ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Assembly Election) ಪ್ರಚಂಡ ಬಹುಮತದಿಂದ ಗೆದ್ದ ಎನ್‌ಡಿಎ ಗುರುವಾರ (ನ.20) ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ (Nitish Kumar) ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
#WATCH | Patna, Bihar | Nitish Kumar named as the leader of the NDA legislature party pic.twitter.com/KhyJ9KmWKL
— ANI (@ANI) November 19, 2025
ಜೆಡಿಯು (JDU) ಪ್ರತ್ಯೇಕ ಸಭೆಯ ನಂತರ ವಿಜಯ್ ಚೌಧರಿ, ಸಂಜಯ್ ಝಾ ಅವರೊಂದಿಗೆ ನಿತೀಶ್ ಕುಮಾರ್ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಎನ್‌ಡಿಎ ನಾಯಕರನ್ನಾಗಿ (Bihar NDA Leader) ಆಯ್ಕೆ ಮಾಡಲಾಯಿತು. ಇದನ್ನೂ ಓದಿ: Publictv Explainer: ಮತ್ತೆ ಯಾದವಿ ಕಲಹ ಸ್ಫೋಟ; ಬಿಹಾರದ ದೊಡ್ಮನೆ ಒಡೆದು ಚೂರಾಗಿದ್ದೇಕೆ, ಕಾರಣ ಯಾರು?
ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಭೇಟಿಯಾಗಿ ರಾಜೀನಾಮೆ ನೀಡಿದ ಬಳಿಕ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದರು. ಗುರುವಾರ ಪಾಟ್ನಾದ ಗಾಂಧಿ ಮೈದಾನದಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಕೇಂದ್ರ ಸಚಿವರು ಸೇರಿ ಹಲವರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಕಳೆದ ಬಾರಿಯಂತೆ ಈ ಬಾರಿಯೂ ಇಬ್ಬರು ಡಿಸಿಎಂಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಹಿಳಾ ಡಿಸಿಎಂ ಬಗ್ಗೆ ವದಂತಿ ಹರಡಿದ್ದು, ಇನ್ನೂ ದೃಢಪಟ್ಟಿಲ್ಲ. ಬಿಜೆಪಿಯಿಂದ 15-16 ಸಚಿವರು, ಜೆಡಿಯು 14 ಸಚಿವರು, ಎಲ್‌ಜೆಪಿ 3-4, ಆರ್‌ಎಲ್‌ಎಂ, ಹೆಚ್‌ಎಎಎಂಗೆ ತಲಾ 1 ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: ಪ್ರತಿ ವರ್ಷ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ – ಸಿದ್ದರಾಮಯ್ಯ ಘೋಷಣೆ


