ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಜೀವ ಉಳಿಸಿಕೊಳ್ಳಲು ಮತ್ತೊಂದು ಹೊಸ ಪ್ರಯತ್ನ ಆರಂಭಿಸಿದ್ದಾರೆ.
ಗಲ್ಲು ಶಿಕ್ಷೆಗೆ 10 ದಿನಗಳು ಬಾಕಿ ಇರುವಾಗ ದೋಷಿ ವಿನಯ್ ಶರ್ಮಾ ಕ್ಷಮಾದಾನ ಕೋರಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಅರ್ಜಿ ಸಲ್ಲಿಸಿದ್ದಾನೆ. ಇದನ್ನೂ ಓದಿ: ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್ – ಮಾರ್ಚ್ 20ಕ್ಕೆ ಡೆತ್ ವಾರೆಂಟ್ ಜಾರಿ
ಹೈ ಕೋರ್ಟ್, ಸುಪ್ರೀಂಕೋರ್ಟ್, ರಾಷ್ಟ್ರಪತಿಗಳಿಗೆ ಕ್ಷಮದಾನ ಅರ್ಜಿ ಸಲ್ಲಿಸಿ ವಜಾ ಆದ ಬಳಿಕ ನಾಲ್ವರು ಅಪರಾಧಿಗಳು ಮತ್ತೊಂದು ಹೊಸ ಪ್ರಯತ್ನ ಆರಂಭಿಸಿದ್ದು, ಕಡೆಯ ಕಾನೂನು ಅವಕಾಶ ಬಳಸಿಕೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಮೂರು ಬಾರಿ ಗಲ್ಲು ಶಿಕ್ಷೆಗೆ ಡೆತ್ ವಾರೆಂಟ್ ಜಾರಿಯಾಗಿದ್ದ ನಾಲ್ವರು ಅಪರಾಧಿಗಳನ್ನು ಬೇರೆ ಬೇರೆ ಕಾನೂನು ಹೋರಾಟಗಳ ನೆಪವೊಡ್ಡಿ ಗಲ್ಲು ಶಿಕ್ಷೆಯಿಂದ ಪಾರಾಗಿದ್ದರು. ಈಗ ನಾಲ್ಕನೇ ಬಾರಿಗೆ ಡೆತ್ ವಾರಂಟ್ ಜಾರಿಯಾಗಿದ್ದು, ಮಾರ್ಚ್ 20ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ.