ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ: ನಿರ್ಭಯಾ ತಂದೆ

Public TV
1 Min Read
nirbhaya father

ನವದೆಹಲಿ: ಹಂತಕರನ್ನು ಗಲ್ಲಿಗೇರಿಸಿದ ಬಳಿಕ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅವರು ಈಗ ನಮಗೆ ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ ಎಂದು ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್, ಅಪರಾಧಿಗಳು ಕೊನೆಯವರೆಗೆ ಹೋರಾಟ ಮಾಡಿದ್ದಾರೆ. ಆದರೆ ನಮ್ಮ ವಕೀಲರು ಕೂಡ ಪ್ರತಿ ಕ್ಷಣ, ಪ್ರತಿ ನಿಮಿಷ ಹೋರಾಡಿದ್ದಾರೆ. ನಾವು ಇದ್ದ ಕಡೆ ಅವರು ಇರುತ್ತಿದ್ದರು. ಆದರೆ ಕೊನೆಯದಾಗಿ ನಮಗೆ ಜಯವಾಯಿತು. ಏಕೆಂದರೆ ನಾವು ಸತ್ಯದ ಕಡೆ ಇದ್ದವು ಎಂದು ಪ್ರತಿಕ್ರಿಯಿಸಿದರು.

ಈ ಘಟನೆ ನಡೆದ ನಂತರ ಎಲ್ಲರು ಕಾನೂನು ಸುವ್ಯವಸ್ಥೆ ಬದಲಾಗುತ್ತೆ ಎಂದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಬದಲಾಗುತ್ತೆ. ಈಗ ನಮಗೆ ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. 10 ದಿನದೊಳಗೆ ನಾವು ನಮ್ಮ ವಕೀಲರನ್ನು ಭೇಟಿ ಮಾಡಿ, ನಮ್ಮ ಒಳ್ಳೆಯದನ್ನು ಬಯಸುವವರು, ಒಳ್ಳೆಯ ಜನರನ್ನು ಎಲ್ಲರನ್ನೂ ಒಟ್ಟಿಗೆ ಸೇರಿಸುತ್ತೇವೆ. ಈ ವೇಳೆ ಏಳು ವರ್ಷದಲ್ಲಿ ನಮ್ಮ ಕಾನೂನು ಹೋರಾಟದಲ್ಲಿ ಯಾವುದು ಸರಿಯಿರಲಿಲ್ಲ ಎಂಬುದನ್ನು ಲಿಸ್ಟ್ ಮಾಡಿ ಮಾಧ್ಯಮಕ್ಕೆ ತಿಳಿಸುತ್ತೇವೆ. ಬಳಿಕ ಸರ್ಕಾರದ ಬಳಿ ಹೋಗಿ ಇದನ್ನು ಬದಲಾಯಿಸಿ ಎಂದು ಹೇಳುತ್ತೇವೆ. ಇದಕ್ಕೆ ಯಾವುದೇ ಮಂತ್ರಿಯನ್ನಾದರೂ ಭೇಟಿ ಆಗಬೇಕು ಎಂದರೆ ನಾವು ಭೇಟಿ ಆಗುತ್ತೇವೆ. ಇದನ್ನು ಬದಲಿಸಿ ಎಂದು ಹೇಳುತ್ತೇವೆ. ಆಗ ದೇಶದ ಮಹಿಳೆಯರಿಗೆ ಸುರಕ್ಷೆ ಸಿಗುತ್ತದೆ ಎಂದರು.

ದೇಶದಲ್ಲಿ ಅತ್ಯಾಚಾರಿಗಳು ಇಂದಿನ ಘಟನೆಯಿಂದ 10 ದಿನ ಸರಿಯಾಗಿ ಊಟ ಮಾಡುವುದಿಲ್ಲ, ಸರಿಯಾಗಿ ನಿದ್ದೆ ಮಾಡುವುದಿಲ್ಲ. ತಪ್ಪು ಯಾವಾಗಲೂ ತಪ್ಪಾಗಿರುತ್ತೆ. ಅಪರಾಧಿಗಳನ್ನು ಗಲ್ಲಿಗೇರಿಸಿದನ್ನು ನೋಡಿ ಅತ್ಯಾಚಾರಿಗಳಿಗೆ ಈಗ ಭಯ ಶುರುವಾಗಿರುತ್ತೆ. ಇದು ಅತ್ಯಾಚಾರಿಗಳಿಗೆ ಎಚ್ಚರಿಕೆ ಗಂಟೆ ಎಂದು ತಿಳಿಸಿದರು. ನಾವು ಇಲ್ಲಿ ಎಚ್ಚರವಾಗಿದ್ದೇವೆ. ಆದರೆ ನಾವು ಸುಪ್ರೀಂ ಕೋರ್ಟ್‍ನಿಂದ ಹೊರ ಬರುತ್ತಿದ್ದಂತೆ ದೇಶದ ಹಲವು ಭಾಗಗಳಲ್ಲಿ ಹೋಳಿ ಆಚರಿಸುತ್ತಿದ್ದಾರೆ ಎಂಬುದು ತಿಳಿಯಿತು. ಅಪರಾಧಿಗಳನ್ನು ಗಲ್ಲಿಗೇರಿಸಿದ್ದಕ್ಕೆ ಇಡೀ ದೇಶ ಖುಷಿಯಿಂದ ಸಂಭ್ರಮಿಸುತ್ತಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *