ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂಗೆ (Bharat NCAP) ಚಾಲನೆ ನೀಡಿದರು.
ನಮ್ಮ ಜನ ಈಗ ಹೊಸ ಕಾರು ಖರೀದಿಸುವಾಗ ಬೆಲೆ, ವೈಶಿಷ್ಟ್ಯಗಳಿಗಿಂತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬೆಲೆ ತುಸು ಹೆಚ್ಚಾದರೂ ಪರವಾಗಿಲ್ಲ ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್ ಇರುವ ಕಾರನ್ನೇ ಖರೀದಿಸೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ಜನ ಈಗಾಗಲೇ ಬಂದಿದ್ದಾರೆ. ಇಷ್ಟು ವರ್ಷ ಗ್ಲೋಬಲ್ NCAP ಮತ್ತು ASEAN NCAP ಕ್ರ‍್ಯಾಶ್ ಟೆಸ್ಟ್ (Crash Test) ನಡೆಸಿ ಕಾರುಗಳಿಗೆ ರೇಟಿಂಗ್ ನೀಡುತ್ತಿದ್ದರು. ಇದೀಗ ಈ ಸುರಕ್ಷತಾ ರೇಟಿಂಗ್ ನೀಡುವ ವ್ಯವಸ್ಥೆ ಅಕ್ಟೊಬರ್ 1ರಿಂದ ಭಾರತದಲ್ಲಿಯೇ ಆರಂಭವಾಗಲಿದೆ.
Advertisement
Advertisement
ಭಾರತ ಸ್ವಂತ ಕಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಸಿಸ್ಟಮ್ ಹೊಂದಿರುವ ಐದನೇ ದೇಶವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪರೀಕ್ಷೆಗೆ ಒಳಪಡುವ ಕಾರುಗಳು ಭಾರತ್ NCAP ಲೋಗೋ ಮತ್ತು ಅದರ ರೇಟಿಂಗ್ ಸೂಚಿಸುವ ಸ್ಟಿಕ್ಕರ್ ಹೊಂದಿರುತ್ತವೆ. ಭಾರತ್ NCAPಗೆ ಈಗಾಗಲೇ ೩೦ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಲು ಬೇಡಿಕೆ ಬಂದಿದೆ ಎಂದು ನಿತಿನ್ ಗಡ್ಕರಿ ಹೇಳಿದರು.
Advertisement
ಭಾರತ್ NCAP ಕಾರ್ಯಕ್ರಮದ ಅಡಿಯಲ್ಲಿ ಕಾರನ್ನು ಪರೀಕ್ಷಿಸಲು ಸುಮಾರು 60 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದೇ ರೀತಿಯ ಪರೀಕ್ಷೆಯನ್ನು ವಿದೇಶದಲ್ಲಿ ಮಾಡಿದರೆ ಸುಮಾರು 2.5 ಕೋಟಿ ರೂಪಾಯಿಗಳು ಬೇಕಾಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು. ಇದನ್ನೂ ಓದಿ: ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ
Advertisement
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಸಚಿವಾಲಯ, ಮಾರುಕಟ್ಟೆಯಲ್ಲಿ ಲಭ್ಯ ಇರುವ ವಾಹನಗಳ ಕ್ರ್ಯಾಶ್ ಸುರಕ್ಷತೆಯ ತುಲನಾತ್ಮಕ ಮೌಲ್ಯಮಾಪನ ಮಾಡಲು ಕಾರು ಗ್ರಾಹಕರಿಗೆ ಒಂದು ಸಾಧನವನ್ನು ಒದಗಿಸುವ ಗುರಿಯನ್ನು ಭಾರತ್ NCAP ಹೊಂದಿದೆ ಎಂದು ತಿಳಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕಾರು ತಯಾರಕರು ಸ್ವಯಂಪ್ರೇರಣೆಯಿಂದ ತಮ್ಮ ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ನೀಡಬಹುದು ಮತ್ತು ಈ ಪರೀಕ್ಷೆ ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AIS) 197ರ ಪ್ರಕಾರ ಈ ನಡೆಯುತ್ತದೆ ಎಂದು ಸಹ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ಲೋಬಲ್ NCAPನಲ್ಲಿ ರೇಟಿಂಗ್ ನೀಡುವಂತೆ ಭಾರತ್ ಎನ್‌ಸಿಎಪಿ ಸಹ ಕಾರಿನ ಕಾರ್ಯಕ್ಷಮತೆಯ ಆಧಾರದ ಮೇಲೆ, ವಯಸ್ಕರ ಸುರಕ್ಷತೆಗೆ ನೀಡುವ ಅಡಲ್ಟ್ ಆಕ್ಯುಪೆನ್ಸ್ ಪ್ರೊಟೆಕ್ಷನ್ (AOP) ಮತ್ತು ಮಕ್ಕಳ ಸುರಕ್ಷತೆಗೆ ನೀಡುವ ಚೈಲ್ಡ್ ಆಕ್ಯುಪೆನ್ಸ್ ಪ್ರೊಟೆಕ್ಷನ್ (COP) ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಕಾರುಗಳನ್ನು ಕೊಳ್ಳುವ ಗ್ರಾಹಕರು ಈ ಸ್ಟಾರ್ ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ ಸ್ಪೋರ್ಟ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ- ಬಗೆಹರಿಸುವ ಭರವಸೆ ನೀಡಿದ ಸಂಸ್ಥೆ
Web Stories