ಚಂದನದ ಗೊಂಬೆ ನಿವೇದಿತಾ ಗೌಡ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿಂದ ಚಿಕ್ಕಮಗಳೂರು ಅಂತಾ ಜಾಲಿ ಆಗಿ ರೈಡ್ ಮಾಡುತ್ತಾ ಬರ್ತಡೇ ಸಂಭ್ರಮವನ್ನು ಕುಟುಂಬದ ಜತೆ ನಿವೇದಿತಾ ಆಚರಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
Advertisement
ಕನ್ನಡ ಕಿರುತೆರೆಯ ಬಿಗ್ ಬಾಸ್ ಸೀಸನ್ 5ರ ಮೂಲಕ ಬೆಳಕಿಗೆ ಬಂದ ಪ್ರತಿಭೆ ನಿವೇದಿತಾ ಗೌಡ, ದೊಡ್ಮನೆ ಶೋನಲ್ಲಿ ತಮ್ಮ ಮುದ್ದು ಮುದ್ದಾದ ಮಾತಿನಿಂದ ಸಖತ್ ಆಕ್ಟೀವ್ ಆಗಿ ಕಾಣಿಸಿಕೊಂಡು ನಿವೇದಿತಾ ಸಖತ್ ಸೌಂಡ್ ಮಾಡಿದ್ರು. ಬಳಿಕ ರ‍್ಯಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆ ಆಗಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ನಿವಿ ತಮ್ಮ ಬರ್ತಡೇಯ ಖುಷಿಯ ಕ್ಷಣವನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ಚಂದನ್ ಶೆಟ್ಟಿ ತಮ್ಮ ಪತ್ನಿಯ ಬರ್ತಡೇ ಸೆಲೆಬ್ರೇಶನ್ ಕುಟುಂಬ ಜತೆ ಕಲರ್‌ಫುಲ್ ಡೆಕೋರೇಷನ್ ಜತೆ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಬಳಿಕ ನಿವೇದಿತಾ ಬರ್ತಡೇ ನಿಮಿತ್ತ ಬೆಂಗಳೂರಿನಿಂದ ಚಿಕ್ಕಮಗಳೂರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ
Advertisement
View this post on Instagram
ನಿವೇದಿತಾ ಗೌಡ ಸದ್ಯ ಗಿಚ್ಚಿ ಗಿಲಿ ಗಿಲಿ ಶೋ ಜತೆ ಮಿಸೆಸ್ ಇಂಡಿಯಾ ಕಾಂಪಿಟಿಷನ್‌ಗೂ ತಯಾರಿ ಮಾಡಿಕೊಳ್ತಿದ್ದಾರೆ. ಚಂದನ್ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.