ನವದೆಹಲಿ: ಮಮತಾ ಬ್ಯಾನರ್ಜಿ ಅವರು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಬಗ್ಗೆ ಈ ರೀತಿ ಕಾಮೆಂಟ್ ಮಾಡುತ್ತಿದ್ದರೇ ಅವರು ಸಿಎಂ ಸ್ಥಾನಕ್ಕೆ ಅರ್ಹರಲ್ಲ ಎಂದು ನಿರ್ಭಯಾ (2012ರ ದೆಹಲಿ ಅತ್ಯಾಚಾರ ಸಂತ್ರಸ್ತೆ) ತಾಯಿ ಆಶಾ ದೇವಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರು ಒಂದು ಮಹಿಳೆಯಾಗಿ ಈ ರೀತಿ ಹೇಳಿಕೆ ನೀಡಿರುವುದು ಅವರ ಹುದ್ದೆಗೆ ಸರಿ ಹೊಂದುವುದಿಲ್ಲ ಎಂದು ಹೇಳಿದರು.
Advertisement
Advertisement
ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಡಿಯಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೊಳಗಾದ ವರದಿಗಳ ಬಗ್ಗೆ ಇದು ಅತ್ಯಾಚಾರವೋ? ಅಥವಾ ಅವಳು ಗರ್ಭಿಣಿಯಾಗಿದ್ದಾಳೋ? ಎಂದು ಟೀಕಿಸಿದ್ದರು. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಹೆಚ್ಚಿಗೆ ಅಂಕ ಬರುವಂತೆ ಮಾಡುತ್ತೇನೆಂದು ವಿದ್ಯಾರ್ಥಿನಿ ಕೆನ್ನೆಗೆ ಮುತ್ತು ಕೊಟ್ಟ ಶಿಕ್ಷಕ
Advertisement
Advertisement
ಅತ್ಯಾಚಾರದಿಂದ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿಯವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿಯಾಗಿದ್ದಳೋ ಅಥವಾ ಪ್ರೇಮ ಸಂಬಂಧ ಹೊಂದಿದ್ದಾಳೋ? ಅವರು ವಿಚಾರಿಸಿದ್ದಾರೆಯೇ? ಈ ಕುರಿತು ನಾನು ಸ್ವತಃ ಪೊಲೀಸರನ್ನು ಕೇಳಿದೆ. ಅವರು ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆ ಬಾಲಕಿಗೆ ಹುಡುಗನ ಜೊತೆ ಅನೈತಿಕ ಸಂಬಂಧ ಇದೆ ಅಂತಾನೂ ತಿಳಿಸಿದ್ದಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಐತಿಹಾಸಿಕ ಮ್ಯೂಸಿಯಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ