ಮಂಡ್ಯ: 5 ವರ್ಷಗಳ ಹಿಂದೆ ನಷ್ಟದ ನೆಪವೊಡ್ಡಿದ ಸರ್ಕಾರ ಜಿಲ್ಲೆಯ ಪಾಂಡವಪುರದ PSSK ಸಹಕಾರಿ ಸ್ವಾಮ್ಯದ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಯನ್ನ (Sugar factory )ಖಾಸಗೀಕರಣಗೊಳಿಸಿತ್ತು. ಆರಂಭದಲ್ಲಿ ನೌಕರರನ್ನ ಕೆಲಸದಿಂದ ವಜಾ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದ ಆಡಳಿತ ಮಂಡಳಿ, ಇದೀಗ ನೌಕರರನ್ನು ಕಿತ್ತು ಬೀಸಾಕಿದೆ. ಕಂಪನಿಯ ನಿರ್ಧಾರ ಖಂಡಿಸಿ ಕಾರ್ಖಾನೆಯ ಚಿಮಿನಿ ಏರಿರುವ ಕಾರ್ಮಿಕ ಮತ್ತೆ ಕೆಲಸಕ್ಕೆ ಸೇರಿಕೊಳ್ಳುವಂತೆ ವಿನೂತನ ಪ್ರತಿಭಟನೆ ಮಾಡ್ತಿದ್ದಾನೆ. ಆತನನ್ನು ಕೆಳಗಿಳಿಸಲು ಅಧಿಕಾರಿಗಳು ಹಾಗೂ ಕಾರ್ಖಾನೆ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.
Advertisement
ಚಿಮಿನಿ ಏರಿ ಕುಳಿತ ವ್ಯಕ್ತಿ, ಆ ವ್ಯಕ್ತಿ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಜನರು. ಈ ದೃಶ್ಯ ಕಂಡು ಬಂದದ್ದು, ಮಂಡ್ಯದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ. ಕೆಲಸದಿಂದ ವಜಾಗೊಳಿಸಿದ್ರು ಅನ್ನೋ ಕಾರಣಕ್ಕೆ ಚಿಮಿನಿ ಏರಿದ್ದ ನೊಂದ ಕಾರ್ಮಿಕ ರಾಮಕೃಷ್ಣ ಆಡಳಿತ ಮಂಡಳಿಯ ನಿರ್ಧಾರವನ್ನು ವಿನೂತನವಾಗಿ ಖಂಡಿಸಿದ್ರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ
Advertisement
ಅಂದಹಾಗೇ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಒಂದು ಕಾಲದಲ್ಲಿ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿತ್ತು. ಕಳೆದ 5 ವರ್ಷಗಳ ಹಿಂದೆ ಅಂದಿನ ಸರ್ಕಾರ ನಷ್ಟದ ಕಾರಣ ಹೇಳಿ ಮುರುಗೇಶ್ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಸಂಸ್ಥೆಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಕರಾರು ವೇಳೆ PSSK ನೌಕರರನ್ನ ಮುಂದುವರಿಸುವಂತೆ ಹಾಗೂ ನೌಕರರು ಒಪ್ಪಿದ್ದಲ್ಲಿ VRS ನೀಡುವಂತೆ ಸೂಚಿಸಲಾಗಿತ್ತು. ಆರಂಭದಲ್ಲಿ ನಿಯಮ ಪಾಲಿಸುವುದಾಗಿ ಹೇಳಿದ್ದ ನಿರಾಣಿ ಶುಗರ್ಸ್‌ನವರು ಕಾಲ ಕಳೆದಂತೆ ಒಂದೊಂದೇ ಒಪ್ಪಂದಗಳನ್ನ ಬ್ರೇಕ್ ಮಾಡ್ತಾ ಬರ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕಳೆದ ಹತ್ತಾರು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ 45 ಜನ ನೌಕರರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ. ಇದರಿಂದ ಕಾರ್ಖಾನೆ ಉದ್ಯೋಗ ನಂಬಿ ಬದುಕು ಸಾಗಿಸುತ್ತಿದ್ದ ಕುಟುಂಬಗಳೀಗ ಬೀದಿಗೆ ಬಿದ್ದಂತಾಗಿದೆ.
Advertisement
Advertisement
ಕಾರ್ಖಾನೆ ಆಡಳಿತ ಮಂಡಳಿ ನಿರ್ಧಾರ ವಿರುದ್ಧ ಕಳೆದ ಒಂದೂವರೆ ತಿಂಗಳಿನಿಂದ ವಜಾಗೊಂಡ ನೌಕರರು ಕಾರ್ಖಾನೆ ಆವರಣದಲ್ಲೇ ಉದ್ಯೋಗಕ್ಕಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ನೌಕರರ ಸಂಕಷ್ಟಕ್ಕೆ ನಿರಾಣಿ ಶುಗರ್ಸ್‌ನವರು ಕ್ಯಾರೆ ಅಂತಿಲ್ಲ. ಇದರಿಂದ ಮನನೊಂದ ರಾಮಕೃಷ್ಣ ಎಂಬ ನೌಕರನೊಬ್ಬ ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಕಾರ್ಖಾನೆಯ ಚಿಮಿನಿ ಏರಿ ವಿನೂತನ ಹೋರಾಟಕ್ಕೆ ಮುಂದಾಗಿದ್ದಾನೆ. ಮತ್ತೆ ಕೆಲಸಕ್ಕೆ ಪಡೆಯುವವರೆಗೂ ಕೆಳಗೆ ಇಳಿಯಲ್ಲ ಎಂದು ಹಠ ಹಿಡಿದು ಕುಳಿತಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿಗಳ 13.4 ಲಕ್ಷ ಹೆಚ್ಚುವರಿ ಶುಲ್ಕ ವಾಪಸ್ ಕೊಡಿಸಿದ ಶುಲ್ಕ ನಿಯಂತ್ರಣ ಸಮಿತಿ
ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿ ವರ್ಗ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ರು. ಈ ವೇಳೆ ಚಿಮಿನಿ ಏರಿರುವ ನೌಕರ ರಾಮಕೃಷ್ಣನ ಮನವೊಲಿಸಿ, ಕೆಳಗಿಳಿಸುವ ಪ್ರಯತ್ನ ಮಾಡಿದ್ರು, ಆತ ಪಟ್ಟು ಬಿಡಲಿಲ್ಲ. ತಹಶಿಲ್ದಾರ್ ಸಂತೋಷ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ವಜಾಗೊಂಡ ನೌಕರರ ಜೊತೆ ಸಭೆ ನಡೆಸಿದ್ರು. ಕೋರ್ಟ್ ಆದೇಶ ಉಲ್ಲಂಘಿಸಿ ನೌಕರರನ್ನು ಕೆಲಸದಿಂದ ತೆಗೆದಿರುವ ಬಗ್ಗೆ ಆಡಳಿತ ಮಂಡಳಿಯನ್ನ ತಹಶಿಲ್ದಾರ್ ಮತ್ತು ಸ್ಥಳೀಯ ಮುಖಂಡರು ತರಾಟೆ ತೆಗೆದುಕೊಂಡ್ರು. ಬೇಡಿಕೆ ಈಡೇರಿಸಿ ಚಿಮಿನಿ ಏರಿದ ನೌಕರನನ್ನ ಕೆಳಗಿಳಿಸುವಂತೆ ಸೂಚಿಸಿದ್ರು.
ಕಾರ್ಖಾನೆ ಆವರಣದಲ್ಲಿ ಆತಂಕದ ವಾತಾವರಣ ಮನೆಮಾಡಿದ್ರೆ. ನಿರಾಣಿ ಶುಗರ್ಸ್ ಕಂಪನಿಯ ಮೊಂಡಾಟ ವಜಾಗೊಂಡ ನೌಕರರ ನೋವಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಿದೆ. ಇನ್ನಾದರು ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಗ್ಯಾರಂಟಿಗಳಿಗೆ ಮೀಸಲಿಟ್ಟ ಹಣ ಯಾರು ನುಂಗುತ್ತಿದ್ದಾರೆ? – ರಾಜ್ಯ ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ