– ರಕ್ಷಣಾ ಇಲಾಖೆ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದ ಹೀಗಿದೆ
– ಬೆಂಗಳೂರಿನಿಂದ ಏರ್‍ಶೋ ಶಿಫ್ಟ್ ಅನುಮಾನ
ಬೆಂಗಳೂರು: ರಕ್ಷಣಾ ಇಲಾಖೆ ಭೂಮಿಯನ್ನು ವಿವಿಧ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರಕ್ಕೆ ನೀಡಲು ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಸಿಎಂ ಕುಮಾರಸ್ವಾಮಿ ಅವರು ಭೂಮಿ ವರ್ಗಾವಣೆ ಕುರಿತು ಸಭೆ ನಡೆಸಿದರು.
ಬೆಂಗಳೂರಿನಲ್ಲಿರುವ 10 ಪ್ರಕರಣಗಳ ಭೂಮಿಯನ್ನ ರಾಜ್ಯ ಸರ್ಕಾರಕ್ಕೆ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ಸುಮಾರು 282 ಕೋಟಿ ಮೌಲ್ಯದ 45,165 ಚದರ ಮೀಟರ್ ರಕ್ಷಣಾ ಭೂಮಿಯನ್ನ ರಾಜ್ಯ ಸರ್ಕಾರಕ್ಕೆ ನೀಡಲು ಸಮ್ಮತಿಸಿದೆ. ಜೊತೆಗೆ 10,654 ಚದರ ಮೀಟರ್ ಜಾಗವನ್ನ ಬಾಡಿಗೆ ರೂಪದಲ್ಲಿ ನೀಡಲು ಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಸಭೆ ಬಳಿಕ ಜಂಟಿ ಸುದ್ದಿಗೋಷ್ಟಿ ನಡೆಸಿದ್ರು. ಹಲವು ವರ್ಷಗಳಿಂದ ವಿವಾದದಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಿವೆ ಅಂತ ಸಿಎಂ ಹೇಳಿದರು.
ಇಲಾಖೆ ಭೂಮಿಗೆ ಬದಲಾಗಿ ಅಷ್ಟೇ ಮೌಲ್ಯದ ಭೂಮಿ ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ, ಕೂಡಲೇ ಈ ಜಾಗಗಳಲ್ಲಿ ಕಾಮಗಾರಿ ಪ್ರಾರಂಭಿಸಬಹುದು. 2019ರ ಏರ್‍ಶೋ ಬೆಂಗಳೂರಿನಲ್ಲೇ ನಡೆಯುವ ಸಾಧ್ಯತೆ ಇದೆ. ಬೆಂಗಳೂರಿನಿಂದ ಲಖನೌಗೆ ಏರ್‍ಶೋ ಶಿಫ್ಟ್ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಅಂತ ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಾಗೂ ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಬೆಂಗಳೂರು ಮೂಲಸೌಕರ್ಯಾಭಿವೃದ್ದಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿ ವರ್ಗಾಯಿಸುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದ ವಿಡಿಯೊ ನೋಟ. pic.twitter.com/CmAxqwqIH9
— CM of Karnataka (@CMofKarnataka) August 4, 2018
ಅನೇಕ ರಾಜ್ಯಗಳು ಏರ್ ಶೋ ಆತಿಥ್ಯ ವಹಿಸಲು ಬೇಡಿಕೆಯಿಟ್ಟಿವೆ. ಆದರೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಅಲ್ಲದೆ, ಯಾವಾಗ ಏರ್ ಶೋ ಮಾಡಬೇಕು ಅನ್ನೋ ಅರಿವು ಇದೆ ಅಂತಲೂ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ, ಸಿಎಂ ಕುಮಾರಸ್ವಾಮಿ ಅವರು ವೈಮಾನಿಕ ಪ್ರದರ್ಶನ ನಮ್ಮಲ್ಲೇ ಮುಂದುವರಿಸಿ ಅಂತ ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ರಕ್ಷಣಾ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಧ್ಯೆ ನಡೆದಿರುವ ಒಪ್ಪಂದ:
1. ಈಜೀಪುರ ಒಳ ವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗಿನ 25 ಮೀಟರ್ ರಸ್ತೆ ನಿರ್ಮಾಣಕ್ಕೆ 2015 ಬೆಂಗಳೂರು ಮಾಸ್ಟರ್ ಪ್ಲಾನ್ ಅನ್ವಯ ಭೂಮಿ.
2. ಬ್ಯಾಟರಾಯನಪುರದ ಸಂಜೀವಿನಗರ ವಾರ್ಡ್ 7ರಿಂದ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಂಪರ್ಕ ರಸ್ತೆ.
3. ಹೆಬ್ಬಾಳದ ಸರೋವರ ಲೇಔಟ್‍ನಿಂದ ಅಮ್‍ಕೋ ಲೇಔಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಂಪರ್ಕ ರಸ್ತೆ ನಿರ್ಮಾಣ.
4. ಹೊಸೂರು ಲಸ್ಕರ್ ರಸ್ತೆಯ ವಿಸ್ತರಣೆ.
5. ಹಾಸ್‍ಮೆಟ್ ಆಸ್ಪತ್ರೆಯಿಂದ ವಿವೇಕನಗರ ವರೆಗಿನ ಐಎಸ್‍ಟಿ ಮುಖ್ಯರಸ್ತೆ ವಿಸ್ತರಣೆ.
6. ಅಗರಂ ರಸ್ತೆ ಅಗಲಿಕರಣ.
7. ಕಾವಲಬೈರಸಂದ್ರ ಮುಖ್ಯರಸ್ತೆಯಿಂದ ಮೋದಿ ಗಾರ್ಡನ್‍ವರೆಗಿನ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಭೂಮಿ ಹಸ್ತಾಂತರ.
8. ಈಜೀಪುರ ಮುಖ್ಯರಸ್ತೆಯಲ್ಲಿ ಒಳ ವರ್ತುಲ ರಸ್ತೆಯ ಜಂಕ್ಷನ್, ಸೋನಿ ವಲ್ರ್ಡ್ ಜಂಕ್ಷನ್ ಮತ್ತು ಕೇಂದ್ರೀಯ ಸದನ ಜಂಕ್ಷನ್‍ವರೆಗೆ ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅಗತ್ಯವಾದ ಭೂಮಿ.
(ಈ 8 ಯೋಜನೆಗಳಲ್ಲಿ 45 ಸಾವಿರದ 165.84 ಚದುರ ಮೀಟರ್ – 282.09 ಕೋಟಿ ರೂಪಾಯಿ ಮೌಲದ್ಯ ಭೂಮಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಿರುವ ರಕ್ಷಣಾ ಇಲಾಖೆ. ಇದಕ್ಕೆ ಪರ್ಯಾಯವಾಗಿ, ರಾಜ್ಯ ಸರ್ಕಾರ ಕೂಡ ರಕ್ಷಣಾ ಇಲಾಖೆಗೆ ಇಷ್ಟೇ ಮೌಲ್ಯದ ಭೂಮಿಯನ್ನ ಬೇರೆ ಕಡೆ ಕೊಡಲಿದೆ.)
9. ಬಾಣಸವಾಡಿಯಲ್ಲಿ ರೈಲ್ವೆ ಮೇಲ್ಸೇತುವೆ ಲೂಪ್ ರಸ್ತೆ ನಿರ್ಮಾಣಕ್ಕೆ ಪರವಾನಗಿ.
10. ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 10,654. 11 ಚದರ ಅಡಿ ಭೂಮಿಗೆ ಪರವಾನಗಿ.
(ರಕ್ಷಣಾ ಇಲಾಖೆಗೆ ರಾಜ್ಯ ಸಕಾರ ಪರ್ಯಾಯವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಲಕ್ಷದ 53 ಸಾವಿರದ 137 ಪಾಯಿಂಟ್ 95 ಚದುರ ಮೀಟರ್ – 488.42 ಕೋಟಿ ಮೌಲ್ಯ ಭೂಮಿ ಹಸ್ತಾಂತರಿಸಲಿದೆ)
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹಾಗೂ ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಬೆಂಗಳೂರು ಮೂಲಸೌಕರ್ಯಾಭಿವೃದ್ದಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿ ವರ್ಗಾಯಿಸುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದ ವಿಡಿಯೊ ನೋಟ. pic.twitter.com/SGgX8tu65c
— CM of Karnataka (@CMofKarnataka) August 4, 2018
— CM of Karnataka (@CMofKarnataka) August 4, 2018
Union Defense Minister Nirmala Seetharaman and Chief Minister HD Kumaraswamy held a meeting regarding the transfer of defence land for Infrastructure development projects of Bengaluru. pic.twitter.com/OpAxhF8SsS
— CM of Karnataka (@CMofKarnataka) August 4, 2018