ಪಾಟ್ನ: ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಅವರು ಬಿಜೆಪಿಯ ಬೆಂಬಲದೊಂದಿಗೆ ಭಾನುವಾರ ಒಂಬತ್ತನೇ ಬಾರಿಗೆ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ (ಜ.28 ರಂದು) ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ 2 ಡಿಸಿಎಂ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ ಎನ್ನಲಾಗಿದೆ.
ಸಿಎಂ ನಿತೀಶ್ ಕುಮಾರ್ ಕಾಂಗ್ರೆಸ್-ಆರ್‌ಜೆಡಿ ಜೊತೆಗೆ ಇರುವ ಮೈತ್ರಿಕೂಟಕ್ಕೆ ವಿದಾಯ ಹೇಳಿ, ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ, ನಿತೀಶ್ ಬಿಜೆಪಿ-ಜೆಡಿಯು ಸರ್ಕಾರದ ಸಿಎಂ ಆಗಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಒಂದಿಷ್ಟು ಝಲಕ್‌ಗಳು..
Advertisement
Advertisement
ನಿತೀಶ್ ಕುಮಾರ್ ಅವರು ಶನಿವಾರ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದಲ್ಲಿ ಆಗಬಹುದಾದ ಬದಲಾವಣೆಯ ವರದಿಗಳ ನಡುವೆ ಬಿಹಾರದಲ್ಲಿ ಜಿಲ್ಲಾಧಿಕಾರಿಗಳ ದೊಡ್ಡ ಪ್ರಮಾಣದ ವರ್ಗಾವಣೆ ನಡೆಯುತ್ತಿದೆ.
Advertisement
ಈ ಸಮಯದಲ್ಲಿ ಅಸೆಂಬ್ಲಿಯನ್ನು ವಿಸರ್ಜಿಸಲಾಗುವುದಿಲ್ಲ ಮತ್ತು ಮತದಾನವನ್ನು ನಡೆಸಲಾಗುವುದಿಲ್ಲ ಎನ್ನಲಾಗಿದೆ. ಬಿಹಾರದಲ್ಲಿ ಮುಂದಿನ ವರ್ಷ ಮತದಾನ ನಡೆಯಲಿದೆ. ಆದ್ದರಿಂದ ಎರಡೂ ಪಕ್ಷಗಳು ಅವಸರದಲ್ಲಿಲ್ಲ ಎಂಬುದು ಅರ್ಥವಾಗುವಂತಹದ್ದಾಗಿದೆ. ಏಪ್ರಿಲ್/ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ತಕ್ಷಣದ ಗಮನ ಕೇಂದ್ರೀಕರಿಸಲಾಗಿದೆ. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್ ಗರ್ಲ್ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ
Advertisement
ಬಿಜೆಪಿ ಮತ್ತು ನಿತೀಶ್ ಅವರ ಜನತಾ ದಳ (ಯುನೈಟೆಡ್) ಎರಡೂ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಸಿ ಒಪ್ಪಂದಕ್ಕೆ ಮುಂದಾಗಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ಸಂಜೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾದರು. ಪ್ರತಿ ಗಣರಾಜ್ಯೋತ್ಸವದಂದು ಆಯೋಜಿಸಲಾಗುವ ಚಹಾ ಕೂಟದಲ್ಲಿ ರಾಷ್ಟ್ರೀಯ ಜನತಾದಳ (RJD) ಸರ್ಕಾರದ ಭಾಗವಾಗಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಗೈರು ಹಾಜರಾಗಿದ್ದರು.
ನಿತೀಶ್ ಅವರು ಮೊದಲು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಳ್ಳುವುದನ್ನು ತಿರಸ್ಕರಿಸಿದರು. ನಂತರ ಬಿಜೆಪಿ ತಲುಪುವ ಮೂಲಕ ಕಾಂಗ್ರೆಸ್ ನೇತೃತ್ವದ I.N.D.I.A ಮೈತ್ರಿಕೂಟದಿಂದ ಹಿಂದೆ ಸರಿದರು. ಇದನ್ನೂ ಓದಿ: ಕರ್ತವ್ಯ ಪಥದ ಪರೇಡ್‍ನಲ್ಲಿ ಮಿಂಚಿದ ಬಾಲಕರಾಮ!