ನವದೆಹಲಿ: ನ.19ಕ್ಕೆ ಬಿಹಾರ (Biharr) ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ (Nitish Kumar) ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಪ್ರಮಾಣ ವಚನ ದಿನ ನಿತೀಶ್ ಒಬ್ಬರೇ ಪ್ರಮಾಣ ಸ್ವೀಕರಿಸ್ತಾರಾ? ಸಚಿವರೂ ಪ್ರಮಾಣ ಸ್ವೀಕರಿಸುತ್ತಾರಾ ಎನ್ನುವುದು ಎನ್ನುವುದು ಖಚಿತವಾಗಿಲ್ಲ. ನ.9 ರಂದು ಬಿಹಾರ ಚುನಾವಣಾ ಪ್ರಚಾರದ ಭಾಷಣದಲ್ಲಿ ಎನ್‌ಡಿಎ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಮರಳಿ ನಾನು ಬಿಹಾರಕ್ಕೆ ಬರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದರು. ಈ ಕಾರಣಕ್ಕೆ ಮೋದಿ ಲಭ್ಯತೆ ಆಧಾರದ ಮೇಲೆ ಪ್ರಮಾಣ ವಚನದ ದಿನಾಂಕ ನಿಗದಿಯಾಗಲಿದೆ.
ಹಾಲಿ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ಸೋಮವಾರ ನಡೆಯಲಿದೆ. ನಂತರ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಲಿದ್ದಾರೆ. ಬಳಿಕ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಹಳೆಯ ಮತ್ತು ಹೊಸ ಮುಖಗಳೊಂದಿಗೆ ಸಂಪುಟ ಇರಲಿದೆ. ಸ್ಪೀಕರ್ ಹುದ್ದೆ ಹಿಂದಿನಂತೆ ಬಿಜೆಪಿಗೆ (BJP) ಸಿಗಲಿದೆ.ಕೇಂದ್ರ ಸಚಿವರಾದ ಸಂಜಯ್ ಝಾ, ಜೆಡಿ(ಯು)ನ ಲಾಲನ್ ಸಿಂಗ್ ಮತ್ತು ಧರ್ಮೇಂದ್ರ ಪ್ರಧಾನ್, ವಿನೋದ್ ತಾವ್ಡೆ (ಬಿಜೆಪಿ) ಅವರು ಸರ್ಕಾರ ರಚನೆ ಕುರಿತು ದೆಹಲಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಸೋಲಿಗೆ ನೀನೇ ಕಾರಣ ಅಂತ ಸಹೋದರಿಗೆ ಚಪ್ಪಲಿ ಎಸೆದಿದ್ರು ತೇಜಸ್ವಿ ಯಾದವ್: ಆರೋಪ
ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಕೊನೆಯಾಗಲಿದೆ. ಅದಕ್ಕೂ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಾಗಿದೆ. ಸೋಮವಾರ ಮತ್ತು ಮಂಗಳವಾರ ಸಭೆ ನಡೆದು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ನಿತೀಶ್ ಕುಮಾರ್ ಜಂಟಿ ಬೆಂಬಲ ಪತ್ರದೊಂದಿಗೆ ತಮ್ಮ ಹಕ್ಕು ಮಂಡಿಸಲಿದ್ದಾರೆ.
ಸ್ಥಾನಗಳ ಆಧಾರದ ಮೇಲೆ ಹಳೆಯ ಸೂತ್ರದ ಪ್ರಕಾರ ಕ್ಯಾಬಿನೆಟ್ ಸ್ಥಾನಗಳನ್ನು ಹಂಚಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಆರು ಸ್ಥಾನಗಳಿಗೆ ಒಂದು ಸ್ಥಾನ ಸಿಗಬಹುದು ಎಂದು ಅವರು ಹೇಳಿದರು.
ಒಟ್ಟು 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಬಿಜೆಪಿ 89, ಜೆಡಿಯು 85,ಎಲ್‌ಜೆಪಿ 25, ಎಚ್‌ಎಎಂಎಸ್ 5 ಸ್ಥಾನಗಳನ್ನು ಗೆದ್ದುಕೊಂಡಿದೆ.

