ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಕೆಲಸವನ್ನು ಯಾಕೆ ಮಾಡಿದರು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನೆಹರೂ ಅವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಮೂಲಕ ಅದನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸಿದ್ದಾರೆ. ಇದು ಆಂತರಿಕ ವಿಚಾರವಾಗಿರುವುದರಿಂದ ಜಾಗತಿಕ ವೇದಿಕೆಗೆ ಹೋಗಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇದು ಉತ್ತರ ಪ್ರದೇಶ ಅಲ್ಲ, ಬಂಗಾಳ: ಬಿಜೆಪಿಗೆ ಮಮತಾ ತಿರುಗೇಟು
Advertisement
Advertisement
ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಯುದ್ಧ ಪ್ರಾರಂಭವಾದ ನಂತರ 1948ರ ಜನವರಿಯಂದು ನೆಹರೂ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (UNSC) ಮನವಿ ಮಾಡಿದ್ದರು. ಅವರ ಮನವಿಯನ್ನು ಆಧರಿಸಿ ಕೌನ್ಸಿಲ್ ಎರಡು ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಭಾರತ ಮತ್ತು ಪಾಕಿಸ್ತಾನಕ್ಕಾಗಿ ವಿಶ್ವಸಂಸ್ಥೆಯ ಆಯೋಗವನ್ನು ಸ್ಥಾಪಿಸಿತು. ಕಾಶ್ಮೀರ ಸಮಸ್ಯೆ ಮೂಲಭೂತವಾಗಿ ಭಾರತಕ್ಕೆ ಸಂಬಂಧಿಸಿದ ವಿಷಯ. ಅದನ್ನು ಕಾಂಗ್ರೆಸ್, ವಿಶ್ವಸಂಸ್ಥೆಗೆ ಕೊಂಡೊಯ್ಯಿತು. ಬ್ರಿಟಿಷರು ಅವರಿಗೆ ಏನಾದರೂ ಸಲಹೆ ನೀಡಿರಬಹುದು. ಸಮಸ್ಯೆ ಸುಧಾರಿಸುವುದಿಲ್ಲ ಅಂತ ಯುಎನ್‌ಗೆ ಕೊಂಡೊಯ್ದರು ಎಂದು ಸನ್ನಿವೇಶ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಪಾಕಿಸ್ತಾನವನ್ನು ಉಲ್ಲೇಖಿಸಿದ ಸೀತಾರಾಮನ್, ಇದುವರೆಗೂ ನಮ್ಮ ನೆರೆಹೊರೆಯವರು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ. ಇದು ಜಾಗತಿಕ ವೇದಿಕೆಗೆ ಹೋಗಬಾರದ ವಿಷಯ. ಇದು ಮೂಲಭೂತವಾಗಿ ಭಾರತೀಯ ಸಮಸ್ಯೆಯಾಗಿದೆ. ನಾವು ಈಗ ಅದನ್ನು ನಿಭಾಯಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ IAS ಅಧಿಕಾರಿ ನಿಯಾಜ್ ಖಾನ್‌ಗೆ ನೋಟಿಸ್: MP ಗೃಹ ಸಚಿವ
Advertisement
ಜಮ್ಮು ಮತ್ತು ಕಾಶ್ಮೀರಕ್ಕೆ 2022-23ನೇ ಸಾಲಿನಲ್ಲಿ 1.42 ಲಕ್ಷ ಕೋಟಿ ರೂ. ಹಣ ಮೀಸಲಿಡಲು ಬಜೆಟ್‌ಗೆ ಸಂಸತ್ ಬುಧವಾರ ಅನುಮೋದನೆ ನೀಡಿತು. ರಾಜ್ಯಸಭೆಯು ಸಂಬಂಧಿತ ಮಸೂದೆಗಳನ್ನು ಲೋಕಸಭೆಗೆ ಹಿಂದಿರುಗಿಸಿತು. ಲೋಕಸಭೆಯು ಮಾರ್ಚ್ 14 ರಂದು ಮಸೂದೆಗಳನ್ನು ಅಂಗೀಕರಿಸಿತ್ತು.