ಅಬುಧಾಬಿ: ಕೇರಳದ ಹಣ್ಣು ಮತ್ತು ತರಕಾರಿಗಳ ಆಮದು ಮೇಲೆ ಯುನೈಟೆಡ್ ಅರಬ್ ಎಮಿರೈಟರ್ಸ್ (ಯುಎಇ) ನಿಷೇಧ ಹೇರಿದೆ.
ಮೇ 29ರಿಂದ ಆಮದನ್ನು ನಿಲ್ಲಿಸಿದ್ದು, ನಿಪಾ ವೈರಾಣು ತಮ್ಮ ದೇಶಕ್ಕೂ ಕಾಲಿಡಬಹುದು ಎಂದು ಜಾಗೃತಿ ವಹಿಸಿರುವ ಯುಎಇ ಈ ನಿರ್ಧಾರಕ್ಕೆ ಮುಂದಾಗಿದೆ. ಇಲ್ಲಿನ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯವು ಕೇರಳದ ಹಣ್ಣು ಹಾಗೂ ತರಕಾರಿಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂಬ ಆದೇಶ ಹೊರಡಿಸಿದೆ. ಇದನ್ನು ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು
Advertisement
Advertisement
ನಿಪಾ ತಮ್ಮ ದೇಶಕ್ಕೆ ಬಾರದಂತೆ ತಡೆಯಲು ಮುಂದಾಗಿರುವ ಸಚಿವಾಲಯವು ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಅಬುಧಾಬಿ ಫುಡ್ ಕಂಟ್ರೋಲ್ ಅಥಾರಿಟಿ, ದುಬೈ ಪುರಸಭೆ ಸೇರಿದಂತೆ ಶಾರ್ಜಾ, ಅಜ್ಮಾನ್, ಉಮ್ ಅಲ್ ಕ್ವೈನ್, ರಸ್ ಅಲ್ ಖೈಮಾ ಮತ್ತು ಫ್ಯೂಜೈರಾ ಪ್ರದೇಶದಲ್ಲಿ ಕೇರಳದಿಂದ ಆಮದಾಗುವ ತರಕಾರಿ ಹಾಗೂ ಹಣ್ಣುಗಳನ್ನು ನಿಷೇಧಿಸಬೇಕು ಎಂದು ಆದೇಶ ನೀಡಲಾಗಿದೆ.
Advertisement
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಟಿಓ) ವೆಬ್‍ಸೈಟ್‍ನಲ್ಲಿ ನಿಪಾ ವೈರಸ್ ಮಾಹಿತಿಯ ಕುರಿತು ಪ್ರಕಟಿಸಲಾಗಿದೆ. ಇದರಿಂದಾಗಿ ಯುಎಇಗೆ ಕೇರಳದ ತರಕಾರಿ ಹಾಗೂ ಹಣ್ಣುಗಳನ್ನು ಆಮದು ಮಾಡಿಕೊಳ್ಳಲು ಹಿಂದೇಟು ಹಾಕಿದೆ.