ಪ್ರಧಾನಿ ಅಭ್ಯರ್ಥಿ ನಿತೀಶ್? – ದೂರವಾಣಿ ಕರೆಗಳ ಬಗ್ಗೆ ಸಿಎಂ ಹೇಳಿದ್ದೇನು?

Public TV
2 Min Read
Nitish Kumar 1

ಪಾಟ್ನಾ: ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡು ಆರ್‌ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಯೊಂದಿಗೆ ಬಿಹಾರದಲ್ಲಿ ನೂತನ ಸರ್ಕಾರ ಸ್ಥಾಪಿಸುವ ಮೂಲಕ 8ನೇ ಬಾರಿಗೆ ಸಿಎಂ ಆಗಿರುವ ನಿತೀಶ್ ಕುಮಾರ್ ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವ ಬಗ್ಗೆ ಮತ್ತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

2024ಕ್ಕೆ ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗುತ್ತಾರೆ ಎನ್ನುವ ಹೇಳಿಕೆಗಳಿಗೆ ತೆರೆ ಎಳೆದಿದ್ದು, ಪ್ರಸ್ತುತ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರತ್ನಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲ ಪಕ್ಷಗಳೂ ಜೊತೆಗೂಡಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. ಪ್ರಧಾನಿ ಹುದ್ದೆಯ ಆಕಾಂಕ್ಷೆ ನನ್ನ ಮನಸ್ಸಿನಲ್ಲಿ ಇಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: 75th Independence Day – ನ್ಯೂಯಾರ್ಕ್‌ ನದಿ ತಟದಲ್ಲಿ ಹಾರಾಡಲಿದೆ 220 ಅಡಿ ಉದ್ದದ ತ್ರಿವರ್ಣ ಧ್ವಜ

ವಿರೋಧ ಪಕ್ಷಗಳಿಂದ ನನಗೆ ಸಾಕಷ್ಟು ಒತ್ತಾಯವಿದೆ. ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವಂತೆ ಒತ್ತಾಯಿಸಿ ಸಾಕಷ್ಟು ದೂರವಾಣಿ ಕರೆಗಳೂ ಬರುತ್ತಿವೆ. ಆದರೆ ಮೊದಲು ನಾನು ನನ್ನ ಕೆಲಸವನ್ನು ಮುಗಿಸುತ್ತೇನೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಬಿಜೆಪಿ ಮೈತ್ರಿ ಕಡಿದುಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ನಿತೀಶ್ ಕುಮಾರ್, ಮೋದಿ ಗೆದ್ದಿರುವುದು 2014ರಲ್ಲಿ 2024ರಲ್ಲಿ ಅಲ್ಲ ಎಂದಿದ್ದರು. ಇದೇ ವೇಳೆ ನೀವು ಪ್ರಧಾನಿ ಅಭ್ಯರ್ಥಿಯಾಗುತ್ತೀರಾ? ಎಂಬ ಪ್ರಶ್ನೆಗೆ, `ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ’ ಎಂದೂ ಸ್ಪಷ್ಟನೆ ನೀಡಿದ್ದರು.

ಈ ಕುರಿತು ಮತ್ತೆ ಪ್ರತಿಕ್ರಿಯೆ ನೀಡಿರುವ ನಿತೀಶ್, ಅದು ನನ್ನ ಮನಸ್ಸಿನಲ್ಲಿ ಇಲ್ಲ. ಜನರು ಏನೇ ಹೇಳಿದರೂ, ನನಗೆ ಹತ್ತಿರ ಇರುವ ಜನರು ಹೇಳಿದರೂ ಕೂಡ, ಆ ಬಗ್ಗೆ ಆಲೋಚನೆ ಇಲ್ಲ. ಆದರೆ ಎಲ್ಲ ವಿರೋಧ ಪಕ್ಷಗಳು ಜತೆಯಾಗಿ ಹೋಗುವಂತಾದರೆ ಬಹಳ ಒಳ್ಳೆಯದು. ಅದನ್ನು ಸಾಧ್ಯವಾಗುವಂತೆ ನೋಡಿಕೊಳ್ಳುವುದು ತಮ್ಮ ಕೆಲಸ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ

narendra modi nitish kumar

ನಾವೆಲ್ಲರೂ ಸೇರಿ ಜನರ ಸಮಸ್ಯೆಗಳು ಮತ್ತು ಉತ್ತಮ ಸಾಮಾಜಿಕ ಪರಿಸರವನ್ನು ನಿರ್ಮಿಸಲು ಸಾಧ್ಯವೇ ಎಂಬ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಲು ಬಯಸಿದ್ದೇವೆ. ನಾನು ಸಕಾರಾತ್ಮಕ ಕೆಲಸ ಮಾಡುತ್ತಿದ್ದೇನೆ. ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಆದರೆ ಇಲ್ಲಿ ಮೊದಲು ನನ್ನ ಕೆಲಸ ಮುಗಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಕೈ ಮುಗಿದು ಹೇಳುತ್ತೇನೆ. ನನ್ನಲ್ಲಿ ಅಂತಹ ಆಲೋಚನೆಗಳಿಲ್ಲ. ಸದ್ಯ ಎಲ್ಲರಿಗಾಗಿ ಕೆಲಸ ಮಾಡುವುದೇ ನನ್ನ ಕೆಲಸ. ಎಲ್ಲ ವಿರೋಧ ಪಕ್ಷಗಳು ಜತೆಗೂಡಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಹಾಗೇ ಮಾಡಿದರೆ ಎಲ್ಲವೂ ಒಳ್ಳೆಯದಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಇಲ್ಲ, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಅರುಣ್ ಸಿಂಗ್

ಅಲ್ಲದೇ ಆರ್‌ಜೆಡಿಯು 2020ರ ಚುನಾವಣಾ ಪ್ರಚಾರ ಸಮಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸ್ಥಾಪಿಸುವ ಭರವಸೆ ನೀಡಿತ್ತು. ಅದರಂತೆ ನಿತೀಶ್‌ಕುಮಾರ್ ಅವರು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಇದಕ್ಕೆ ನಿತೀಶ್ ಕುಮಾರ್ ನಾವು ಎಲ್ಲ ರೀತಿಯಲ್ಲಿ ಕೆಲಸ ಮಾಡಲಿದ್ದು, ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *