– ಅಂದು ಹಾಸ್ಯ ಮಾಡಿದವರು ಇಂದು ಹೊಗಳುತ್ತಿದ್ದಾರೆ; ನಿತೀಶ್
ಮೆಲ್ಬೋರ್ನ್: ಬಲಿಷ್ಠ ಆಸೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಸಿಡಿಸಿರುವ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ಆಸೀಸ್ ವೇಗದ ಮತ್ತು ಸ್ಪಿನ್ ಎಸೆತಗಳನ್ನು ಸಮರ್ಥವಾಗಿ ನಿಭಾಯಿಸಿದ 21ರ ಹರೆಯದ ರೆಡ್ಡಿ 3ನೇ ದಿನದ ಅಂತ್ಯಕ್ಕೆ 105 ರನ್ ಸಿಡಿಸಿ ಟೀಂ ಇಂಡಿಯಾವನ್ನು (Team India) ಫಾಲೋ ಆನ್‌ನಿಂದ ಕಾಪಾಡಿದ್ದಾರೆ. ನಿತೀಶ್ ಆಟಕ್ಕೆ ಭಾರೀ ಪ್ರಶಂಸೆಗೆ ವ್ಯಕ್ತವಾಗುತ್ತಿದೆ. ಆದ್ರೆ ನಿತೀಶ್ ರೆಡ್ಡಿಯ ಈ ಸಾಧನೆಯ ಹಿಂದೆ ಅವರ ತಂದೆಯ ಕಣ್ಣೀರಿನ ಕಥೆಯೊಂದನ್ನ ಮರೆಯುವಂತಿಲ್ಲ.
Advertisement
ಹೌದು. ಇನ್ನೂ 25 ವರ್ಷ ಅವಧಿಯಿದ್ದರೂ ಮಗನ ಕ್ರಿಕೆಟ್ ವೃತ್ತಿ ಜೀವನಕ್ಕಾಗಿ ನಿತೀಶ್ ರೆಡ್ಡಿ ತಂದೆ ಮುತಾಲ್ಯ ರೆಡ್ಡಿ (Mutalya Reddy) ಸರ್ಕಾರಿ ಉದ್ಯೋಗ ತೊರೆದರು. ಇಂದು ಮಗನ ಚೊಚ್ಚಲ ಶತಕ ಕಂಡು ಪೆವಲಿಯನ್‌ನಲ್ಲಿದ್ದ ನಿತೀಶ್ ಕುಮಾರ್ ತಂದೆ ಖುಷಿಯಿಂದ ಕಣ್ಣೀರಿಟ್ಟರು. ದೇವರಿಗೆ ಅಲ್ಲಿಂದಲೇ ಕೈಮುಗಿದರು, ಕುಟುಂಬದ ಇತರ ಸದಸ್ಯರನ್ನು ತಬ್ಬಿಕೊಂಡರು. ಈ ಕುರಿತ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಭಾರತಕ್ಕೆ ನಿತೀಶ್-ಸುಂದರ್ ಶತಕದ ಜೊತೆಯಾಟ ಆಸರೆ – ಫಾಲೋ ಆನ್‌ನಿಂದ ಪಾರು
Advertisement
Advertisement
ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ನೀಡಿದ ಪ್ರದರ್ಶನಕ್ಕಾಗಿ ನಿತೀಶ್ ರೆಡ್ಡಿ ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಿದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ತಂದೆಯ ಕೊಡುಗೆ ಬಗ್ಗೆ ಹೇಳಿದ್ದರು. ನಾನು ಇನ್ನೂ ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಕಾಡೆಮಿಗೆ ಹೋಗಬೇಕಿತ್ತು. ಅದೇ ದಿನ ನನ್ನ ತಂದೆಗೆ ರಾಜಸ್ಥಾನಕ್ಕೆ ವರ್ಗಾವಣೆ ಆಗಿರುವುದಾಗಿ ಕರೆ ಬಂತು. ಆಗ ನನಗೆ 8 ವರ್ಷ ವಯಸ್ಸಾಗಿತ್ತು. ಅವರು ರಾಜಸ್ಥಾನಕ್ಕೆ ಹೋದರೆ, ಇಲ್ಲಿ ಎಲ್ಲವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಆಪ್ತರು ಕೇಳಿದರು. ಇದರಿಂದ ಸರ್ಕಾರಿ ಉದ್ಯೋಗ ತೊರೆದ ನನ್ನ ತಂದೆ ನನ್ನೊಂದಿಗೆ ಉಳಿಯಲು ನಿರ್ಧರಿಸಿದರು.
Advertisement
ನನ್ನ ತಂದೆ ಸರ್ಕಾರಿ ಉದ್ಯೋಗ ತೊರೆದು ಆಂಧ್ರಕ್ಕೆ ಮರಳಿ ಬಂದಾಗ, ಅನೇಕರು ಟೀಕೆ ಮಾಡಿದ್ರು. ಆದ್ರೆ ನನ್ನ ತಂದೆ ಇದೆಲ್ಲವನ್ನೂ ಮೆಟ್ಟಿನಿಂತರು. ನನ್ನ ಮಗನ ದೊಡ್ಡ ಸಾಧನೆ ಮಾಡುತ್ತಾನೆ ಅಂತ ನಂಬಿದ್ದರು. ಆರ್ಥಿಕ ಸಂಕಷ್ಟದ ಸಮಯದಲ್ಲೂ ನನಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು. ಅಂದು ಅಪಹಾಸ್ಯ ಮಾಡಿದ್ದ ಜನ, ಈಗ ನನ್ನನ್ನು ಹೊಗಳಲು ನನ್ನ ತಂದೆಗೆ ಕರೆ ಮಾಡುತ್ತಾರೆ, ಊಟಕ್ಕೆ ಕರೆಯುತ್ತಾರೆ. ಕಳೆದು ಹೋದ ಗೌರವ ಮರಳಿ ಪಡೆಯುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ನಿತೀಶ್ ಭಾವುಕರಾದರು. ಇದನ್ನೂ ಓದಿ: ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್ ಚಚ್ಚಿದ 19ರ ಯುವಕ – ರೋಹಿತ್ ಪಡೆ ತಬ್ಬಿಬ್ಬು
ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದು ಒಂದು ಕಡೆ. ಇನ್ನೊಂದು ಕಡೆ, ಒಂದೇ ಸರಣಿಯಲ್ಲಿ ಆಸ್ಟ್ರೇಲಿಯಾದ ವಿರುದ್ದ ಅತಿಹೆಚ್ಚು ಸಿಕ್ಸರ್ (8) ಸಿಡಿಸಿದ ದಾಖಲೆಯನ್ನೂ ಬರೆದ್ದಾರೆ. ಅಲ್ಲದೇ ಎಂಸಿಜಿಯಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ 5ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ತಮ್ಮ ಹೆಗಲಿಗೇರಿಸಿಕೊಂಡರು. ಇದನ್ನೂ ಓದಿ: ಪಾಕ್ ಪ್ರಧಾನಿ ಜೊತೆ ವಿಶ್ವಕಪ್ ವೀಕ್ಷಣೆ – ಇಂಡೋ -ಪಾಕ್ ಕ್ರಿಕೆಟ್‌ಗೆ ಮತ್ತೆ ಚಾಲನೆ ನೀಡಿದ್ದ ಸಿಂಗ್!