‘ಕಾಂತಾರ’ ಬೆಡಗಿ ಸಪ್ತಮಿ ಗೌಡ (Sapthami Gowda) ಬಾಲಿವುಡ್ ಬಳಿಕ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ತೆಲುಗು ನಟ ನಿತಿನ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರತ್ನ ಪಾತ್ರದ ಮೂಲಕ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಬರುತ್ತಿದ್ದಾರೆ. ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನೂ ಓದಿ:ತಡವಾಗಿ ಆಮೀರ್ ಖಾನ್ ಪ್ರಶಂಸೆ- ಈಗ ಎಚ್ಚರವಾದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು

View this post on Instagram
ಬಿಲ್ಲು ಬಾಣ ಹಿಡಿದ ಗೆಟಪ್‌ನಲ್ಲಿ ನಿತಿನ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕೊಡಗಿನ ನಟಿ ವರ್ಷ ಬೊಳ್ಳಮ್ಮ, ಸೌರಭ್ ಸಚ್‌ದೇವ್ ಸೇರಿದಂತೆ ಅನೇಕರು ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀರಾಮ್ ವೇಣು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜುಲೈ 4ರಂದು ಸಿನಿಮಾ ರಿಲೀಸ್ ಆಗಲಿದೆ.
ಪಾಪ್ ಕಾರ್ನ್ ಮಂಕಿ ಟೈಗರ್, ಕಾಂತಾರ, ಯುವ, ದಿ ವ್ಯಾಕ್ಸಿನ್ ವಾರ್ ಸಿನಿಮಾಗಳಲ್ಲಿ ಸಪ್ತಮಿ ನಟಿಸಿದ್ದಾರೆ. ಸದ್ಯ ಕನ್ನಡದ ಅಶೋಕ ಬ್ಲೇಡ್‌ನಲ್ಲಿ ಸತೀಶ್ ನೀನಾಸಂಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.


