– ನಕಲಿ ಕಂಪನಿಗಳ ಮೂಲಕವೂ ಬಿಜೆಪಿ ಚುನಾವಣಾ ಬಾಂಡ್ ಪಡೆದಿದೆ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ರಾಜೀನಾಮೆ ಕೊಡಬೇಕು ಎಂದು ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಆಗ್ರಹಿಸಿದ್ದಾರೆ.
Advertisement
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ ಮಾತುಗಳು ಇಂದು ಸತ್ಯವಾಗಿದೆ. ಒಂದು ವ್ಯವಸ್ಥಿತ ರೂಪದಲ್ಲಿ ಚುನಾವಣ ಬಾಂಡ್ ಬಿಜೆಪಿಗೆ ನೀಡಲಾಗಿದೆ. ಇಡಿ ದಾಳಿ ನಡೆಸಿದ ಕೂಡಲೇ ಅಥವಾ ಬಂಧನದ ಬಳಿಕ ಬಾಂಡ್ ಖರೀದಿಸಿದೆ. ಹಲವಾರು ಪ್ರಕರಣಗಳಲ್ಲಿ ಇದೇ ರೀತಿಯಾಗಿದೆ. ಹೈದರಾಬಾದ್ ಮೂಲದ ಗೇಮಿಂಗ್ ಕಂಪನಿ ಜೊತೆಗೂ ಇದೇ ಕಥೆಯಾಗಿದೆ. ಚುನಾವಣಾ ಬಾಂಡ್ ಖರೀದಿಸಿ ಬಿಜೆಪಿಗೆ ನೀಡಿದ ಮೇಲೆ ಇಡಿ ಮೌನವಾಗಿದೆ. ಇನ್ನೊಂದು ಕಂಪನಿ ಬಿಜೆಪಿಗೆ ಬಾಂಡ್ ನೀಡಿ ಕೇಂದ್ರ ಸರ್ಕಾರದಿಂದ ದಕ್ಷಿಣ ಭಾರತದಲ್ಲಿ ಸಾಕಷ್ಟು ಟೆಂಡರ್ ಪಡೆದುಕೊಂಡಿದೆ. 500 ಕೋಟಿಗೂ ಅಧಿಕ ಬಾಂಡ್‌ಗಳನ್ನು ಒಂದೊಂದು ಕಂಪನಿ ಖರೀದಿಸಿದೆ. ಈಗ ಬೆಂಗಳೂರಿನಲ್ಲಿ ಇದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ಸುಮ್ಮನೆ ಆಗಿಲ್ಲ, ಪ್ರಾಥಮಿಕ ತನಿಖೆ ಬಳಿಕ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಸೂಚಿಸಿದೆ. ಹಣಕಾಸು ಸಚಿವರು ಮೊದಲ ಆರೋಪಿ, ಇಡಿ ಎರಡನೇ ಆರೋಪಿ, ರಾಜ್ಯ ಬಿಜೆಪಿ ನಾಯಕರು ಮೂರನೇ ಆರೋಪಿಯಾಗಿದ್ದಾರೆ. 8,000 ಕೋಟಿ ಬಾಂಡ್ ರೂಪದಲ್ಲಿ ಪಡೆಯಲಾಗಿದೆ. ಕಾರ್ಪೊರೇಟ್ ಕಂಪನಿಗಳ ಮೂಲಕ ಹಣ ಪಡೆಯಲಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು: ಸಿ.ಟಿ.ರವಿ
Advertisement
Advertisement
ಹಣಕಾಸು ಸಚಿವರು ಒಬ್ಬರೇ ಮಾಡಲು ಅವರಿಗೆ ಧೈರ್ಯ ಇಲ್ಲ. ಇದು ಯಾರ ಆದೇಶ, ಯಾರ ನಿರ್ದೇಶನದ ಮೇಲೆ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆರ್‌ಬಿಐ ಇದಕ್ಕೆ ಸಂಬಂಧಿಸಿದಂತೆ ಪತ್ರ ಬರೆದರೆ ಸರ್ಕಾರ ಅದನ್ನು ಕಸದ ಬುಟ್ಟಿಗೆ ಎಸೆಯಿತು. ಇದು ನಿಷ್ಪಕ್ಷಪಾತ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಚುನಾವಣಾ ಮೂಲ ಉದ್ದೇಶದ ಮೇಲೆ ಪ್ರಹಾರ ಮಾಡುತ್ತದೆ. ಹೆಚ್ಚು ಹಣವಿರುವ ಪಕ್ಷ ಬಾಂಡ್ ಹಣವನ್ನು ಬಳಸಿಕೊಂಡು ಚುನಾವಣೆ ಗೆಲ್ಲುತ್ತದೆ. ತಿನ್ನುತ್ತೇನೆ, ಕದಿಯುತ್ತೇನೆ ಮತ್ತು ಹಣಕ್ಕಾಗಿ ಪೀಡಿಸುತ್ತೇನೆ ಎಂದು ಸ್ಲೋಗನ್ ಬದಲಿಸಬಹುದು. ಇಷ್ಟೆಲ್ಲ ಆದ್ಮೇಲೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ
Advertisement
ಚೆಂದ ಕೊಡಿ ದಂಧೆ ತಗೊಳ್ಳಿ. ಟೆಂಡರ್ ತಗೊಳ್ಳಿ ಚೆಂದ ಕೊಡಿ. ಈ ಎರಡು ಮಾರ್ಗಗಳ ಮೂಲಕ ಬಿಜೆಪಿ ಹಣ ಪಡೆದಿದೆ. ಇದನ್ನು ನಾವು ಲಂಚ ಎನ್ನಬಹುದು. ಎಫ್‌ಐಆರ್ ಮೇಲೆ ಇನ್ನೊಂದು ಮಾರ್ಗ ಉಲ್ಲೇಖಿಸಬಹುದು. ಪೋಸ್ಟ್ ರೇಡ್, ಹಫ್ತಾ ವಸೂಲಿ ಅಂತಾ ಕರೆಯಬಹುದು. ಬಹಳಷ್ಟು ಕಂಪನಿಗಳ ಮೇಲೆ ಇಡಿ ರೇಡ್ ಆದ್ಮೇಲೆ ಬಾಂಡ್ ಖರೀದಿಸಿವೆ. ನಕಲಿ ಕಂಪನಿಗಳ ಮೂಲಕವೂ ಬಿಜೆಪಿ ಚುನಾವಣಾ ಬಾಂಡ್ ಪಡೆದಿದೆ. ಬಿಜೆಪಿ ಐದೂವರೆ ವರ್ಷದಲ್ಲಿ 6,000 ಕೋಟಿಗೂ ಅಧಿಕ ಹಣ ಸಂಗ್ರಹಿಸಿದೆ. ಧಮ್ಕಿ ಹಾಕಿ ಬಾಂಡ್ ಖರೀದಿಸುವಂತೆ ಮಾಡಲಾಗಿದೆ. ಇದರ ಬಗ್ಗೆ ಎಸ್‌ಐಟಿ ತನಿಖೆ ಆಗಲೇಬೇಕಿದೆ. ಜೆಪಿಸಿ ತನಿಖೆಗೆ ನಾವು ಒತ್ತಾಯ ಮಾಡಿದ್ದೆವು. ನಾವು ಹೇಳಿದಂತೆ ಬೆಂಗಳೂರಿನಲ್ಲಿ ಎಫ್‌ಐಆರ್ ಆಗಿಲ್ಲ. ಕೋರ್ಟ್ ನಿರ್ದೇಶನದಂತೆ ಎಫ್‌ಐಆರ್ ಆಗಿದೆ. ಕೇಂದ್ರ ಹಣಕಾಸು ಸಚಿವೆ ರಾಜೀನಾಮೆ ನೀಡಬೇಕು. ಹಣಕಾಸು ಸಚಿವೆಯ ರಾಜೀನಾಮೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.