ಬೆಂಗಳೂರು: ಬೆಂಗಳೂರಿನಿಂದ (Bengaluru) ಮೈಸೂರಿಗೆ (Mysuru) ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹುದಾದ ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಹಾಗಾಗಿ ಈ ಬಗ್ಗೆ ಇಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
Advertisement
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಭಾಗಶಃ ಪೂರ್ಣ ಹಿನ್ನೆಲೆ ಇಂದು ನಿತಿನ್ ಗಡ್ಕರಿ ಹೆದ್ದಾರಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಿಂದ-ಶ್ರೀರಂಗಪಟ್ಟಣದವರೆಗೆ ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಈ ವೇಳೆ ನಿತಿನ್ ಗಡ್ಕರಿಗೆ ಸಂಸದ ಬಿ.ಎನ್.ಬಚ್ಚೇಗೌಡ, ಸಚಿವರಾದ ಸಿ.ಸಿ ಪಾಟೀಲ್ ಸೇರಿದಂತೆ ಕೆಲ ಸಚಿವರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: 40% ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಕೇಂದ್ರ ಸಚಿವರಿಗೆ ಸ್ವಾಗತ – ಬಿಜೆಪಿ ವಿರುದ್ಧ ಜೆಡಿಎಸ್ ಟ್ವೀಟ್ ಬಾಣ
Advertisement
Inspected the progress of the Bengaluru – Chennai Expressway with Karnataka PWD Minister Shri @CCPatilBJP Ji and MP Shri @BNBachegowda_MP Ji. We are constructing this 262 km long 8-Lane structure worth of ₹16,730 Cr.#PragatiKaHighway #GatiShakti #BengaluruChennaiExpressway pic.twitter.com/Lq92uRdGjj
— Nitin Gadkari (@nitin_gadkari) January 5, 2023
Advertisement
ರಾಜ್ಯ ರಾಜಧಾನಿ ಹಾಗೂ ಸಾಂಸ್ಕೃತಿಕ ನಗರಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ವೇ ಕಾಮಗಾರಿ ಇನ್ನೆನ್ನು ಪೂರ್ಣಗೊಳ್ಳುವ ಹಂತ ತಲುಪಿದೆ. ಒಟ್ಟು 118 ಕಿ.ಮೀ ಉದ್ದದ್ದ ಎಕ್ಸ್‌ಪ್ರೆಸ್ ವೇ ಮೊದಲ ಹಂತದ ಕಾಮಗಾರಿಯು ಬೆಂಗಳೂರಿನ ಪಂಚಮುಖಿ ಆಂಜನೇಯ ದೇವಾಲಯದಿಂದ ಹಿಡಿದು ನಿಡಘಟ್ಟದವರೆಗೆ ಹಾಗೂ ನಿಡಘಟ್ಟದಿಂದ ಮೈಸೂರಿನ ವರೆಗೂ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ಇದೇ ಫೆಬ್ರವರಿ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿಗೆ ಚಾಲನೆ ನೀಡಲಿದ್ದಾರೆ. ಒಟ್ಟು 9,551 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ದಶಪಥ ಹೆದ್ದಾರಿ 9 ಬೃಹತ್ ಸೇತುವೆ, 44 ಸಣ್ಣ ಸೇತುವೆ, 8.7 ಕಿ.ಮೀ. ಉದ್ದದ ಎಲಿ ವೇಟೆಡ್ ಹೈವೇ ಹೊಂದಿದೆ. 4 ರೈಲ್ವೆ ಮೇಲ್ಸೇತುವೆ, 28 ವೆಹಿಕಲ್ ಅಂಡರ್‍ಪಾಸ್, 13 ಪಾದಚಾರಿಗಳ ಅಂಡರ್ ಪಾಸ್‍ಗಳನ್ನ ಒಳಗೊಂಡಿದೆ. ಈ ಯೋಜನೆ ಪೂರ್ಣಗೊಂಡರೆ ಮೈಸೂರು-ಬೆಂಗಳೂರು ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಕೆಯಾಗಲಿದೆ. ಜೊತೆಗೆ ಮಧ್ಯೆ ಸಿಗುವ ಹಲವು ಪಟ್ಟಣಗಳಿಗೆ ಬೈಪಾಸ್ ವ್ಯವಸ್ಥೆ ಕಲ್ಪಿಸಿ ಎಂಟ್ರಿ ಹಾಗೂ ಎಕ್ಸಿಟ್‍ಗಳನ್ನು ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ – ನಡ್ಡಾ ಯಾತ್ರೆಯಲ್ಲಿ 2 ದಿನ 5 ಸಮುದಾಯಗಳೇ ಟಾರ್ಗೆಟ್!
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k