– ನಾಳೆಗೆ ವಿಚಾರಣೆ ಮುಂದೂಡಿಕೆ
ನವದೆಹಲಿ: ನಿರ್ಭಯಾ ಪ್ರಕರಣದಿಂದ ಸಿಜೆಐ ಬೋಬ್ಡೆ ಹಿಂದೆ ಸರಿದಿದ್ದು ವಿಚಾರಣೆಯನ್ನು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಲಾಗಿದೆ.
ನಾಳೆ ಹೊಸಪೀಠ ರಚನೆಯಾಗಿ ವಿಚಾರಣೆ ಆರಂಭಗೊಳ್ಳಲಿದೆ. ಹೀಗಾಗಿ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಳಂಬವಾಗಲಿದೆ. ನಿರ್ಭಯಾ ಪ್ರಕರಣದಲ್ಲಿ ಸಿಜೆಐ ಎಸ್.ಎ.ಬೋಬ್ಡೆ ಅವರ ಸಹೋದರನ ಪುತ್ರ ಅರ್ಜುನ್ ಬೋಬ್ಡೆ ಸಂತ್ರಸ್ತೆಯ ತಾಯಿ ಪರವಾಗಿ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
Advertisement
#Nirbhaya rape case: Chief Justice of India (CJI) SA Bobde said, we will constitute another bench for hearing at 10:30 am tomorrow. https://t.co/dXlI9Fy0V7
— ANI (@ANI) December 17, 2019
Advertisement
ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಿತ್ತು. ಮುಖ್ಯ ನ್ಯಾ.ಎಸ್.ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅರ್ಜಿ ಬಂದಿತ್ತು. ಮುಖ್ಯನ್ಯಾಯಧೀಶರು ಪ್ರಕರಣದಿಂದ ಹಿಂದೆ ಸರಿದ ಕಾರಣ ಹೊಸಪೀಠದ ಮುಂದೆ ಬುಧವಾರ ಅರ್ಜಿಯ ವಿಚಾರಣೆ ನಡೆಯಲಿದೆ.
Advertisement
CJI Bobde recuses himself from hearing the case, says he will constitute a new Bench tomorrow at 10.30AM.
— Bar & Bench (@barandbench) December 17, 2019