ನವದೆಹಲಿ: ಜೆನೆರಿಕ್ ಔಷಧಗಳ (Generic Medicines) ಹೊರತಾಗಿ ಬೇರೆ ಔಷಧಗಳನ್ನು ವೈದ್ಯರು (Doctors) ಶಿಫಾರಸು ಮಾಡದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಹೊರಡಿಸಿದ್ದ ಆದೇಶವನ್ನ ತಡೆಹಿಡಿಯಲಾಗಿದೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮತ್ತು ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನ ಸಂಪರ್ಕಿಸಿದ ನಂತರ ಈ ಬೆಳಗಣಿಗೆ ಕಂಡುಬಂದಿದೆ. ಇದನ್ನೂ ಓದಿ: ಚಂದ್ರನ ಮೇಲೆ ಭಾರತ – 14 ದಿನಗಳ ನಂತ್ರ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಕಥೆ ಏನು?
Advertisement
Advertisement
ರಾಷ್ಟ್ರೀಯ ವೈದ್ಯಕೀಯ ಆಯೋಗದ ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷನರ್ (ವೃತ್ತಿಪರ ನಡವಳಿಕೆ) ನಿಯಮಗಳು, 2023, ಇತರ ನಿರ್ದೇಶನಗಳೊಂದಿಗೆ ವೈದ್ಯರಿಗೆ ಜೆನೆರಿಕ್ ಔಷಧಿಗಳ ಪ್ರಿಸ್ಕ್ರಿಪ್ಷನ್ ಅನ್ನು ಕಡ್ಡಾಯಗೊಳಿಸಿದೆ. ಬ್ರಾಂಡೆಡ್ ಔಷಧಿಗಳಿಗಿಂತ ಜೆನೆರಿಕ್ ಔಷಧಿಗಳು 30% ರಿಂದ 80% ರಷ್ಟು ಅಗ್ಗವಾಗಿರುವುದರಿಂದ, ಈ ಹೊಸ ನಿಯಮವು ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಆಯೋಗ ಹೇಳಿದೆ. ಆದ್ರೆ ಆಯೋಗದ ಅಧಿಸೂಚನೆ ವಿರುದ್ಧ ವೈದ್ಯರು ತಿರುಗಿಬಿದ್ದಿದ್ದಾರೆ. ಭಾರತದಲ್ಲಿ ಜೆನೆರಿಕ್ ಔಷಧಗಳ ಗುಣಮಟ್ಟ ಕಳಪೆಯಾಗಿದೆ, ಇದರಿಂದ ರೋಗಿಗಳಿಗೆ ಅಪಾಯ ಉಂಟಾಗಲಿದೆ ಎಂದು ವಾದಿಸಿದ್ದಾರೆ.
Advertisement
Advertisement
ಈ ನಡುವೆ ಬ್ರಾಂಡೆಡ್ ಜೆನೆರಿಕ್ ಔಷಧಗಳನ್ನು ಸೂಚಿಸದ ನೋಂದಾಯಿತ ವೈದ್ಯಕೀಯ ವೈದ್ಯರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಹಿರಿಯ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು)ಗೆ ರಾಷ್ಟ್ರೀಯ ಗರಿ
Web Stories