ತಿರುವನಂತಪುರಂ: ರಾಜ್ಯದಲ್ಲಿ ನಿಪಾ ವೈರಸ್ ನಿಯಂತ್ರಣದಲ್ಲಿದ್ದು, ಜುಲೈ 30ರಂದು ಫಲಿತಾಂಶ ತಿಳಿಯಲಿದೆ ಎಂದು ಬುಧವಾರ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಹೇಳಿದ್ದಾರೆ.
ವೈರಸ್ ಹರಡುವಿಕೆ ನಿಯಂತ್ರಣದಲ್ಲಿದ್ದು, ಕಳೆದ 2-3 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಮೇ 31 ರಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಮುಂದಿನ 42 ದಿನ (ಜುಲೈ 30)ರ ವರೆಗೆ ಕಾದು ನೋಡಬೇಕಿದೆ ಎಂದು ಅವರು ತಿಳಿಸಿದರು.
Advertisement
ನಿಪಾ ವೈರಸ್ ನಿಯಂತ್ರಣಕ್ಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಶ್ರಮಿಸಿವೆ. ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು ಹಾಗೂ ಕಾರ್ಯದರ್ಶಿಗಳು ಶ್ರಮಕ್ಕೆ ಸಚಿವೆ ಶೈಲಜಾ ಧನ್ಯವಾದ ಸಲ್ಲಿಸಿದ್ದಾರೆ.
Advertisement
No new cases have appeared in last 2-3 days. We have to wait till July 30th, because the last case occurred on May 31st & we have to take at least 42 days after that as incubation period. I think no more cases will occur: KK Shailaja Teacher, Kerala Health Minister on #NipahVirus pic.twitter.com/3Oo6CrTU3J
— ANI (@ANI) June 13, 2018
Advertisement
ಸದ್ಯ 18 ವೈರಸ್ ಹೊಂದಿರುವ ಪ್ರಕರಣಗಳು ಕೋಜಿಕ್ಕೋಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅದರಲ್ಲಿ 16 ಜನರು ಮೃತಪಟ್ಟಿದ್ದಾರೆ. ಇನ್ನು 2 ಜನರು ಗುಣಮುಖರಾಗಿದ್ದಾರೆ. ಮೇ ತಿಂಗಳಿನಲ್ಲಿ ಸುಮಾರು 2,000 ಜನರು ನಿಪಾ ವೈರಸ್‍ಗೆ ಒಳಗಾಗಿದ್ದರು.
Advertisement
ಮೇ ತಿಂಗಳಿನಲ್ಲಿ ಸುಮಾರು 16 ಜನರು ನಿಪಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಜೂನ್ 11 ರವರೆಗೆ ಕೋಜಿಕ್ಕೋಡ್ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡ ಹೇಳಿದರು.