ಬೆಂಗಳೂರು: ರಾಜ್ಯಸಭೆ ಚುನಾವಣೆಯ ಒಂದು ಸೀಟ್‍ಗೆ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಳಿಸಲಾಗಿದೆ.
Advertisement
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ಪ್ರಮುಖ ನಾಯಕರ (ಕೋರ್ ಕಮಿಟಿ) ಸಭೆ ಶನಿವಾರ ನಡೆಯಿತು.
Advertisement
Advertisement
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಒಂದು ಸ್ಥಾನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಅಂತಿಮಗೊಂಡಿದೆ. ಇದನ್ನೂ ಓದಿ: ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ
Advertisement
ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ಜೈರಾಂ ರಮೇಶ್ ಅವರಿಂದ ತೆರವಾಗಲಿರುವ ಮೂರು ಸ್ಥಾನ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಲಿರುವ ಸ್ಥಾನಗಳಿಗೆ ಈ ಚುನಾವಣೆ ನಡೆಯಲಿದೆ. ಈ ಪೈಕಿ ನಿರ್ಮಲಾ ಸೀತಾರಾಮನ್ ಮತ್ತೆ ಒಂದು ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗಿದೆ. ಇದನ್ನೂ ಓದಿ: ಹಿಂದಿ ಅಥವಾ ಯಾವುದೋ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ: TN ರಾಜ್ಯಪಾಲ ಆರ್.ಎನ್.ರವಿ
ಇನ್ನುಳಿದಂತೆ ರಾಜ್ಯಸಭಾ ಮೂರನೇ ಸ್ಥಾನಕ್ಕೆ ಲಹರಿ ವೇಲು, ಪ್ರಕಾಶ್ ಶೆಟ್ಟಿ ಹೆಸರು ಶಿಫಾರಸ್ಸು ಆಗಿದ್ದು, ಮೂರನೇ ಸ್ಥಾನಕ್ಕೆ ಮತಗಳ ಕೊರತೆ ಎದುರಾಗಲಿದೆ. ಹೆಚ್ಚುವರಿ ಮತಗಳನ್ನ ಅನ್ಯಪಕ್ಷಗಳಿಂದ ಪಡೆಯುವಂತೆ ಸೂಚಿಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹೆಸರು ರಾಜ್ಯಸಭೆ ಮತ್ತು ಪರಿಷತ್ ಎರಡಕ್ಕೂ ಪ್ರಸ್ತಾಪ ಆಗಿರುವ ಬಗ್ಗೆ ವರದಿಯಾಗಿದ್ದು, ಇನ್ನೊಂದು ಸೀಟ್‍ಗೆ ಕೆ.ಸಿ.ರಾಮಮೂರ್ತಿ ಸೇರಿದಂತೆ 5 ಹೆಸರು ಶಿಫಾರಸ್ಸು ಆಗಿದೆ. ವಿಧಾನ ಪರಿಷತ್‍ನ 1 ಸ್ಥಾನಕ್ಕೆ ವಿಜಯೇಂದ್ರ ಹೆಸರು ಅಂತಿಮಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಉಳಿದ ಮೂರು ಸ್ಥಾನಕ್ಕೆ ತಲಾ 5 ಹೆಸರುಗಳಂತೆ 15 ಹೆಸರು ಕೇಳಿ ಬಂದಿದೆ.
ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು 15 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಒಟ್ಟು 57 ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದೆ.