ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ (Nithyananda) ಕೈಲಾಸ (Kailasa) ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವುದು ಗೊತ್ತೇ ಇದೆ. ಈಗ ವಿಶ್ವದ ಎಲ್ಲಾ ಗರ್ಭಿಣಿಯರಿಗೆ ಆಫರ್ ಒಂದನ್ನು ನೀಡಿ ಸುದ್ದಿಯಾಗುತ್ತಿದೆ.
ಕೈಲಾಸದಲ್ಲಿ ಬಿಂದಾಸ್ ಆಗಿರುವ ಬಿಡದಿ ಸ್ವಾಮಿ ನಿತ್ಯಾನಂದ, ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ (Delivery) ಕೈಲಾಸಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾನೆ. ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ, ವಿಶೇಷವಾದ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ (DNA) ದಯಪಾಲಿಸುವುದಾಗಿ ತಿಳಿಸಿದ್ದು, ಅಲ್ಲದೇ ಕೈಲಾಸದಲ್ಲಿ ಹೆರಿಗೆಯಾದರೆ ಏನೇನು ಪ್ರಯೋಜನಗಳಿವೆ ಎಂಬುದರ ಕುರಿತಾಗಿ ವೀಡಿಯೋ ಮೂಲಕ ವಿವರಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್‌ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್‌ಪ್ರೆಸ್
ಕೈಲಾಸದಲ್ಲಿ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಶಾಶ್ವತ ಕಾಸ್ಮಿಕ್ ಏರ್‌ಪೋರ್ಟ್ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ. ಇಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಪ್ರಬುದ್ಧವಾದಂತಹ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ ಒಲಿಯುತ್ತದೆ. ಜೊತೆಗೆ, ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾನೆ.
ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿರಿ. ಆದರೆ, ನೀವು ಹೆರಿಗೆಗೆ ಮಾತ್ರ ಕೈಲಾಸಕ್ಕೆ ಬನ್ನಿ. ಈ ಮೂಲಕ ನಿಮ್ಮ ಮಗುವಿಗೆ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಬಳಸಿಕೊಳ್ಳಿ ಎಂದು ಆಫರ್ ನೀಡಿದ್ದಾನೆ. ಇದನ್ನೂ ಓದಿ: ಕದ್ದು ಮುಚ್ಚಿ ಮಾಲ್ಡೀವ್ಸ್‌ಗೆ ಹಾರಿದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ
ಕೈಲಾಸ ಎಲ್ಲಿದೆ?
ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಮಾಧ್ಯಮಗಳ ಪ್ರಕಾರ ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಈಕ್ವೆಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.