ನವದೆಹಲಿ: ಬಿಜೆಪಿ (BJP) ವಿರುದ್ಧದ ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿರುವುದಕ್ಕೆ ಬಿಹಾರ (Bihar) ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮಂಗಳವಾರ ಬೆಂಗಳೂರಿನಲ್ಲಿ (Bengaluru) ನಡೆದ ಸಭೆಯಲ್ಲಿ ಕಾಂಗ್ರೆಸ್ ಈ ಹೆಸರು ಘೋಷಣೆ ಮಾಡಿತ್ತು. ಘೋಷಣೆ ಬೆನ್ನಲ್ಲೇ ಸಭೆಯಲ್ಲಿ ನಿತೀಶ್ ಕುಮಾರ್ ಆಘಾತ ವ್ಯಕ್ತಪಡಿಸಿದ್ದು, INDIA ಎಂದು ಹೆಸರಿಡಲು ಹೇಗೆ ಸಾಧ್ಯ? ಈ ಬಗ್ಗೆ ಚರ್ಚೆ ಮಾಡದೇ ಹೆಸರು ಅಂತಿಮಗೊಳಿಸಿದೆ ಎಂದು ತಕರಾರು ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ರಾಹುಲ್, ಸೋನಿಯಾ ಗಾಂಧಿ ವಿಮಾನ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ
Advertisement
Advertisement
ಮೂಲಗಳ ಪ್ರಕಾರ ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ಹೆಸರಿಡಲು ರಾಹುಲ್ ಗಾಂಧಿ (Rahul Gandhi) ಸೂಚಿಸಿದ್ದರು. ಅಂತೆಯೇ ಕಾಂಗ್ರೆಸ್ (Congress) ನಾಯಕರು ಈ ಹೆಸರನ್ನು ಅಂತಿಮಗೊಳಿಸಿದ್ದಾರೆ. ಆದರೆ ವಿರೋಧ ಪಕ್ಷಗಳ ಒಟ್ಟುಗೂಡಿಸುವ ರೂವಾರಿಯಾಗಿದ್ದ ತಮ್ಮನ್ನು ಈ ಬಗ್ಗೆ ಒಂದು ಮಾತು ಕೇಳಿಲ್ಲ ಎನ್ನುವುದು ನಿತೀಶ್ ಕುಮಾರ್ ವಾದ. ಇದನ್ನೂ ಓದಿ: ದೆಹಲಿಯಲ್ಲಿ ಎನ್‍ಡಿಎ ಮೆಗಾ ಮೀಟಿಂಗ್ – ಮೋದಿ ನಾಯಕತ್ವಕ್ಕೆ ನಮೋ ಎಂದ 38 ಪಕ್ಷಗಳು
Advertisement
ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್ ಪಾತ್ರವನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಇಡೀ ಮೈತ್ರಿಯನ್ನು ಹೈಜಾಕ್ ಮಾಡಿರುವ ರೀತಿಗೆ ಈಗ ಜೆಡಿಯು ಮತ್ತು ಆರ್‌ಜೆಡಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಡೀತಿರೋದು ಕಡು ಭ್ರಷ್ಟರ ಸಮ್ಮೇಳನ, ಹೆಚ್ಚು ಭ್ರಷ್ಟರಿಗೆ ಹೆಚ್ಚು ಗೌರವ – ಮಹಾಘಟಬಂಧನ್ ವಿರುದ್ಧ ಮೋದಿ ವಾಗ್ದಾಳಿ
Advertisement
ಈ ಹಿಂದೆ ವಿರೋಧಿ ಬಣವನ್ನು ಯುಪಿಎ (United Progressive Alliance) ಎಂದು ಕರೆಯಲಾಗುತ್ತಿತ್ತು. ಇದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ 2004ರಿಂದ 2014ರವರೆಗೆ ದೇಶವನ್ನು ಆಳಿತು. ಇದನ್ನೂ ಓದಿ: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ – ಶುಕ್ರವಾರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
Web Stories