ನವದೆಹಲಿ: 2024ರ ಲೋಕಸಭಾ ಚುನಾವಣೆ (2024 Lok Sabha elections) ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು ನನ್ನನ್ನು ಪ್ರಧಾನಿಹುದ್ದೆಗೆ ಬೆಂಬಲಿಸುವ ಭರವಸೆ ನೀಡಿದ್ದರು. ಆದರೆ ನಾನು ಆ ಆಫರ್ ತಿರಸ್ಕರಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಬಹಿರಂಗಪಡಿಸಿದ್ದಾರೆ.
ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನನಗೆ ಈಗಲೂ ಒಂದು ಘಟನೆ ನೆನಪಿದೆ. ನಾನು ಯಾರ ಹೆಸರನ್ನೂ ಉಲ್ಲೇಖಿಸಲ್ಲ. ಆದ್ರೆ ಆ ವ್ಯಕ್ತಿ ʻನೀವು ಪ್ರಧಾನಿಯಾಗಲು (PM Post) ಬಯಸಿದ್ರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆʼ ಎಂದು ಹೇಳಿದ್ದರು. ನಾನು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಅಂತಹ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲವೆಂದೂ ಹೇಳಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್
Advertisement
Advertisement
ಬಳಿಕ ನೀವು ನನ್ನನ್ನು ಏಕೆ ಬೆಂಬಲಿಸಬೇಕು? ನಾನು ನಿಮ್ಮ ಬೆಂಬಲವನ್ನು ಏಕೆ ಸ್ವೀಕರಿಸಬೇಕು? ಎಂದು ಕೇಳಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ, ನಾನು ನನ್ನ ನಂಬಿಕೆಗಳಿಗೆ ಮತ್ತು ನನ್ನ ಸಂಘಟನೆಗೆ ನಿಷ್ಠನಾಗಿದ್ದೇನೆ. ಯಾವುದೇ ಹುದ್ದೆಗಾಗಿ ನನ್ನ ತತ್ವಗಳಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಪ್ರತಿಕ್ರಿಯೆ ನೀಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
Advertisement
2019 ಮತ್ತು 2024ರ ಲೋಕಸಭಾ ಚುನಾವಣೆ ವೇಳೆ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ನಿತಿನ್ ಗಡ್ಕರಿ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಮೋದಿ ನಂತರ ಪ್ರಧಾನಿಯಾಗಲು ಅಮಿತ್ ಶಾ, ಯೋಗಿ ಆದಿತ್ಯನಾಥ್ (Yogi Adityanath) ನಂತರ ಗಡ್ಕರಿ ಅವರೇ 3ನೇ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿತ್ತು. ಇದೀಗ ಇದಕ್ಕೆಲ್ಲಾ ನಿತಿನ್ ಗಡ್ಕರಿ ಅವರೇ ಫುಲ್‌ಸ್ಟಾಪ್ ಹಾಕಿದ್ದಾರೆ. ಇದನ್ನೂ ಓದಿ: ಪರ ಪುರುಷನ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಕಿರುಕುಳ – ನಿರಾಕರಿಸಿದ್ದಕ್ಕೆ ಪತ್ನಿ ಕೊಂದ ಪತಿ
Advertisement
ನಾಗ್ಪುರ ಲೋಕಸಭಾ ಕ್ಷೇತ್ರದಿಂದ 3 ಬಾರಿ ಗೆದ್ದಿರುವ ಗಡ್ಕರಿ ಅವರು ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ನಾಯಕರಿಂದಲೂ ಅಪಾರ ಬೆಂಬಲ ಹೊಂದಿದ್ದಾರೆ. ಅವರು ಪ್ರಸ್ತುತ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳಿಗೆ ಕೇಂದ್ರ ಸಚಿವರಾಗಿ ದೀರ್ಘಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ 2009ರಿಂದ 2013ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ನಿಗಿ ನಿಗಿ ಕೆಂಡವಾಗಿದ್ದ ನಾಗಮಂಗಲ ಶಾಂತ – ಸಚಿವ ಚಲುವರಾಯಸ್ವಾಮಿ ಶಾಂತಿಸಭೆ ಸಕ್ಸಸ್