲ್ಪ ಸಮಯವಕಾಶ ಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಅರ್ಜಿ ಇತ್ಯರ್ಥವಾಗುವವರೆಗೂ, ಶಿವಸೇನೆಯ ರೆಬೆಲ್ ಶಾಸಕರು, ಮತ್ತು ಉದ್ಧವ್ ಬಣದ ಶಾಸಕರ ಅನರ್ಹತೆಗೆ ಸಂಬಂಧಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ಸ್ಪೀಕರ್‌ಗೆ ಸ್ಪಷ್ಟವಾಗಿ ಸೂಚಿಸಿದೆ. ಇದನ್ನೂ ಓದಿ: ಎಡಿಜಿಪಿ ಬೆದರಿಕೆ ಬಗ್ಗೆ `ಹೈ’ ಆದೇಶದಲ್ಲಿ ಉಲ್ಲೇಖ – ಎಸಿಬಿಗೆ ಕಳಂಕಿತರ ನೇಮಿಸದಂತೆ ಸರ್ಕಾರಕ್ಕೆ ನಿರ್ದೇಶನ
Advertisement
Advertisement
ಹೀಗಾಗಿ ಶಿವಸೇನೆಯ ಎರಡು ಬಣಗಳು ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿವೆ. ಈ ಮಧ್ಯೆ, ವಿಪಕ್ಷ ನಾಯಕನ ಸ್ಥಾನ ತಮಗೆ ಬೇಕೆಂದು ಶಿವಸೇನೆ, ಮಿತ್ರಪಕ್ಷಗಳ ಬಳಿ ಕೇಳಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ 16 ಬಂಡಾಯ ಶಾಸಕರು ತಮಗೆ ಸ್ಪೀಕರ್ ನೀಡಿದ್ದ ಅನರ್ಹತೆ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇನ್ನೊಂದೆಡೆ ಸರ್ಕಾರ ರಚನೆಗೆ ಹಾಗೂ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಶಿಂಧೆಗೆ ನೀಡಿದ್ದ ಆಹ್ವಾನ ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅರ್ಜಿ ಸಲ್ಲಿಸಿತ್ತು. ಇದೇ ವೇಳೆ ನೂತನ ಸ್ಪೀಕರ್ ಶಿವಸೇನೆಯ ಹೊಸ ಮುಖ್ಯ ಸಚೇತಕರನ್ನು ನೇಮಿಸಿದ್ದನ್ನೂ ಶಿವಸೇನೆ ಪ್ರಶ್ನಿಸಿತ್ತು. ಇದನ್ನೂ ಓದಿ: ಜುಲೈ 21ಕ್ಕೆ ಹಾಜರಾಗಿ – ಸೋನಿಯಾ ಗಾಂಧಿಗೆ ಮತ್ತೆ ED ಸಮನ್ಸ್