ನವದೆಹಲಿ: 2012ರ ಡಿಸೆಂಬರ್ 16ರಂದು ಸ್ನೇಹಿತನ ಜೊತೆ ಸಿನಿಮಾ ನೋಡಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಬರುವ ವೇಳೆ ಘೋರ ದುರಂತ ನಡೆದಿತ್ತು. ಇಬ್ಬರಿಗೆ ಡ್ರಾಪ್ ನೀಡುವ ನೆಪದಲ್ಲಿ ಕಾಮುಕುರನ್ನ ಬಸ್ ಗೆ ಹತ್ತಿಸಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ಬಸ್ ನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆಯ ಗುಪ್ತಾಂಗಕ್ಕೆ ರಾಡ್‍ನಿಂದ ಚುಚ್ಚಿ ಹಿಂಸೆ ಕೊಟ್ಟಿದ್ದರು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಬಸ್ ನಿಂದ ತಳ್ಳಿ ಕಾಮುಕರು ಪರಾರಿಯಾಗಿದ್ರು. ಯುವತಿ ಮತ್ತು ಸ್ನೇಹಿತನನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Advertisement
ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 13 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿದ್ದ ಯುವತಿ, ಚಿಕಿತ್ಸೆ ಫಲಿಸದೇ ಡಿ. 29ರಂದು ಸಾವನ್ನಪ್ಪಿದ್ದರು. ಇದನ್ನೂ ಓದಿ: ನಿರ್ಭಯಾ ಆತ್ಮಕ್ಕೆ ಮುಕ್ತಿ- ಕೊನೆಗೂ ಗಲ್ಲು ಆಯ್ತು ಹಂತಕರಿಗೆ
Advertisement
ಘಟನೆ ನಡೆದ 72 ಗಂಟೆಯಲ್ಲಿ ಪೊಲೀಸರು ಕಾಮುಕನ್ನು ಬಂಧಿಸಿದ್ದರು. ಡಿಸೆಂಬರ್ 17, 2012ರಂದು 17 ವರ್ಷದ ಓರ್ವ ಅಪ್ರಾಪ್ತ ಸೇರಿ 6 ಆರೋಪಿಗಳ ಗುರುತು ಪತ್ತೆಯಾಗಿತ್ತು. ಡಿಸೆಂಬರ್ 18ರಂದು ಅಪ್ರಾಪ್ತ ಬಾಲಕ ಸೇರಿ ಆರು ಆರೋಪಿಗಳ ಬಂಧನವಾಗಿತ್ತು. ದೆಹಲಿಯಲ್ಲಿ ಬಾಲಾಪರಾದಿ, ಹರಿಯಾಣ, ಬಿಹಾರದಲ್ಲಿ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 20 ನಿರ್ಭಯಾ ಸ್ನೇಹಿತ ಮತ್ತು ಡಿಸೆಂಬರ್ 21ರಂದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಹಂತಕರಿಗೆ ಗಲ್ಲು-ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಮೊದಲ ಪ್ರತಿಕ್ರಿಯೆ
Advertisement
Advertisement
ಜನವರಿ 3, 2013ರಂದು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಮಾರ್ಚ್ 11, 2013ರಂದು ಪ್ರಕರಣದಲ್ಲಿ ಅಪರಾಧಿಯಾಗಿದ್ದ ರಾಮ್‍ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಆಗಸ್ಟ್ 31, 2013ರಂದು ಬಾಲಾಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಬಾಲಮಂದಿರಕ್ಕೆ ರವಾನೆ ಮಾಡಲಾಗಿತ್ತು. ಸೆಪ್ಟೆಂಬರ್ 13, 2013ಕ್ಕೆ ಉಳಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ದೆಹಲಿಯ ಸಾಕೇತ್ ನ್ಯಾಯಾಲಯ ಆದೇಶ ನೀಡಿತ್ತು. ಮಾ.15, 2014ರಂದು ಕೆಳ ನ್ಯಾಯಾಲಯದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಇನ್ನು ಶಿಕ್ಷೆಗೆ ಗುರಿಯಾಗಿದ್ದ ಬಾಲಾಪರಾಧಿ ಡಿ.18, 2015ರಂದು ಬಿಡುಗಡೆ ಹೊಂದಿದ್ದನು. ಇದನ್ನೂ ಓದಿ: ನಿರ್ಭಯಾ ಬದುಕಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು: ವಕೀಲೆ ಸೀಮಾ
ಏ.3, 2016 ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಪೀಠದಲ್ಲಿ ಕರ್ನಾಟಕದ ಇಬ್ಬರು ಜಡ್ಜ್‍ಗಳು (ವಿ.ಗೋಪಾಲ ಗೌಡ ಹಾಗೂ ಕುರಿಯನ್ ಜೋಸೆಫ್) ಇದ್ದರು. ಜುಲೈ 11, 2016ರಲ್ಲಿ ನ್ಯಾಯಾಪೀಠದ ಬದಲಾವಣೆ ಆಯ್ತು. ನ್ಯಾ. ದೀಪಕ್ ಮಿಶ್ರಾ, ಆರ್.ಭಾನುಮತಿ, ಅಶೋಕ್ ಭೂಷಣ್ ಒಳಗೊಂಡ ಹೊಸ ಸಮಿತಿ ನೇಮಕಗೊಂಡಿತು. ಇದನ್ನೂ ಓದಿ: ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?
ಸೆಪ್ಟೆಂಬರ್ 2, 2016 ಡಿಫೆನ್ಸ್ ಅಡ್ವೊಕೇಟ್ ಎಂ.ಎಲ್. ಶರ್ಮಾ ಅಹವಾಲು ಸಲ್ಲಿಕೆಯಾಯ್ತು. ಮಾ.6, 2017ಕ್ಕೆ ಆರೋಪಿಗಳಿಂದ ಹೆಚ್ಚುವರಿ ಅಫಡವಿಟ್ ಸಲ್ಲಿಕೆ. ಮಾರ್ಚ್ 27, 2017ಕ್ಕೆ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪನ್ನು ಕಾಯ್ದಿರಿಸಲಾಯ್ತ. ಮೇ 5, 2017ರಂದ ಸುಪ್ರೀಂ ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿ ತೀರ್ಪು ನೀಡಿತು. ನವೆಂಬರ್ 13, 2017ಕ್ಕೆ ದೋಷಿಗಳು ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿದರು. ಜುಲೈ 9, 2018ಕ್ಕೆ ಪುನರ್ ಪರಿಶೀಲನಾ ಅರ್ಜಿ ತಿರಸ್ಕೃತಗೊಳಿಸಿ ನ್ಯಾಯಾಲಯ ಗಲ್ಲು ಖಾಯಂಗೊಳಿಸ್ತು. ಡಿಸೆಂಬರ್ 6, 2019 ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕøತಗೊಳಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇಂದು ನಾಲ್ವರನ್ನು ಏಕಕಾಲದಲ್ಲಿ ಗಲ್ಲಿಗೆ ಏರಿಸಲಾಯ್ತು. ಇದನ್ನೂ ಓದಿ: ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ: ನಿರ್ಭಯಾ ತಂದೆ