ಬ್ಯಾಂಕಾಕ್: ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮಾಜಿ ಸಂಸದ, ಡೆಮಾಕ್ರಸಿ ಪಕ್ಷದ ಕಾರ್ಯಕರ್ತ ಸೇರಿದಂತೆ ನಾಲ್ವರನ್ನು ಗಲ್ಲಿಗೇರಿಸಿದ ಘಟನೆ ಮ್ಯಾನ್ಮಾರ್‌ಲ್ಲಿ ನಡೆದಿದೆ.
ಡೆಮಾಕ್ರಸಿ ಪ್ರಚಾರಕ ಕ್ಯಾವ್ ಮಿನ್ ಯು ಮಾಜಿ ಸಂಸದ ಮತ್ತು ಹಿಪ್-ಹಾಪ್ ಕಲಾವಿದ ಫಿಯೋ ಝೆಯಾ ಥಾವ್, ಹ್ಲಾ ಮೈಯೋ ಆಂಗ್ ಮತ್ತು ಆಂಗ್ ತುರಾ ಜಾವ್ ಮರಣ ದಂಡನೆಗೆ ಒಳಗಾದವರಾಗಿದ್ದಾರೆ. ಸುಮಾರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮರಣದಂಡನೆಯ ಶಿಕ್ಷೆಯಾಗಿದೆ ಎಂದು ಮ್ಯಾನ್ಮಾರ್ ಸರ್ಕಾರ ತಿಳಿಸಿದೆ. ನಾಲ್ವರು ರಾಜಕೀಯ ಕೈದಿಗಳಿಗೆ ಕ್ಷಮಾದಾನಕ್ಕಾಗಿ ವಿಶ್ವಾದ್ಯಂತ ಮನವಿ ಮಾಡಿದ್ದರೂ ಮರಣದಂಡನೆಯನ್ನು ವಿಧಿಸಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಕ್ರಿಶ್ಚಿಯನ್ನರು ಇಲ್ಲದಿದ್ರೆ ರಾಜ್ಯ ಬಿಹಾರ ಆಗ್ತಿತ್ತು: ತಮಿಳುನಾಡು ಸ್ಪೀಕರ್
Advertisement
Advertisement
ಕಳೆದ ವರ್ಷ ಸೇನೆಯು ದೇಶದ ಆಡಳಿತವನ್ನು ತನ್ನ ವಶಕ್ಕೆ ಪಡೆದ ಬಳಿಕ ಹಿಂಸಾತ್ಮಕ ಮತ್ತು ಅಮಾನವೀಯ ಕೃತ್ಯಗಳನ್ನು ಪ್ರೇರೇಪಿಸಿದ ಆರೋಪ ಸಂಬಂಧ ಕಾನೂನಿಗೆ ಅನುಗುಣವಾಗಿ ನಾಲ್ವರನ್ನು ಬಂಧಿಸಿತ್ತು. ಇದೀಗ ಗಲ್ಲಿಗೇರಿಸಲಾಗಿದೆ. ಇದನ್ನೂ ಓದಿ: ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಕೊಡಬಾರದು: ಸಿಎಂಗೆ ಸುಮಲತಾ ಪತ್ರ