ನವದೆಹಲಿ: ಯುಎಸ್ ಇಲೆಕ್ಟ್ರಿಕ್ ವಾಹನ ಟೆಸ್ಲಾ ಕಂಪನಿ ಭಾರತದಲ್ಲಿ ಮಳಿಗೆಯನ್ನು ಸ್ಥಾಪಿಸುವುದಾದರೆ ಅದು ಸ್ವಾಗತರ್ಹವಾಗಿದೆ. ಆದರೆ ಕಾರುಗಳನ್ನು ಭಾರತಕ್ಕೆ ಮಾರಾಟ ಮಾಡಲು ಮತ್ತು ರಫ್ತು ಮಾಡಲು ಚೀನಾದಿಂದ ಆಮದು ಮಾಡಿಕೊಳ್ಳಬಾರದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಸರ್ಕಾರಿ ಸಮ್ಮೆಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೀನಾದಿಂದ ತಯಾರಿಸಿದ ವಾಹನಗಳನ್ನು ಇಲ್ಲಿ ಮಾರಾಟ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದಾಗಿ ಚೀನಾದಿಂದ ಕಾರುಗಳನ್ನು ಆಮದು ಮಾಡಿಕೊಳ್ಳಬಾರದು ಎಂದರು.
Advertisement
Advertisement
ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಸುಂಕವನ್ನು ಕಡಿತಗೊಳಿಸಲು ಸುಮಾರು ಒಂದು ವರ್ಷಗಳ ಕಾಲ ನವದೆಹಲಿಯಲ್ಲಿ ಅಧಿಕಾರಿಗಳನ್ನು ನೇಮಿಸಿದೆ. ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಆಗಿದ್ದಾರೆ. ಮಸ್ಕ್ ಅವರು ಭಾರತದಲ್ಲಿ ಹೂಡಿಕೆ ಮಾಡಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ ಎಂದು ನುಡಿದರು. ಉಕ್ರೇನ್ ರಿಟರ್ನ್ ವಿದ್ಯಾರ್ಥಿಗಳು ಶೀಘ್ರವೇ ಗುಡ್ ನ್ಯೂಸ್: ಸುಧಾಕರ್
Advertisement
Advertisement
ಟೆಸ್ಲಾ ಭಾರತದಲ್ಲಿ ಹೂಡಿಕೆ ಮಾಡಲು ದೃಢವಾದ ಯೋಜನೆಯನ್ನು ಬಹಿರಂಗಪಡಿಸದ ಕಾರಣ ಅದರ ಪ್ರಯತ್ನಗಳು ಸ್ಥಗಿತಗೊಂಡಿವೆ. ಒಂದು ವೇಳೆ ಇದು ಕಾರ್ಯಗತವಾದರೆ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಠಿ ನೀಡುತ್ತದೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು. ಮುತ್ತಿಡಲು ಹೋದಾಗ ಹಾಯಲು ಬಂದ ಹೋರಿ- ಗಲಿಬಿಲಿಗೊಂಡ ಸಿಎಂ