ಹಂತಕರಿಗೆ ಗಲ್ಲು-ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಮೊದಲ ಪ್ರತಿಕ್ರಿಯೆ

Public TV
1 Min Read
Nirbhaya Convicts A P Singh

ನವದೆಹಲಿ: ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಆಗಿದೆ. ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ದೋಷಿಗಳ ಅರ್ಜಿ ವಜಾಗೊಳ್ಳುತ್ತಿದ್ದಂತೆ ಅಪರಾಧಿಗಳ ಪರ ವಾದ ಮಂಡಿಸಿದ್ದ ವಕೀಲ ಎ.ಪಿ.ಸಿಂಗ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.

ಸಂವಿಧಾನ ಅನುಗುಣವಾಗಿ ಎಲ್ಲ ಕಾರ್ಯಗಳು ನಡೆಬೇಕಿತ್ತು. ಹಾಗಾಗಿ ರಾತ್ರಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದೆ ಹೋಗಿ ಜೀವ ಉಳಿಸುವ ಕೆಲಸ ಮಾಡಲಾಯ್ತು. ನ್ಯಾಯಾಲಯದ ಮುಂದೆ ನಾನು ಹೊಸ ವಾದವನ್ನೇ ಮಂಡಿಸಿದ್ದೇನೆ. ದೋಷಿ ಅಕ್ಷಯ್ ಪುತ್ರ ತಂದೆಯನ್ನು ಕಾಣಲು ಬಿಹಾರದಿಂದ ಬಂದಿದ್ದಾನೆ. ತಂದೆಯ ಭೇಟಿಗೆ ಅವಕಾಶ ನೀಡಬೇಕಿತ್ತು. ಮುಖೇಶ್ ಕುಟುಂಬಸ್ಥರು ದೆಹಲಿಯ ನಿವಾಸಿಗಳು. ಆದ್ರೆ ಅಕ್ಷಯ್ ಕುಟುಂಬ ಬಿಹಾರನ ನಕ್ಸಲ್ ಪೀಡಿತ ಪ್ರದೇಶದಲ್ಲಿದೆ. ಎಂಟು ವರ್ಷದ ಮಗನಿಗೆ ತಂದೆಯನ್ನ ನೋಡುವ ಅವಕಾಶ ಸಿಗಲಿಲ್ಲ.

ಒಂದು ಮಗು ತಂದೆಯನ್ನ ನೋಡಿದ್ರೆ ಏನು ಆಗುತ್ತಿತ್ತು. ಮಗನಿಗೆ ತಂದೆಯ ಭೇಟಿಗೆ ಅವಕಾಶ ನೀಡದಿರೋದು ಇತಿಹಾಸದಲ್ಲಿ ಇರಲಿದೆ. ಇಂದು ಬಾಲ ವಿಕಾಸ ಇಲಾಖೆಗೆ ನಾಚಿಕೆ ಆಗಬೇಕು. ಅಕ್ಷಯ್ ನನ್ನು ನೀವು ಬಲತ್ಕಾರಿ, ಹಂತಕ ಎಂದು ಹೇಳುತ್ತೀರಿ. ಇಲ್ಲಿ ಆತನ ಪುತ್ರನ ತಪ್ಪೇನಿದೆ. ಮುಂದೊಂದು ದಿನ ಅಕ್ಷಯ್ ಪುತ್ರ ದೊಡ್ಡವನಾಗಿ ಸಂವಿಧಾನ ಓದಿದ್ರೆ, ಈ ವ್ಯವಸ್ಥೆ, ಜೈಲು ನಿಯಮ, ಮಾಧ್ಯಮ ತಂದೆಯ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ ಎಂಬ ಭಾವನೆ ಮೂಡುತ್ತದೆ. ನಿನ್ನೆ ಹೋದರೆ ಕೊರೊನಾ ಎಂದು ಹೇಳಿದರು. ಇಂದು ಕೋರ್ಟ್ ನತ್ತ ತಿರುಗಾಡುವ ಕೆಲಸವೇ ಆಯ್ತು. ಪವನ್ ತಾಯಿ ಅಂಗವಿಕಲೆಯಾಗಿದ್ದು, ಪುತ್ರನ ಭೇಟಿಗಾಗಿ ಕಾಯುತ್ತಿದ್ದಾರೆ. ಒಬ್ಬ ತಾಯಿಯ ನೋವನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬ ತಾಯಿ ಹಿಂದೆ ಎಲ್ಲರೂ ಓಡುತ್ತಿದ್ದಾರೆ. ಹಾಗಾದ್ರೆ ಪವನ್ ತಾಯಿಗೆ ಯಾವುದೇ ಬೆಲೆ ಇಲ್ವಾ? ಎಂಟು ವರ್ಷಗಳಿಂದ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ ಎಂದು ದೋಷಿ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.

Share This Article