ಪಾಟ್ನಾ: ಜನತಾದಳ ಪಕ್ಷದ ನಾಯಕ ಜಮಾ ಖಾನ್‍ರವರು ಬಿಹಾರದ ಸಿಎಂ ನಿತೀಶ್ ಕುಮಾರ್ ಭಾರತದ ಮುಂದಿನ ಪ್ರಧಾನಿಯಾಗಬೇಕೆಂದು ಅಜ್ಮೀರ್ ಷರೀಫ್‍ನಲ್ಲಿ ಹೇಳಿದ್ದಾರೆ. ಜೆಡಿ(ಯು) ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ(ಎನ್‍ಡಿಎ) ಒಂದು ಭಾಗವಾಗಿದೆ.
Advertisement
ಬಿಹಾರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮಾ ಖಾನ್ ರಾಜಸ್ಥಾನದ ಅಜ್ಮೀರ್ ಷರೀಫ್‍ಗೆ ಭೇಟಿ ನೀಡಿದ್ದ ವೇಳೆ ನಿತೀಶ್ ಕುಮಾರ್‌ರವರು ದೇಶದ ಮುಂದಿನ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿದ್ದಾರೆ. ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಬೇಕೆಂಬುವುದು ಇಡೀ ದೇಶದ ಧ್ವನಿಯಾಗಿದೆ. ನಿತೀಶ್ ಕುಮಾರ್ಗೆ ಬಿಹಾರ ಮಾತ್ರವಲ್ಲದೇ ಇಡೀ ದೇಶದ ಆಡಳಿತ ಸಿಗಲಿ ಎಂದು ನಾನು ಖ್ವಾಜಾ ಗರೀಬ್ ನವಾಜ್‍ರನ್ನು ಪ್ರಾರ್ಥಿಸಿದ್ದೇನೆ. ಇದರಿಂದ ಇಡೀ ದೇಶದಲ್ಲಿ ಶಾಂತಿ ಮತ್ತು ಸಹೋದರತ್ವ ಉಳಿಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
ನಿತೀಶ್ ಕುಮಾರ್ ಅವರನ್ನು ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಮಾಡಿದ ಮೊದಲ ಜೆಡಿಯು ನಾಯಕ ಜಮಾ ಖಾನ್ ಅಲ್ಲ. ಈ ಹಿಂದೆ ಪಕ್ಷದ ಹಿರಿಯ ನಾಯಕ ಕೆ.ಸಿ. ತ್ಯಾಗಿ ಮತ್ತು ಜೆಡಿಯುನ ಸಂಸದೀಯ ಮಂಡಳಿ ಅಧ್ಯಕ್ಷರಾದ ಉಪೇಂದ್ರ ಕುಶ್ವಾಹ ಎಂದು ತಿಳಿಸಿದ್ದಾರೆ.
Advertisement
ಕಳೆದ ತಿಂಗಳು ಜೆಡಿಯು ರಾಷ್ಟ್ರೀಯ ಕೌನ್ಸಿಲ್ ಸಭೆಯ ನಂತರ ಕೆಸಿ ತ್ಯಾಗಿಯವರು, ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿ ಅಲ್ಲ. ಅವರು 2024ರಲ್ಲಿ ಪ್ರಧಾನಿಯಾಗುವ ರೇಸ್‍ನಲ್ಲಿಲ್ಲ. ನಮ್ಮ ಎನ್‍ಡಿಎ ನಾಯಕ ಮೋದಿ. ಆದರೆ ನಿತೀಶ್ ಕುಮಾರ್ ಪ್ರಧಾನಿಯಾಗಲು ಇರಬೇಕಾದ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಮತ್ತೊಂದೆಡೆ ಉಪೇಂದ್ರ ಕುಶ್ವಾಹ ಇಂದಿನ ದಿನಗಳಲ್ಲಿ ಪಿಎಂ ಮೋದಿ ಹೊರತುಪಡಿಸಿ, ಅನೇಕ ಮಂದಿ ನಿತೀಶ್ ಕುಮಾರ್ ಪ್ರಧಾನಿಯಾಗುವ ಗುಣ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಆ ರೀತಿ ಏನು ಇಲ್ಲ. ನಾನೇಕೆ ಪಿಎಂ ಆಗಬೇಕು? ನನಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲ ಎಂದಿದ್ದರು. ಇದನ್ನೂ ಓದಿ: ಗಾಯಕ್ವಾಡ್ ಘರ್ಜನೆ – ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ರನ್‍ಗಳ ಜಯ