ನಿನ್ನೆಯಷ್ಟೇ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ನಟಿ ನಿವೇದಿತಾ ಗೌಡ, ತಮ್ಮ ಖಾಸಗಿ ಬದುಕಿನ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮನೆಯಲ್ಲಿ ಒಂಟಿಯಾಗಿ ಇರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ರಾತ್ರಿ ಹೊತ್ತು ಪತಿ ಚಂದನ್ ಶೆಟ್ಟಿ ಮನೆಯಲ್ಲಿ ಇರದೇ ಇದ್ದರೆ, ಇಡೀ ರಾತ್ರಿ ನಿದ್ದೆಯೇ ಬರುವುದಿಲ್ಲ ಎನ್ನುವ ಸಂಗತಿಯನ್ನೂ ಅವರು ಹೇಳಿದ್ದಾರೆ.
ರಾತ್ರಿ ಹೊತ್ತು ಒಬ್ಬಳೆ ಮನೆಯಲ್ಲಿ ಇದ್ದರೆ ತುಂಬಾ ಭಯವಾಗುತ್ತದೆ. ಹಾಗಾಗಿ ಇಡೀ ಮನೆ ಬೆಳಕಿನಿಂದ ತುಂಬಿರುತ್ತದೆ. ಅಷ್ಟೂ ಲೈಟ್ಸ್ ಆನ್ ಮಾಡಿಕೊಂಡೇ ಮನೆತುಂಬಾ ಓಡಾಡಿಕೊಂಡಿರುತ್ತೇನೆ. ನನ್ನಿಷ್ಟದ ವೆಬ್ ಸೀರಿಸ್ ನೋಡುತ್ತೇನೆ. ಒಂದೊಂದು ವೆಬ್ ಸೀರಿಸ್ ಅನ್ನು ಹತ್ತಿಪ್ಪತ್ತು ಬಾರಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸಲುವಾಗಿಯೇ ಆದಷ್ಟು ಒಂಟಿಯಾಗಿ ಇರದಂತೆ ಪತಿ ಎಚ್ಚರಿಕೆ ವಹಿಸುತ್ತಾರೆ ಎಂದೂ ಗಂಡನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ
ಮಿಸೆಸ್ ಇಂಡಿಯಾ ತಯಾರಿ ಬಗ್ಗೆಯೂ ಅವರು ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ ಆಗಬೇಕು ಎನ್ನುವುದು ಅವರ ಚಿಕ್ಕಂದಿನ ಕನಸಾಗಿತ್ತಂತೆ. ಅದಕ್ಕೆ ಪ್ರೋತ್ಸಾಹ ನೀಡಿದ್ದು ಅವರು ತಾಯಿ ಎನ್ನುವುದನ್ನೂ ಹೇಳಿದ್ದಾರೆ. ಹಲವು ದಿನಗಳಿಂದ ಕಷ್ಟಪಟ್ಟು ಮಿಸೆಸ್ ಇಂಡಿಯಾ ಸ್ಪರ್ಧೆಗಾಗಿ ತಯಾರಿ ನಡೆಸಿದ್ದನ್ನೂ ಅವರು ಹಂಚಿಕೊಂಡಿದ್ದಾರೆ. ಕೊನೆಗೂ ಆ ಟೈಟಲ್ ಅನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.