ಮುಂಬೈ: ನಾವು ಮಂತ್ರಿಗಳು, ಹಾಗಾಗಿ ಕಾನೂನು ಉಲಂಘಿಸುವ ಹಕ್ಕು ನಮಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ ಬುಡಕಟ್ಟು ಜನಾಂಗದವರ ಆರೋಗ್ಯಕ್ಕಾಗಿ ಃಐಔSSಔಒ ಹೆಸರಿನ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
Advertisement
Advertisement
ಈ ವೇಳೆ ಮಾತನಾಡಿದ ಅವರು, ಬಡವರ ಕಲ್ಯಾಣಕ್ಕಾಗಿ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ. ಆ ಸಂದರ್ಭದಲ್ಲಿ 10 ಬಾರಿ ಬೇಕಾದರೂ ಕಾನೂನುಗಳನ್ನು ಉಲ್ಲಂಘಿಸಬಹುದು ಎಂದು ಮಹಾತ್ಮ ಗಾಂಧೀಜಿ ಹಿಂದೆ ಹೇಳಿದ್ದರು. ಹಾಗಾಗಿ ಕೆಲವೊಮ್ಮೆ ಜನರ ಅನುಕೂಲಕ್ಕಾಗಿ ಕಾನೂನನ್ನು ಉಲ್ಲಂಘಿಸುವ ಹಕ್ಕು ನಮಗಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
Advertisement
Advertisement
ಅಧಿಕಾರಿಗಳು ಹೇಳಿದಂತೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಜನರ ಅಭಿವೃದ್ಧಿಗಾಗಿ ಕೆಲವೊಮ್ಮೆ ಕಾನೂನು ಉಲ್ಲಂಘನೆಯಾಗುತ್ತದೆ. ನಾವು ಹೇಳುವ ಯೋಜನೆಯನ್ನು ಅಧಿಕಾರಿಗಳು “ಹೌದು ಸರ್” ಎಂದು ಹೇಳಿ ಕಾರ್ಯರೂಪಕ್ಕೆ ತರಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ
ಹಳೆಯ ಘಟನೆಯನ್ನು ಮೆಲುಕು ಹಾಕಿದ ಗಡ್ಕರಿ, 1995ರಲ್ಲಿ ಮನೋಹರ ಜೋಶಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗಡ್ಚಿರೋಲಿ ಮತ್ತು ಮೇಲ್ಘಾಟ್‍ನಲ್ಲಿ ಅಪೌಷ್ಟಿಕತೆಯಿಂದ 2 ಸಾವಿರ ಆದಿವಾಸಿ ಮಕ್ಕಳು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆಗ ಆ ಭಾಗದ 450 ಹಳ್ಳಿಗಳಿಗೆ ರಸ್ತೆ ಇರಲಿಲ್ಲ ಮತ್ತು ಅರಣ್ಯ ಇಲಾಖೆ ಕಾನೂನುಗಳು ರಸ್ತೆ ನಿರ್ಮಿಸಲು ಅಡ್ಡಿಯಾಗುತ್ತಿತ್ತು. ರಸ್ತೆ ಇಲ್ಲದ ಕಾರಣ ಆ ಹಳ್ಳಿಗಳು ಅಭಿವೃದ್ಧಿಯಾಗಿರಲಿಲ್ಲ. ಆಗ ಆ ಸಮಸ್ಯೆಯನ್ನು ನನ್ನದೇ ಆದ ರೀತಿಯಲ್ಲಿ ಬಗೆಹರಿಸಿದ್ದೆ ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ