ಕೈಲಾಸ: ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದ (Nithyananda) ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ನಿತ್ಯಾನಂದ ಇದೀಗ ಕೈಲಾಸ ದೇಶದಲ್ಲಿ ಭಾರೀ ಉದ್ಯೋಗಾವಕಾಶವಿದೆ (Job) ಎಂದು ಹೇಳುತ್ತಿದ್ದಾರೆ.
ಹೌದು.. ಹಿರಿಯರು ಕಾಸಿದ್ರೆ ಕೈಲಾಸ (Kailasa) ಎನ್ನುತ್ತಿದ್ದರು. ಆದರೆ ನಿತ್ಯಾನಂದ ಹಣ ಇಲ್ಲದಿದ್ದರೂ ಕೈಲಾಸಕ್ಕೆ ಕರೆ ಮಾಡಿ, ಕೈತುಂಬಾ ಹಣ ಬರುವ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ನಿತ್ಯಾನಂದನೇ ನಿರ್ಮಿಸಿರುವ ಕೈಲಾಸ ದೇಶದಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆಯಂತೆ. ವಿವಿಧ ರೀತಿಯ ಉದ್ಯೋಗಗಳಿವೆ. ಅರ್ಹ ಮತ್ತು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗಕ್ಕೆ ಸೇರುವವರಿಗೂ ಉದ್ಯೋಗದ ಜೊತೆಗೆ ಆಕರ್ಷಕ ವೇತನ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಕೈಲಾಸದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement
Advertisement
ಕೇವಲ ನಿತ್ಯಾನಂದ ಕಟ್ಟಿಕೊಂಡ ಕೈಲಸ ದೇಶದಲ್ಲೊಂದೇ ಅಲ್ಲ, ಭಾರತದ ವಿವಿಧ ಕೈಲಾಸ ಶಾಖೆಗಳು ಉತ್ತಮ ಸಂಬಳದೊಂದಿಗೆ ಉದ್ಯೋಗಗಳನ್ನು ಒದಗಿಸುತ್ತಿವೆ. ಸೂಕ್ತ ವೇತನದೊಂದಿಗೆ ಕೈಲಾಸದ ಭಾರತೀಯ ಶಾಖೆಯಲ್ಲಿ 1 ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಉದ್ಯೋಗಿಗಳು ಕೈಲಾಶ್-ಸಂಯೋಜಿತ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶಕ್ಕೆ ಹೋಗಬಹುದು ಎಂದು ಪ್ರಕಟಣೆ ತಿಳಿಸಿದೆ.
Advertisement
ನಿತ್ಯಾನಂದ ಹಿಂದೂ ವಿಶ್ವವಿದ್ಯಾನಿಲಯ, ಸಾಗರೋತ್ತರ ದೇವಾಲಯಗಳು, ಭಾರತದಲ್ಲಿನ ಕೈಲಾಸ ದೇವಾಲಯಗಳು, ಕೈಲಾಸ ಐಟಿ ಇಲಾಖೆ, ಕೈಲಾಸ ವಿದೇಶಿ ರಾಯಭಾರ ಕಚೇರಿ, ಕೊಳಾಯಿ ಮತ್ತು ಎಲೆಕ್ಟ್ರಿಕಲ್ ಘಟಕ, ಗ್ರಂಥಾಲಯವು ಅನೇಕ ಸ್ಥಳಗಳಲ್ಲಿ ಖಾಲಿಯಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಭಾರತದ ವಿವಿಧ ಶಾಖೆಗಳಲ್ಲಿ ಒಂದು ವರ್ಷ ತರಬೇತಿ ನೀಡಲಾಗುತ್ತದೆ. ಬಳಿಕ ಊಟ, ವಸತಿ, ವೈದ್ಯಕೀಯ ವೆಚ್ಚವನ್ನು ಉಚಿತವಾಗಿ ನೀಡಿ ಕೈಲಾಸದಲ್ಲಿ ಉದ್ಯೋಗ ನೀಡಲಾಗುತ್ತದೆ. ಆಸಕ್ತರು ಸಂಪರ್ಕಿಸುವಂತೆ ತಿಳಿಸಿದೆ. ಇದನ್ನೂ ಓದಿ: ಕೇಸರಿ ಕಂಡರೆ ಕಾಂಗ್ರೆಸ್‌ಗೆ ಅಲರ್ಜಿ ಯಾಕೆ?- ವಿವೇಕ ಯೋಜನೆ ಸಮರ್ಥನೆ ಮಾಡಿಕೊಂಡ ಸಿಎಂ ಬೊಮ್ಮಾಯಿ
Advertisement
ಕೆಲ ದಿನಗಳ ಹಿಂದೆಯಷ್ಟೇ ನಿತ್ಯಾನಂದ ತೀವ್ರ ಅಸ್ವಸ್ಥರಾಗಿದ್ದರು ಎಂದು ಹೇಳಲಾಗಿತ್ತು. ಈತ ಶ್ರೀಲಂಕಾದಲ್ಲಿ ವೈದ್ಯಕೀಯ ಆಶ್ರಯ ಪಡೆದಿದ್ದ ಎನ್ನಲಾಗಿದೆ. ನಿತ್ಯಾನಂದ ಸ್ವಾಮಿ ಅವರ ಆರೋಗ್ಯ ಹದಗೆಟ್ಟಿದ್ದು, ಪ್ರಾಣಕ್ಕೆ ಅಪಾಯವಿದೆ ಎಂದು ಶ್ರೀಲಂಕಾಕ್ಕೆ ತೆರಳಿದ್ದರು ಎಂದು ಹೇಳಲಾಗಿತ್ತು. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ