– ನಿರ್ಮಲಾ ಸೀತಾರಾಮನ್ ಧರಿಸೋ ಸೀರೆ ವಿಶೇಷತೆ ಗೊತ್ತಾ?
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಗುರುವಾರ 6ನೇ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಸಚಿವೆ ಬಜೆಟ್ ಅಷ್ಟೇ ಅಲ್ಲ ಸೀರೆ ವಿಚಾರಕ್ಕೂ ಸುದ್ದಿಯಾಗುತ್ತಾರೆ. ನಿರ್ಮಲಾ ಸೀತಾರಾಮನ್ ಅವರ ಭಾರತೀಯ ಜವಳಿಗಳ ಮೇಲಿನ ಪ್ರೀತಿ ಅಪಾರ. ಹೀಗಾಗಿ ಪ್ರತಿ ಬಾರಿಯಂತೆಯೇ ಈ ಸಲವೂ ಕೈಯಿಂದ ನೇಯ್ದ ಜವಳಿ ಮತ್ತು ಕರಕುಶಲವಿರುವ ಸೀರೆಯಲ್ಲಿ ಸಚಿವೆ ಮಿಂಚಿದ್ದಾರೆ.
Advertisement
Advertisement
ಈ ಬಾರಿ ಬಜೆಟ್ (Union Budget 2024) ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ನೀಲಿಬಣ್ಣದ ಸೀರೆಯುಟ್ಟು ಗಮನ ಸೆಳೆದಿದ್ದಾರೆ. ತುಸಾರ್ ಸಿಲ್ಕ್ ಸೀರೆ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಪ್ರತಿ ಬಾರಿ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಧರಿಸುತ್ತಿದ್ದ ಸೀರೆಯದ್ದೇ ಸುದ್ದಿ. ಹಾಗಾದ್ರೆ ಯಾವ ವರ್ಷದಲ್ಲಿ ಯಾವ ಬಣ್ಣದ ಸೀರೆಯುಟ್ಟಿದ್ರು ಎಂಬ ವಿವರ ಇಲ್ಲಿದೆ. ಇದನ್ನೂ ಓದಿ: ಕೇಂದ್ರ ಬಜೆಟ್ 2024 – ಯಾರಿಗೆ ಲಾಭ? ಯಾರಿಗೆ ನಷ್ಟ?
Advertisement
Advertisement
2024 (ತುಸಾರ್ ಸಿಲ್ಕ್ ಸೀರೆ)
ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಧರಿಸಿದ್ದ ಸೀರೆ ನೀಲಿ ಬಣ್ಣದ್ದು. ತುಸಾರ್ ರೇಷ್ಮೆ ಸೀರೆ. ಈ ಸೀರೆ ಮಧ್ಯದಲ್ಲಿ ಕೆನೆ ಬಣ್ಣದ ಚಿತ್ತಾರವಿದೆ. ಬಳ್ಳಿ ಹಾಗೂ ಎಲೆಗಳಿಂದ ಕೂಡಿರುವ ಚಿತ್ತಾರ ಸೀರೆಯಲ್ಲಿದೆ. ಸೀರೆಗೊಪ್ಪುವ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ತುಸಾರ್ ರೇಷ್ಮೆಯು ಅದರ ವಿಶಿಷ್ಟ ವಿನ್ಯಾಸ ಮತ್ತು ಚಿನ್ನದ ಹೊಳಪಿಗೆ ಹೆಸರುವಾಸಿಯಾಗಿದೆ.
2023 (ಕೆಂಪು ಬಣ್ಣದ ಬಾರ್ಡರ್ ಸೀರೆ)
ಕಳೆದ ವರ್ಷ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಕೆಂಪು ಬಣ್ಣದ ಬಾರ್ಡರ್ ಸೀರೆ ಉಟ್ಟಿದ್ದರು. ಟೆಂಪಲ್ ಸೀರೆಗಳನ್ನು ಸಾಮಾನ್ಯವಾಗಿ ಹತ್ತಿ, ರೇಷ್ಮೆ ಅಥವಾ ಮಿಶ್ರಣದಿಂದ ತಯಾರಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಇಂಥ ಸೀರೆಗಳನ್ನು ಧರಿಸಲಾಗುತ್ತದೆ. ಸೀತಾರಾಮನ್ ಅವರು ಬಜೆಟ್ ದಿನದಂದು ಕಪ್ಪು ಅಂಚಿರುವ, ಗೋಲ್ಡ್ ಬಣ್ಣದ ಬಾರ್ಡರ್ ಇರುವ ಟೆಂಪಲ್ ಸೀರೆ ಧರಿಸಿದ್ದರು. ಸುಂದರವಾದ ಸೀರೆಯು ನಕ್ಷತ್ರದಂತಹ ವಿನ್ಯಾಸವನ್ನು ಸಹ ಒಳಗೊಂಡಿತ್ತು. ಇದನ್ನೂ ಓದಿ: Budget 2024: ಜನಸಂಖ್ಯಾ ಸ್ಫೋಟ ತಡೆಗೆ ಉನ್ನತ ಅಧಿಕಾರಿಗಳ ಸಮಿತಿ
2022 (ಕಂದು ಬಣ್ಣದ ಸೀರೆ)
2022 ರ ಬಜೆಟ್ ಮಂಡನೆ ಸಂದರ್ಭದಲ್ಲಿ, ಸೀತಾರಾಮನ್ ಒಡಿಶಾದ ಗಂಜಾಂ ಜಿಲ್ಲೆಯ ಬೊಮ್ಕೈ ಗ್ರಾಮದಲ್ಲಿ ತಯಾರಿಸಲಾಗುತ್ತಿದ್ದ ಬೊಮ್ಕೈ ಸೀರೆಯನ್ನು ಧರಿಸಿದ್ದರು. ಅವರು ಬಿಳಿ-ಬಿಳಿ ಬಾರ್ಡರ್ ಇರುವ ಕಂದು ಬಣ್ಣದ ಸೀರೆಯನ್ನು ಧರಿಸುವ ಮೂಲಕ ಸರಳವಾಗಿ ಕಾಣಿಸಿಕೊಂಡಿದ್ದರು.
2021 (ಕೆಂಪು ಮತ್ತು ಬಿಳಿ ಬಣ್ಣದ ಸೀರೆ)
ನಿರ್ಮಲಾ ಸೀತಾರಾಮನ್ ಅವರು 3ನೇ ಬಜೆಟ್ ಮಂಡನೆ ವೇಳೆ ಹೈದರಾಬಾದ್‌ನ ಪೋಚಂಪಲ್ಲಿ ಗ್ರಾಮದಲ್ಲಿ ತಯಾರಿಸುವ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು. ಸೀರೆಗೊಪ್ಪುವ ಚಿನ್ನದ ಸರ, ಬಳೆಗಳು ಮತ್ತು ಕಿವಿಯೋಲೆ ಧರಿಸಿದ್ದರು. ಇದನ್ನೂ ಓದಿ: ಪಿಎಂ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು – ಒಂದು ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ
2020 (ಹಳದಿ ಚಿನ್ನದ ರೇಷ್ಮೆ ಸೀರೆ)
ಎರಡನೇ ಬಜೆಟ್ ಮಂಡನೆ ಸಂದರ್ಭದಲ್ಲಿ ಸೀತಾರಾಮನ್ ಹಳದಿ-ಚಿನ್ನದ ರೇಷ್ಮೆ ಸೀರೆ ಧರಿಸಿ ಸುದ್ದಿಯಾಗಿದ್ದರು. ನೀಲಿ ಬಣ್ಣದ ಅಂಚಿರುವ ಸೀರೆ ಮತ್ತು ಅದಕ್ಕೊಪ್ಪುವ ಬ್ಲೌಸ್ ಧರಿಸಿ ಮಿಂಚಿದ್ದರು. ಹಳದಿ ಬಣ್ಣವು ಸಮೃದ್ಧಿಯನ್ನು ಸಂಕೇತಿಸುತ್ತದೆ. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಭರವಸೆಯನ್ನು ಪ್ರತಿಬಿಂಬಿಸುತ್ತದೆ.
2019 (ಗುಲಾಬಿ, ಚಿನ್ನದ ಬಾರ್ಡರ್ ಮಂಗಳಗಿರಿ ಸೀರೆ)
2019 ರಲ್ಲಿ ಕೇಂದ್ರ ಬಜೆಟ್ ಮಂಡನೆ ಸಮಯದಲ್ಲಿ ಸೀತಾರಾಮನ್ ಅವರು ಗೋಲ್ಡ್ ಬಾರ್ಡರ್ ಇರುವ ಪಿಂಕ್ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ಇದನ್ನೂ ಓದಿ: 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುವ ಗುರಿ: ವಿತ್ತ ಮಂತ್ರಿ