ನವದೆಹಲಿ: ಪ್ರಧಾನಿ ಮೋದಿ ಅವರನ್ನು ಆರ್ ಎಸ್‍ಎಸ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ ಹತ್ಯೆ ಮಾಡಲು ಪ್ಲಾನ್ ರೂಪಿಸಿದಂತೆ ಕಾಣುತ್ತಿದೆ ಎಂದು ಜೆಎನ್‍ಯು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶೀಲಾ ರಶೀದ್ ಟ್ವೀಟ್ ಮಾಡಿದ್ದಾರೆ.
ವಿವಿಯ ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆಯಾಗಿರುವ ಶೀಲಾ ಶನಿವಾರ ವಿವಾದತ್ಮಾಕ ಟ್ವೀಟ್ ಮಾಡಿದ್ದು, ಆರ್ ಎಸ್‍ಎಸ್ ಮತ್ತು ನಿತೀನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕೊಲೆಯನ್ನು ಮಾಡಲು ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಆದರೆ ಇದನ್ನು ಮುಸ್ಲಿಂ ಹಾಗೂ ಇತರೇ ಸಮುದಾಯಗಳ ಮೇಲೆ ಆರೋಪ ಮಾಡಲಾಗ್ತಿದೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
https://twitter.com/Shehla_Rashid/status/1005373847636303872
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಸಮಾಜ ವಿರೋಧಿ ಅಂಶಗಳನ್ನು ಪ್ರಚಾರ ನಡೆಸುತ್ತಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
Advertisement
https://twitter.com/Shehla_Rashid/status/1005502570779967489
Advertisement
ವಿವಾದತ್ಮಾಕ ಟ್ವೀಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಶೀಲಾ ರಶೀದ್, ತಮ್ಮ ಕಟು ಟ್ವೀಟ್ ಬಳಿಕ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷದ ನಾಯಕರು ಸಹ ಈ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗೆಯೇ ಉಮರ್ ಖಲೀದ್ ಎಂಬ ಜೆಎನ್‍ಯು ವಿದ್ಯಾರ್ಥಿ ಮೇಲೆ ಇಂತಹದ್ದೇ ಆರೋಪ ಮಾಧ್ಯಮಗಳಿಂದ ಕೇಳಿ ಬಂದಾಗ ಅವರ ಸ್ಥಿತಿ ಹೇಗಾಗಿರುತ್ತದೆ ಎಂದು ಊಹೆ ಮಾಡಿ. ಸದ್ಯ ಕೇಂದ್ರ ಸಚಿವ ಗಡ್ಕರಿ ಅವರು ಈ ಕುರಿತು ಕ್ರಮಕೈಗೊಳ್ಳುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾವೋವಾದಿಗಳು ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿರುವ ರೀತಿಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಪುಣೆ ಪೊಲೀಸರು ಮಾಹಿತಿ ಬಹಿರಂಗ ಪಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
I would be taking legal action on anti-social elements who have made bizzare comments; attributing personal motives to me, regarding the assassination threat to PM @narendramodi
— Nitin Gadkari (@nitin_gadkari) June 9, 2018