ಬೆಂಗಳೂರು: ಫಿಫಾ ವಿಶ್ವಕಪ್ (FIFA World Cup 2022) ಎತ್ತಿಹಿಡಿಯುವ ಅರ್ಜೆಂಟಿನಾದ (Argentina) ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಕನಸು ಕಡೆಗೂ ನನಸಾಗಿದೆ. ನಿನ್ನೆ ನಡೆದ ಫ್ರಾನ್ಸ್ (France) ವಿರುದ್ಧದ ರೋಚಕ ಫೈನಲ್‍ನಲ್ಲಿ ಪೆನಾಲ್ಟಿ ಶೂಟೌಟ್‍ನಲ್ಲಿ ಅರ್ಜೆಂಟಿನಾ ಮೇಲುಗೈ ಸಾಧಿಸಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದೆ. ಈ ಸಂಭ್ರಮ 2011ರ ಏಕದಿನ ವಿಶ್ವಕಪ್ (2011 World Cup) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೆ (Sachin Tendulkar) ಗೆದ್ದುಕೊಟ್ಟ ಸಂಭ್ರಮದಂತೆ ಭಾಸವಾಗುತ್ತಿದೆ ಎಂಬುದು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತಿದೆ.
Advertisement
ಹೌದು ಕ್ರಿಕೆಟ್ ದೇವರು ಅಂದು ವಿಶ್ವಕಪ್ ಎತ್ತಿಹಿಡಿಯುವ ಆಸೆಯೊಂದಿಗೆ 2011ರಲ್ಲಿ ಕಣಕ್ಕಿಳಿದಿದ್ದರು. ಅವರ ಆಸೆಯಂತೆ ಟೀಂ ಇಂಡಿಯಾ (Team India) ಶ್ರೀಲಂಕಾ ವಿರುದ್ಧ ಫೈನಲ್‍ನಲ್ಲಿ ಗೆದ್ದು ಸಚಿನ್‍ಗೆ ವಿಶ್ವಕಪ್ ನೀಡಿ ಗೆಲುವಿನ ವಿದಾಯ ನೀಡಿತ್ತು. ಇದೀಗ ಫುಟ್‍ಬಾಲ್‍ನಲ್ಲೂ ಹೀಗೆ ಆಗಿದೆ. ಫಿಫಾ ವಿಶ್ವಕಪ್ ಎತ್ತಿಹಿಡಿಯುವ ಮೆಸ್ಸಿಯ ಬಹುಕಾಲದ ಆಸೆ ಈಡೇರಿಸುವಲ್ಲಿ ಅರ್ಜೆಂಟಿನಾ ಯಶಸ್ವಿಯಾಗಿದೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್, ನಗದು ಬಹುಮಾನ ಎಷ್ಟು?
Advertisement
Advertisement
ಕ್ರಿಕೆಟ್‍ನಲ್ಲಿ ಸಚಿನ್ ಆದರೆ, ಫುಟ್‍ಬಾಲ್‍ನಲ್ಲಿ ಮೆಸ್ಸಿ ದಿಗ್ಗಜ ಆಟಗಾರ. ಇವರಿಬ್ಬರೂ ತಮ್ಮ ಆಟಗಳಲ್ಲಿ ಅದೇಷ್ಟೋ ಏರಿಳಿತಗಳೊಂದಿಗೆ ಅಭಿಮಾನಿಗಳ ಮನಗೆದ್ದವರು. ಅದೇ ರೀತಿ ಸ್ಮರಣೀಯ ವಿದಾಯಕ್ಕೆ ಕನಸು ಕಂಡವರು ಇದೀಗ ಇವರಿಬ್ಬರಿಗೂ ಅವರ ಕನಸಿನ ವಿದಾಯ ಸಿಕ್ಕಿದೆ. 2011ರಲ್ಲಿ ಸಚಿನ್‍ಗೆ ಸ್ಮರಣೀಯ ವಿದಾಯ ಸಿಕ್ಕರೆ, 2022ರಲ್ಲಿ ಮೆಸ್ಸಿಗೆ ತಾನು ಅಂದುಕೊಂಡಿದ್ದಂತೆ ಗೆಲುವಿನ ವಿದಾಯ ಸಿಕ್ಕಿದೆ.
Advertisement
ಇನ್ನೂ ಈ ಇಬ್ಬರು ದಿಗ್ಗಜ ಆಟಗಾರರ ಜೆರ್ಸಿ ನಂಬರ್ ಕೂಡ ಒಂದೇ ಕ್ರಿಕೆಟ್‍ನಲ್ಲಿ ಸಚಿನ್ 10 ನಂಬರ್ ಜೆರ್ಸಿ ಧರಿಸಿ ಆಡಿದರೆ, ಫುಟ್‍ಬಾಲ್‍ನಲ್ಲಿ ಮೆಸ್ಸಿ 10 ನಂಬರ್ ಜೆರ್ಸಿ ಒಡೆಯ. 2011ರ ವಿಶ್ವಕಪ್ ಭಾರತ ಗೆದ್ದು ಸಚಿನ್‍ರನ್ನು ಹೆಗಲಮೇಲೆ ಟೀಂ ಇಂಡಿಯಾ ಆಟಗಾರರು ಹೊತ್ತು ಸಂಭ್ರಮಿಸಿದ್ದರು. ಅದೇ ರೀತಿ ಅರ್ಜೆಂಟಿನಾ ತಂಡ ಮೆಸ್ಸಿಯನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಇದು ವಿಶ್ವ ಕ್ರೀಡಾ ಪ್ರಿಯರ ಕಣ್ಣಂಚಿನಲ್ಲಿ ಅಚ್ಚಳಿಯದೆ ಉಳಿಯಲಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ 2026: ಕತಾರ್‌ಗೆ ಬೈ – ಹಾಯ್ ಹಲೋ ಅಮೆರಿಕ
Messi and aguero are goals man. They have been together since the u-17 world cup back in 2005. They have stayed roomates from that day till sergio unfortunately quit football due to his health condition. Today he lifts his brother on his shoulders to put him on top.❤️❤️ #Messi???? pic.twitter.com/wuGb6ZYlsu
— abhi (@ab_bohara) December 18, 2022