ಇಂಫಾಲ್: ಇತ್ತೀಚೆಗೆ ಬಿಹಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡ ನಿತೀಶ್‌ಕುಮಾರ್ ನೇತೃತ್ವದ ಜೆಡಿಯು (ಜನತಾದಳ) ಮಣಿಪುರದಲ್ಲೂ ಬಿಜೆಪಿಯಿಂದ ಮೈತ್ರಿ ಹಿಂಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಜೆಡಿಯು ಮೈತ್ರಿ ಮುರಿದುಕೊಂಡರೂ ಆಡಳಿತಾರೂಢ ಬಿಜೆಪಿಗೆ ಯಾವುದೇ ಅಪಾಯವಿಲ್ಲ. ಪ್ರಸ್ತುತ ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ 55 ಶಾಸಕರ ಬಲ ಹೊಂದಿದೆ. ಇದರಲ್ಲಿ 7 ಶಾಸಕರು ಜೆಡಿಯುನವರು ಇದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದ ಸುತ್ತ 1,600 ಪೊಲೀಸರಿಂದ ಬಿಗಿ ಭದ್ರತೆ
ಒಂದು ವೇಳೆ ಬಿಜೆಪಿಯಿಂದ ಬೆಂಬಲ ಹಿಂಪಡೆದುಕೊಂಡರು ಆಡಳಿತ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಏಕೆಂದರೆ ಬಹುಮತ 31ಕ್ಕಿಂತ ಹೆಚ್ಚಿನ ಶಾಸಕರ ಬಲ ಹೊಂದಿರುವುದರಿಂದ ಬಿಜೆಪಿ ಏಕ ಪಕ್ಷೀಯವಾಗಿ ಆಡಳಿತ ನಡೆಸಬಹುದಾಗಿದೆ. ಸೆಪ್ಟಂಬರ್ 3, 4ರಂದು ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಜೆಡಿಯು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ
ಪ್ರಸಕ್ತ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಮಾಡಿಕೊಂಡಿರಲಿಲ್ಲ. ಚುನಾವಣೆಯ ನಂತರ, ಬಿಜೆಪಿ ಎನ್‌ಡಿಎ ಭಾಗವಾಗಿದ್ದರಿಂದ 7 ಜೆಡಿಯು ಶಾಸಕರು ಬಿರೇನ್ ಸಿಂಗ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು.