ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,640ಕ್ಕೆ ಏರಿದೆ. 75 ಜನ ಸಾವನ್ನಪ್ಪಿದ್ದಾರೆ. ಇವತ್ತು ಒಂದೇ ದಿನ 12 ಸಾವಾಗಿದ್ದು, 336 ಹೊಸ ಕೇಸ್‍ಗಳು ಸಾಭೀತಾಗಿವೆ.
ದೆಹಲಿಯ ತಬ್ಲಿಘಿಯಿಂದಲೇ 14 ರಾಜ್ಯಗಳಿಗೆ ವೈರಸ್ ಹರಡಿದ್ದು, 647 ಮಂದಿಗೆ ಸೋಂಕು ಅಂಟಿದೆ. ನೆರೆಯ ತಮಿಳುನಾಡಿನಲ್ಲಿ ಇವತ್ತು ಒಂದೇ ದಿನ 102 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 411ಕ್ಕೆ ಏರಿದೆ. ದೆಹಲಿಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, 91 ಹೊಸ ಕೇಸ್ ಪತ್ತೆಯಾಗಿ 384ಕ್ಕೆ ಜಿಗಿದಿದೆ.
Advertisement
Advertisement
ಮುಂಬೈನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 11 ಯೋಧರಿಗೆ ಸೋಂಕು ತಗಲಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‍ನ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿರುವ ತಬ್ಲಿಘಿ ಸದಸ್ಯರು ನರ್ಸ್ ಗಳ ಮೇಲೆ ಹಲ್ಲೆ, ದುರ್ವರ್ತನೆ ತೋರುತ್ತಿರುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕಿಡಿಕಾರಿದ್ದಾರೆ. ಅವರು ಮಾನವೀಯತೆ ಶತ್ರುಗಳು ಅಂತ ಕಿಡಿಕಾರಿದ್ದು, ಎನ್‍ಎಸ್‍ಎ ಕಾಯಿದೆ ಅಡಿ ಕೇಸ್ ದಾಖಲಿಸುವಂತೆ ಆದೇಶಿಸಿದ್ದಾರೆ. ಎನ್‍ಎಸ್‍ಎ ಪ್ರಕಾರ ಒಂದು ವರ್ಷ ಜೈಲಿನಲ್ಲಿಡುವ ಅವಕಾಶ ಇದೆ.
Advertisement
Total #Coronavirus positive cases in Delhi rises to 386,after 93 fresh cases were reported today in the national capital.259 out of the total positive cases are those, who had attended Tablighi Jamaat event. Total death toll due to COVID19 rises to 6 after 2 deaths occurred today pic.twitter.com/SXag2DGiLl
— ANI (@ANI) April 3, 2020
Advertisement
ಟಾಪ್ 5 ರಾಜ್ಯಗಳಲ್ಲಿ ಕೊರೊನಾ:
ಮಹಾರಾಷ್ಟ್ರ – 423
ತಮಿಳುನಾಡು- 411 (102 ಇವತ್ತು)
ದೆಹಲಿ – 384 (91 ಇವತ್ತು)
ಕೇರಳ – 295 (9 ಇವತ್ತು)
ಉತ್ತರ ಪ್ರದೇಶ- 172 (44 ಇವತ್ತು)