ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5ರ ಬಜೆಟ್‍ಗೆ ಭಾರೀ ಸಿದ್ಧತೆ ನಡೆಸುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಮೊದಲ ಬಜೆಟ್‍ನ ಪೂರ್ವಭಾವಿ ಸಲಹಾ ಸಭೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ವಲಯಕ್ಕೆ ನಿರ್ಮಲಾ ಅವರು ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಮುಂದಿನ 5 ವರ್ಷಗಳಲ್ಲಿ ರೈಲು, ರಸ್ತೆ, ಡಿಜಿಟಲ್ ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ಬರೋಬ್ಬರಿ 100 ಲಕ್ಷ ಕೋಟಿ ವೆಚ್ಚ ಮಾಡುವ ಬಜೆಟ್ ಹೊಂದಿರಲಿದೆ ಎನ್ನಲಾಗಿದೆ.
Advertisement
ಈ ಮೊತ್ತದಲ್ಲಿ ಸಾರಿಗೆ ವಿಭಾಗಕ್ಕೆ ಹೆಚ್ಚು ಹಣ ಮೀಸಲು ಇರಿಸುವ ಸಾಧ್ಯತೆ ಇದ್ದು, ನಂತರ ಗೃಹ ನಿರ್ಮಾಣ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆ ಆಗಲಿದೆ. ಇದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ನಿರ್ಮಲಾ ಮತ್ತವರ ತಂಡದ ಲೆಕ್ಕಾಚಾರವಾಗಲಿದೆ.