ಕೊರೊನಾ ಬೆನ್ನಲ್ಲೇ 11 ಮಂದಿಯಲ್ಲಿ ನಿಫಾ ರೋಗ ಲಕ್ಷಣ- 3 ಜಿಲ್ಲೆಗಳಲ್ಲಿ ಹೈ ಅಲರ್ಟ್

Public TV
3 Min Read
BAAVALI JWARA 5

– ಅಗತ್ಯ ಕ್ರಮಕ್ಕೆ ಕೇಂದ್ರ ಸೂಚನೆ
– ವೈರಸ್ ಹರಡುವುದು ಹೇಗೆ..?
– ರೋಗದ ಲಕ್ಷಣಗಳೇನು..?

ತಿರುವನಂತಪುರಂ: ಮಹಾಮಾರಿ ಕೊರೊನಾ ವೈರಸ್ ಬೆನ್ನಲ್ಲೇ ಇದೀಗ 11 ಜನರಲ್ಲಿ ನಿಫಾ ರೋಗ ಲಕ್ಷಣ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಗೆ ಹೊಂದಿಕೊಂಡಿರೋ ಎರಡು ಜಿಲ್ಲೆ ಸೇರಿ 3 ಜಿಲ್ಲೆಗಳಲ್ಲಿ ಹೈ ಅಲರ್ಟ್‍ಗೆ ಕೇಂದ್ರ ಸೂಚನೆ ನೀಡಿದೆ.

ಕೇರಳದಲ್ಲಿ ನಿಫಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ. ವೈರಸ್‍ಗೆ ಬಲಿಯಾದ 12 ವರ್ಷದ ಬಾಲಕನ ಮನೆಗೆ ಕೇಂದ್ರ ತಂಡ ಭೇಟಿ ನೀಡಿದೆ. ಈ ತಂಡ ನೀಡಿದ ವರದಿ ಆಧರಿಸಿ ಅಗತ್ಯವಾಗಿರುವ ಮುನ್ನೆಚ್ಚರಿಕೆ ವಹಿಸುವಂತೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

Nipah Virus 1

ಕೋಝಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಈ ಜಿಲ್ಲೆಯ ಗಡಿಯಲ್ಲಿರುವ ವಯನಾಡು, ಕಣ್ಣೂರು, ಮಲಪ್ಪುರಂ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಪ್ರಾಥಮಿಕ, ಎರಡನೇ ಹಂತದ ಸಂಪರ್ಕ ಪತ್ತೆ ಹಚ್ಚಿ. ಹೈ ರಿಸ್ಕ್, ಲೋ ರಿಸ್ಕ್ ಎಂದು ಎರಡು ವಿಭಾಗ ಮಾಡಲು ಸೂಚನೆ ನೀಡಿದೆ. {ವಯನಾಡು (ಚಾಮರಾಜನಗರ, ಮೈಸೂರು) ಹಾಗೂ ಕಣ್ಣೂರು (ಕೊಡಗು) ಜಿಲ್ಲೆಗೆ ಹೊಂದಿಕೊಂಡಿವೆ}.

BAAVALI JWARA 2

1 ಪ್ರಕರಣ – 251 ಸಂಪರ್ಕಿತರು, 54 ಹೈರಿಸ್ಕ್ ಸಂಪರ್ಕ ಹೊಂದಿದ್ದಾರೆ. ನಿಫಾ ರೋಗ ಲಕ್ಷಣ 11 ಮಂದಿಯಲ್ಲಿ ಕಾಣಿಸಿದೆ. ನಿಫಾದಿಂದ ಸಾವನ್ನಪ್ಪಿದ 12 ವರ್ಷದ ಬಾಲಕನ ಒಟ್ಟು 251 ಕಾಂಟ್ಯಾಕ್ಟ್‍ಗಳು ಪತ್ತೆಯಾಗಿವೆ. ಇವರಲ್ಲಿ 54 ಹೈರಿಸ್ಕ್ ಸಂಪರ್ಕ ಪತ್ತೆಯಾಗಿದೆ. ಹೈರಿಸ್ಕ್ 54 ಮಂದಿಯಲ್ಲಿ 30 ಆರೋಗ್ಯ ಸಿಬ್ಬಂದಿ, 39 ಸಂಪರ್ಕಿತರು ಆಸ್ಪತ್ರೆ ಐಸೋಲೇಷನ್ ವಾರ್ಡಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿಯಲ್ಲಿ ನಿಫಾ ರೋಗ ಲಕ್ಷಣ ಕಾಣಿಸಿಕೊಂಡಿದೆ.

NIPAH BAWALI

ನಿಫಾ ರೋಗ ಕಾಣಿಸಿಕೊಂಡಿರುವ 8 ಮಂದಿಯ ಸ್ಯಾಂಪಲ್ ಫೈನಲ್ ಪರಿಶೋಧನೆಗಾಗಿ ಪುಣೆ ಎನ್.ಐ.ವಿ.ಗೆ ರವಾನೆ ಮಾಡಲಾಗಿದೆ. 251ರಲ್ಲಿ 129 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಸದ್ಯ ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಇಂದಿನಿಂದ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಲ್ಲೇ ಟೆಸ್ಟ್ ಮಾಡಲಾಗುತ್ತದೆ. ಪುಣೆ NIV ಯಿಂದ ತಜ್ಞರ ತಂಡ ಆಗಮನವಾಗಿದೆ. ಇದನ್ನೂ ಓದಿ: ‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?

NIPAH BAWALI 2

ಇದುವರೆಗೆ ಸ್ಯಾಂಪಲ್‍ಗಳನ್ನು ಪುಣೆಗೆ ಕಳಿಸುತ್ತಿದ್ದರು. ಈಗಾಗಲೇ 8 ಜನರ ಸ್ಯಾಂಪಲ್ ಪುಣೆ ತಲುಪಿದೆ. ಇನ್ನುಳಿದ ಮೂವರ ಸ್ಯಾಂಪಲ್ ಕೋಝಿಕ್ಕೋಡ್ ನಲ್ಲೇ ಪರಿಶೋಧನೆ ಮಾಡಲಾಗಿದೆ. ಈಗಾಗಲೇ ಸ್ಯಾಂಪಲ್ ಟೆಸ್ಟ್‌ಗೆ ಬೇಕಾದ ಸಿದ್ಧತೆ ಪೂರ್ಣಗೊಳಿಸಿರುವ ಪುಣೆ ಟೀಂ ಮಾಡಿಕೊಂಡಿದೆ. ಪಾಯಿಂಟ್ ಆಫ್ ಕೇರ್ ಟೆಸ್ಟ್ ಹಾಗೂ RTPCR ಟೆಸ್ಟ್ NIV ಟೀಂ ನಡೆಸಲಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

ನಿಫಾ ವೈರಸ್ ಬಂದು ಕೋವಿಡ್ ವ್ಯಾಕ್ಸಿನ್ ಹಾಕುತ್ತಿಲ್ಲ. ಎರಡು ದಿನ ಕೋವಿಡ್ ವ್ಯಾಕ್ಸಿನೇಷನ್ ಸಂಪೂರ್ಣ ಸ್ಥಗಿತವಾಗಿದೆ. ಕೋಝಿಕ್ಕೋಡ್ ತಾಲೂಕಿನಾದ್ಯಂತ ಎರಡು ದಿನ ವ್ಯಾಕ್ಸಿನ್ ನೀಡದಿರಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ.

ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ:
ಆ್ಯಂಟಿಬಾಡಿ ಔಷಧಿ ರಿಬಾವೈರಿನ್ ಹಾಗೂ ಪಿಪಿಇ ಕಿಟ್‍ಗಳ ಸ್ಟಾಕ್ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಕೋಝಿಕ್ಕೋಡ್ ಸರ್ಕಾರಿ ಮೆಡಿಕಲ್ ಕಾಲೇಜನ್ನು ಚಿಕಿತ್ಸಾ ಕೇಂದ್ರವನ್ನಾಗಿ ಮಾಡಿ. ಅಂಬುಲೆನ್ಸ್ ಹಾಗೂ ತರಬೇತಿ ಮುಗಿಸಿದ ನುರಿತ ಸಿಬ್ಬಂದಿಯನ್ನು ಸಿದ್ಧವಾಗಿಟ್ಟುಕೊಳ್ಳಿ ಎಂದು ಈಗಾಗಲೇ ಸೂಚನೆ ನೀಡಲಾಗಿದೆ.

NIPAH BAWALI 3

ನಿಫಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

BAAVALI JWARA 3

ವೈರಸ್ ಹೇಗೆ ಹರಡುತ್ತದೆ..?
ಬಾವಲಿಗಳಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅಲ್ಲದೆ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ). ಪ್ರಾಣಿಗಳಿಂದ ಮನುಷ್ಯರಿಗೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.

ನಿಫಾ ವೈರಸ್ ಲಕ್ಷಣಗಳೇನು?
– ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
– ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
– ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
– ಬಳಿಕ ಪ್ರಜ್ಞಾಹೀನರಾಗುತ್ತಾರೆ
– ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
– ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದ.

Nipah Virus

ಎಚ್ಚರಿಕೆಯಿಂದಿರಿ..!
– ಪ್ರಾಣಿ ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬೇಡಿ
– ಒಂದು ವೇಳೆ ನೀವು ರೋಗಿಯ ಜೊತೆಗಿದ್ದರೆ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಿ
– ರೋಗಿಯ ಚಿಕಿತ್ಸೆ ವೇಳೆ ಮುಖಕ್ಕೆ ಮಾಸ್ಕ್, ಕೈಗವಚ ಧರಿಸಿ
– ಬಾವಲಿಗಳ ಸಂಖ್ಯೆ ಹೆಚ್ಚಿರುವ ಕಡೆ ಸಂಗ್ರಹಿಸುವ ಶೇಂದಿ, ಪಾನೀಯಗಳನ್ನು ಸೇವಿಸಬೇಡಿ

Share This Article
Leave a Comment

Leave a Reply

Your email address will not be published. Required fields are marked *