ಮುಂಬೈ: ಮುಂದಿನ ಐದು ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್ ಬಳಕೆ ನಿಲ್ಲುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಅಂಕೋಲಾದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹಸಿರು ಇಂಧನದ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬಳಕೆ ಇರುವುದಿಲ್ಲ. ಅದರ ಬದಲಾಗಿ ಕಾರು, ಬೈಕ್ ಸೇರಿದಂತೆ ಎಲ್ಲಾ ವಾಹನಗಳಲ್ಲೂ ಹಸಿರು ಹೈಡ್ರೋಜನ್, ಎಥೋನಲ್ ಫ್ಲೆಕ್ಸ್ ಇಂಧನ, ಸಿಎನ್‍ಜಿ ಅಥವಾ ಎಲ್‍ಎನ್‍ಜಿಯನ್ನು ಬಳಕೆ ಮಾಡಲಾಗುತ್ತದೆ ಎಂದರು.
Advertisement
Advertisement
ಈ ಹಸಿರು ಹೈಡ್ರೋಜನ್‍ನ್ನು ಬಾವಿಯ ನೀರಿನಿಂದ ತಯಾರಿಸಬಹುದು. ಇದರ ಜೊತೆಗೆ 70 ರೂ.ಗೆ ಮಾರಾಟ ಮಾಡಬಹುದು. ಅಷ್ಟೇ ಅಲ್ಲದೇ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಖಾಲಿಯಾಗಲಿದ್ದು, ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ಬಳಕೆ ಇರಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ – ಜಿಲ್ಲಾಧಿಕಾರಿ ಆದೇಶ
Advertisement
ಇದೇ ವೇಳೆ ಗಡ್ಕರಿ ಅವರು, ಮುಂದಿನ ಐದು ವರ್ಷಗಳಲ್ಲಿ ಕೃಷಿ ಬೆಳವಣಿಗೆಯನ್ನು ಶೇಕಡಾ 12 ರಿಂದ 20 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕೃಷಿ ಸಂಶೋಧಕರು ಮತ್ತು ತಜ್ಞರಿಗೆ ಮನವಿ ಮಾಡಿದರು. ಇದನ್ನೂ ಓದಿ: ಉಮೇಶ್ ಕೊಲ್ಹೆ ಮನೆಯ ಮುಂದೆ ಹನುಮಾನ್ ಚಾಲೀಸಾ ಪಠಿಸಿದ ರಾಣಾ ದಂಪತಿ