ಕಲಬುರಗಿ: ಕೋರ್ಟ್‌ನಿಂದ ವಾರೆಂಟ್ (Warrant) ಜಾರಿಯಾದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಆರೋಪದ ಮೇಲೆ ಜೈ ಭಾರತ್ ಮಾತಾ ಸೇವಾ ಸಮಿತಿಯ (Bharath Matha Seva Samiti) ಸಂಸ್ಥಾಪಕ ಅಧ್ಯಕ್ಷ, ನಿರಗುಡಿ ಹವಾ ಮಲ್ಲಿನಾಥ್ ಮುತ್ಯಾನನ್ನು (Mallinath Muthya) ಸೋಮವಾರ ಎಂ.ಬಿ ನಗರ ಪೊಲೀಸರು ಬಂಧಿಸಿದ್ದಾರೆ.
2017ರ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕಲಬುರಗಿಯ (Kalaburagi) ಎರಡನೇ ಹೆಚ್ಚುವರಿ ನ್ಯಾಯಲಯದಿಂದ ವಾರೆಂಟ್ ಜಾರಿಗೊಳಿಸಿತ್ತು. ನೋಟಿಸ್ ಜಾರಿಯಾದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಹವಾ ಮಲ್ಲಿನಾಥ್ ಮುತ್ಯಾನನ್ನು ಸೋಮವಾರ ಕೋರ್ಟ್‌ಗೆ ಹಾಜರಾದ ಸಂದರ್ಭದಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಮತಾಂಧತೆ ಹೆಚ್ಚಾಗುತ್ತೆ, ಧಾರ್ಮಿಕ ಮುಖಂಡನ ಸಾವಾಗುತ್ತೆ: ಕೋಡಿಮಠದ ಶ್ರೀ ಭವಿಷ್ಯ
Advertisement
Advertisement
2017ರಲ್ಲಿ ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಪ್ರಕಾಶ್ ಸ್ವಾಮೀಜಿ ಹಾಗೂ ಹವಾ ಮಲ್ಲಿನಾಥ್ ಮುತ್ಯಾನ ಮೇಲೆ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧ ಮಲ್ಲಿನಾಥ್ ಮುತ್ಯಾನಿಗೆ ನ್ಯಾಯಲಯ ನೋಟಿಸ್ ನೀಡಿತು. ಆದರೂ ಮುತ್ಯಾ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ವಾರೆಂಟ್ ಜಾರಿಗೊಂಡ ಹಿನ್ನೆಲೆ ಸೋಮವಾರ ಕೋರ್ಟ್ ಮುಂದೆ ಹವಾ ಮಲ್ಲಿನಾಥ್ ಮುತ್ಯಾ ಹಾಜರಾಗಿದ್ದರು. ಆಗ ಮಲ್ಲಿನಾಥ್ ಮುತ್ಯಾನನ್ನು ವಶಕ್ಕೆ ಪಡೆದ ನ್ಯಾಯಾಲಯ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್ ಖಂಡ್ರೆ ಹೇಳಿದ್ದೇನು?
Advertisement