ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಬಜೆಟ್ಟನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ್ದು, ತಮ್ಮ ಚೊಚ್ಚಲ ಬಜೆಟ್ ನಲ್ಲೇ ಮಹಿಳೆಯರಿಗೆ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.
ನಾರಿಯಿಂದ ನಾರಾಯಣ ಎಂದು ಉಲ್ಲೇಖಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಚಿವೆ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯ ಸ್ಥಿತಿಗತಿ ಬದಲಾಗದೆ ವಿಶ್ವ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂಬ ವಿವೇಕಾನಂದ ಮಾತಿನಂತೆ ಮಹಿಳೆಯರ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್
Advertisement
Finance Minister Nirmala Sitharaman: I draw attention to the women of India, 'Naari tu Narayaani'. This Government believes that we can progress, with greater women participation. #Budget2019 pic.twitter.com/eASF2om6Fs
— ANI (@ANI) July 5, 2019
Advertisement
ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಹೀಗಾಗಿ ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗೀದಾರರಾಗಬೇಕು ಎಂದು ಮನವಿ ಮಾಡಿಕೊಂಡರು. ಅಲ್ಲದೆ ಮಹಿಳಾ ಸಬಲೀಕರಣಕ್ಕಾಗಿ ಈ ಹಿಂದೆ ಜಾರಿಗೊಳಿಸಿರುವ ಮುದ್ರಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸೆಲ್ಫ್ ಹೆಲ್ಪ್, ಗ್ರೂಪ್ ಸಪೋರ್ಟ್ ನಂತಹ ಯೋಜನೆಗಳು ಮುಂದುವರಿಯಲಿವೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್ – ಯಾವುದು ಏರಿಕೆ? ಯಾವುದು ಇಳಿಕೆ?
Advertisement
Finance Minister Nirmala Sitharaman: To further encourage women entrepreneurship, Women Self Help Group(SHG) Interest Subvention Programme to be expanded to all districts in India https://t.co/j4bTPIZfFE
— ANI (@ANI) July 5, 2019
Advertisement
2022ರಂದು ನಡೆಯುವ 75ನೇ ಸ್ವಾತಂತ್ರ್ಯ ದಿನಾಚರಣೆಯ ಒಳಗಡೆ ಗ್ರಾಮೀಣ ಮಹಿಳೆಯರಿಗೆ ಗ್ಯಾಸ್ ಕನೆಕ್ಷನ್, ವಿದ್ಯುತ್ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯ್ತಿ ಸಾಲ ಹಾಗೂ ಮುದ್ರಾ ಯೋಜನೆಯಡಿ ಮಹಿಳಾ ಸಂಘಗಳಿಗೆ 1 ಲಕ್ಷ ರೂ ವರೆಗೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂ. ಓವರ್ ಡ್ರಾಫ್ಟ್ ನೀಡಲಾಗುತ್ತದೆ ಎಂದು ಸೀತಾರಾಮನ್ ತಿಳಿಸಿದರು.