ಮುಂಬೈ: ಮಕ್ಕಳಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಕಂಪನಿಯ ನಿರ್ದೇಶಕ ಸ್ಥಾನದಿಂದ ನೀತಾ ಅಂಬಾನಿ (Nita Ambani) ಕೆಳಗೆ ಇಳಿದಿದ್ದಾರೆ.
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ (Isha Ambani, Akash Ambani, Anant Ambani) ಅವರನ್ನು ಕಂಪನಿಯ ಕಾರ್ಯ ನಿರ್ವಾಹಕಯೇತರ (ನಾನ್ ಎಕ್ಸಿಕ್ಯೂಟಿವ್) ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ನಡೆದ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ.
Advertisement
ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿರುವ ಮಂಡಳಿ, ಈ ಮೂವರ ನೇಮಕಾತಿಗಾಗಿ ಅನುಮೋದನೆ ನೀಡಲು ಶಿಫಾರಸು ಮುಂದಿಟ್ಟಿದೆ. ಶೇರ್ ಹೋಲ್ಡರ್‌ಗಳ ಒಪ್ಪಿಗೆ ಬಳಿಕ ಅವರು ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ನೇಮಕಾತಿ ಜಾರಿಗೆ ಬರಲಿದೆ.
Advertisement
Advertisement
ಭಾರತದ ಮೇಲೆ ರಿಲಯನ್ಸ್ ಫೌಂಡೇಷನ್ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಲು ಹಾಗೂ ಮಾರ್ಗದರ್ಶನ ನೀಡಲು ತಮ್ಮ ಉತ್ಸಾಹ ಹಾಗೂ ಸಮಯವನ್ನು ಮೀಸಲಿಡಲು ಬಯಸಿರುವ ನೀತಾ ಅಂಬಾನಿ ಅವರ ನಿರ್ಧಾರವನ್ನು ಗೌರವಿಸಿರುವ ನಿರ್ದೇಶಕರ ಮಂಡಳಿಯು ಅವರ ರಾಜೀನಾಮೆಯನ್ನು ಸ್ವೀಕರಿಸಿದೆ.
Advertisement
ಮುಕೇಶ್ ಅಂಬಾನಿ ಮುಖ್ಯಸ್ಥರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಬೋರ್ಡ್‌ನಲ್ಲಿ ನೀತಾ ಅಂಬಾನಿ ನಿರ್ದೇಶಕರಾಗಿದ್ದರು. ಸದ್ಯ ನೀತಾ ಅಂಬಾನಿ ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥರಾಗಿದ್ದು, ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿ ನೀತಾ ಅಂಬಾನಿ ಅವರು ಆರ್‌ಐಎಲ್‌ನ ಎಲ್ಲಾ ಮಂಡಳಿ ಸಭೆಗಳಲ್ಲಿ ಖಾಯಂ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಇದರಿಂದ ಕಂಪನಿಯು ಅವರ ಸಲಹೆಗಳ ಪ್ರಯೋಜನ ಪಡೆಯುವುದನ್ನು ಮುಂದುವರಿಸಲು ನೆರವಾಗಲಿದೆ ಎಂದು ರಿಲಯನ್ಸ್ ಹೇಳಿಕೆ ತಿಳಿಸಿದೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲ ಬಾರಿಗೆ ಮೊಬೈಲ್ ಪ್ರೀಪೇಯ್ಡ್ ಪ್ಲ್ಯಾನ್ ಜೊತೆಗೆ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್ ಪರಿಚಯಿಸುತ್ತಿದೆ Reliance Jio
ರೀಟೇಲ್, ಡಿಜಿಟಲ್ ಸೇವೆಗಳು ಮತ್ತು ಸರಕು ವ್ಯವಹಾರಗಳು ಸೇರಿದಂತೆ ಆರ್‌ಐಎಲ್‌ನ ಪ್ರಮುಖ ವ್ಯವಹಾರಗಳನ್ನು ಮುನ್ನಡೆಸುವ ಹಾಗೂ ನಿರ್ವಹಿಸುವ ಕಾರ್ಯದಲ್ಲಿ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಐಎಲ್‌ನ ಪ್ರಮುಖ ಅಂಗ ಸಂಸ್ಥೆಗಳ ಮಂಡಳಿಗಳಲ್ಲಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆರ್‌ಐಎಲ್ ಮಂಡಳಿಗೆ ಅವರ ನೇಮಕಾತಿಯು, ಅವರ ದೃಷ್ಟಿಕೋನ ಮತ್ತು ಹೊಸ ಆಲೋಚನೆಗಳಿಂದ ಕಂಪೆನಿಯ ಉನ್ನತಿಗೆ ನೆರವಾಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
Web Stories