ಎರಡು ದಿನಗಳ ಹಿಂದೆಯಷ್ಟೇ ‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ನಟಿ ನಿವೇದಿತಾ ಗೌಡ (Nivedita Gowda), ಶೂಟಿಂಗ್ ಇರದೇ ಇರುವ ಕಾರಣಕ್ಕಾಗಿ ಬೆಂಗಳೂರಿನ ವಿವಿಪುರಂನಲ್ಲಿರುವ (VV Puram) ಫುಡ್ ಸ್ಟ್ರೀಟ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹತ್ತಾರು ಬಗೆಯ ತಿಂಡಿ, ಚಾಟ್ಸ್ ಸವಿದಿದ್ದಾರೆ. ಕೊನೆಯಲ್ಲಿ ಬಾಯಿಯಿಂದ ಹೊಗೆ ಬಿಟ್ಟು ಎಲ್ಲರನ್ನೂ ಕನ್ಫೂಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಟ್ರೋಲ್ ಆಗುತ್ತಿದೆ.
Advertisement
ಸೋಷಿಯಲ್ ಮೀಡಿಯಾದಲ್ಲಿ ನಿವಿ ಯಾವಾಗಲೂ ಬ್ಯುಸಿ. ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಲೇ ಅವುಗಳನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ರೀಲ್ಸ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದವರು, ಇದೀಗ ತಿಂಡಿ, ತಿನಿಸು ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಮಾಡಿದ ಅಡುಗೆಯನ್ನು ಚಂದನ್ (Chandan Shetty) ಮೇಲೆ ಪ್ರಯೋಗ ಮಾಡಿಯೇ ಸೇಡು ತೀರಿಸಿಕೊಳ್ಳುತ್ತಾರೆ. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್- ನಿಧಿ ಸುಬ್ಬಯ್ಯ ಜೋಡಿ
Advertisement
Advertisement
ಫುಡ್ ಬಗ್ಗೆ ಮಾತನಾಡಿದಾಗೆಲ್ಲ ನಿವಿ ಅಭಿಮಾನಿಗಳು ನೀವು ವಿವಿಪುರಂ ಫುಡ್ ಸ್ಟ್ರೀಟ್ ಗೆ (Food Street) ಹೋಗಿಲ್ಲವಾ? ಎಂದು ಎಲ್ಲರೂ ಕೇಳುತ್ತಿದ್ದರಂತೆ. ಈವರೆಗೂ ಅವರು ಅಲ್ಲಿಗೆ ಹೋಗಿಲ್ಲವಂತೆ. ಹಾಗಾಗಿ ಗಿಚ್ಚಿಗಿಲಿಗಿಲಿ ಮುಗಿಯುತ್ತಿದ್ದಂತೆಯೇ ಫುಡ್ ಸ್ಟ್ರೀಟ್ ಗೆ ಬಂದು, ಅಲ್ಲಿನ ವಿವಿಧ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಮೂವತ್ತಕ್ಕೂ ಹೆಚ್ಚು ಬಗೆಯ ತಿಂಡಿಗಳು ಇಲ್ಲಿದ್ದರೂ, ನನಗೆ ಐದಾರು ಮಾತ್ರ ತಿನ್ನುವುದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಅಲ್ಲದೇ, ಬೇರೆ ಬೇರೆ ತಿಂಡಿ ತಿನಿಸುಗಳ ಬಗ್ಗೆಯೂ ಪರಿಚಯ ಮಾಡಿಕೊಟ್ಟಿದ್ದಾರೆ.
Advertisement
ಚಾಟ್ಸ್ (Chats)ತಿನ್ನುವುದು ಮುಗಿಯುತ್ತಿದ್ದಂತೆಯೇ ಸ್ಮೋಕಿಂಗ್ (Smoke) ಐಸ್ ಕ್ರೀಮ್ ಕೂಡ ಸವಿದಿದ್ದು, ಐಸ್ ಕ್ರೀಮ್ ತಿನ್ನುವಾಗ ಬರುವ ಹೊಗೆಯನ್ನು ಕ್ಯಾಮೆರಾ ಮುಂದೆ ಬಿಟ್ಟಿದ್ದಾರೆ. ಹಾಗಾಗಿ ನಿವೇದಿತಾ ಸ್ಮೋಕ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ, ಅವರು ತಿಂದಿದ್ದು ಹೊಗೆ ಬರುವ ಐಸ್ ಕ್ರೀಮ್ ಎನ್ನುವುದು ಅವರು ಹಾಕಿರುವ ವಿಡಿಯೋ ನೋಡಿಯೇ ಗೊತ್ತಾಗುತ್ತದೆ. ಏನೇ ಆಗಲಿ, ನಿವಿ ಸಖತ್ ಎಂಜಾಯ್ ಮಾಡಿದ್ದಾರೆ ಫುಡ್ ಸ್ಟ್ರೀಟ್ ನಲ್ಲಿ.